ಬೆಳಗು ಜಾವದ ನದಿಯ ತೆರೆಯಲಿ

ಬೆಳಗು ಜಾವದ ನದಿಯ ತೆರೆಯಲಿ

ಕವನ

ಬೆಳಗು ಜಾವದ ನದಿಯ ತೆರೆಯಲಿ

ಹೊಳೆವ ಹೊಳೆ ರಶ್ಮಿ ಮುಂದೆ ಮುಂದೆ ಚಲಿಸಿತ್ತ 

 

ಅಲೆಯಾ ಹೊಡೆತಕೆ ತೀರದ ಸೊಬಗು

ಕಣ್ಮನ ಸೆಳೆದಿತ್ತ ಜನರ ಬಳಿಗೇ ಬಂದಿತ್ತ

ಹೃದಯದ ಅಲೆಗಳ ರೀತಿಯೆ ಕುಣಿದು

ಹಬ್ಬವ ಮಾಡಿತ್ತ ಗೆಲುವಲಿ ನಲಿದೂ ನಿಂತಿತ್ತ

 

ಅಂಬಿಗ ನಡೆಸುವ ದೋಣಿಯು ಮುಂದೆ 

ಮುಂದಕೆ ಸಾಗಿತ್ತ ದೋಣಿಯು ಮುಂದಕೆ ಸಾಗಿತ್ತ

ಬಲೆಯನು ಬೀಸುತ ಮೀನನು ಹಿಡಿಯುತ

ದೋಣಿಯು ತುಂಬಿತ್ತ ಮತ್ತೆ ದಡವನು ಸೇರಿತ್ತ

 

ಮರಳ ರಾಶಿಯಲಿ ಮಕ್ಕಳ ಕುಣಿತವು

ನಗುತಲಿ ನಡೆದಿತ್ತ ಬೀಳುತ ಓಟವು ಕಂಡಿತ್ತ

ಹಕ್ಕಿಯು ಚಿಲಿಪಿಲಿ ಗಾನವ ಮಾಡುತ

ಮತ್ಸ್ಯವ ಹಿಡಿದಿತ್ತ ಹಿಡಿದು ನುಂಗುತ ಹಾರಿತ್ತ

 

ಸಂಜೆಯಾಗುತಲೆ ರಂಗನು ಚೆಲ್ಲುತ 

ಸೂರ್ಯನು ಮುಳುಗಿದ್ದ ಜಲವೆಲ್ಲ ಕೆಂಪಗೆ ಆಗಿತ್ತ

ಮನುಜರೆಲ್ಲರು ಮರಳುತ ಮನೆಗೆ

ಕುಶಿಯಲಿ ಸೇರಿತ್ತ ಮಲಗಿ ನಿದ್ರೆಯ ಮಾಡಿತ್ತ

 

ಜೀವನವೆನ್ನುವ ಬಂಡಿಯ ಚಕ್ರವು

ಮುಂದಕೆ ಸಾಗಿತ್ತ ಸಾಗುತ ಬದುಕನು ನಡೆಸಿತ್ತ

ಲೋಕದ ಪಲ್ಲವಿ ಹಾಡುತ ಮುಂದೆ

ಪ್ರಕೃತಿಯು ನಲಿದಿತ್ತ ನಲಿಯುತ ಮುಂದಕೆ ಸಾಗಿತ್ತ

 

-ಹಾ . ಮ ಸತೀಶ

 

ಚಿತ್ರ್