ಬೆಳಗುವ ಕಲೆ
ಕವನ
ಹೊನ್ನಿನ ಅಂದದ ಹಣತೆ ತಯಾರಿ
ಬೆನ್ನಿನ ಹಿಂದಿನ ಅರಿವಿರದ ಶ್ರಮದಿ
ಕನ್ನಡಿಯಾಗಲಿ ಬದುಕ ಬೆಳಕಿಗೆ
ಮನ್ನಣೆ ಕತ್ತಲು ಕರಗಲು ಜಗದಿ.
ಅರಳುತಾ ನಗುವ ಚೆಲುವ ಮೊಗ್ಗಿನಂತೆ
ಬರುತಲಿದೆ ತಾನು ಮಣ್ಣಿನಿಂದೆದ್ದು
ಕರಗತ ಕೈಗಳಿಗೆ ಕುಶಲತೆಯು
ಮೆರಗು ಕಲೆಯಲಿ ಮಿಂದೆದ್ದು.
ಓಡುವ ಚರಕ ಕಾಲವು
ಕಾಡುವ ಕಲೆಯು ತಾಳ್ಮೆಯು
ಬಿಡದೇ ದುಡಿವುದು ಕರವು ಕಾಣು
ಜಾಡನು ಹಿಡಿದು ಸಂಕಲ್ಪ ಗೀತೆಯು.
-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್