ಬೆಳಗುವ ಹಣತೆ
ಕವನ
ಮೇಲುಕೀಳೆಂಬುದನ್ನು ಮರೆತುಬಿಡಿ
ಮಾನವೀಯ ಮೌಲ್ಯ ಅರಿತು ನೋಡಿ
ಮೇಲೆಂದು ಮೆರೆಯಬೇಡಿ
ಕೀಳೆಂದು ಕಡೆಗಣಿಸಲುಬೇಡಿ
ಸಕಲರಿಗೂ ಗೌರವವನ್ನು ನೀಡಿ
ಸಕಲವನ್ನು ಸಮಾನವಾಗಿ ನೋಡಿ
!!ಮೇಲುಕೀಳೆಂಬುದನ್ನು ಮರೆತುಬಿಡಿ!!
ಧನಿಕರೆಂದು ದರ್ಪ ಪಡಬೇಡಿ
ಶ್ರಮಿಕರೆಂದು ದುಃಖ ಪಡಬೇಡಿ
ಕಾಲಚಕ್ರದ ಮಹಿಮೆಯ ಮೋಡಿ
ಬದಲಾಗುವುದು ಬದುಕಿನ ಗಾಡಿ
!!ಮೇಲುಕೀಳೆಂಬುದನ್ನು ಮರೆತುಬಿಡಿ!
ಗೆದ್ದವರು ಸೋಲಬಹುದು
ಸೋತವರು ಗೆಲ್ಲಬಹುದು
ವಿಧಿಯಾಟ ವಿಚಿತ್ರ ಅಹುದು
ಪರದಾಟದ ಪ್ರಯತ್ನ ನಮ್ಮದು
!!ಮೇಲುಕೀಳೆಂಬುದನ್ನು ಮರೆತುಬಿಡಿ!!
ಸುಳ್ಳು ಸುಖವ ನೀಡಬಹುದು
ಸತ್ಯ ಸಂಕಟವ ನೀಡಬಹುದು
ಪಾಪಪುಣ್ಯದ ಲೆಕ್ಕ ತುಂಬುತಿಹುದು
ಕರ್ಮಫಲ ತಪ್ಪದೇ ದೊರಕುವುದು
!!ಮೇಲುಕೀಳೆಂಬುದನ್ನು ಮರೆತುಬಿಡಿ!!
ಎಂದಿಗೂ ತರವಲ್ಲ ತಾರತಮ್ಯತೆ
ಇರಬೇಕು ಮನದಲ್ಲಿ ಸೌಮ್ಯತೆ
ಎಂದೆಂದಿಗೂ ಕಾಣಬೇಕು ಸೌಜನ್ಯತೆ
ಬದುಕು ಆಗುವುದು ಆಗ ಬೆಳಗುವ ಹಣತೆ
!!ಮೇಲುಕೀಳೆಂಬುದನ್ನು ಮರೆತುಬಿಡಿ!!
-ತುಂಬೇನಹಳ್ಳಿ ಕಿರಣ್ ರಾಜು ಎನ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್