ಬೆಳಗ ಬನ್ನಿ ವೀರರೇ...

ಬೆಳಗ ಬನ್ನಿ ವೀರರೇ...

ಕವನ

ಬೆಳಗ ಬನ್ನಿ ವೀರರೇ

ನನ್ನ ನಾಡ ಶೂರರೇ

ಮಸುಕು ಮಬ್ಬು ಮೂಡುತಿದೆ

ಹಳೆಯ ಬೆಳಕು ಮಾಯುತಿದೆ..

 

ಸಮತೆ ಪ್ರೀತಿ ಹುಡುಕಿರಿ

ಎದೆಯ ಆಳ ಸೀಳಿರಿ

ದ್ವೇಷ ಕಿಚ್ಚ ದೂರಮಾಡಿ

ಶಾಂತಿ ಜ್ಯೋತಿ ಬೆಳಗಿರಿ..

 

ನಮ್ಮ ನಡುವೆ ಕುಂದು ಕೊರತೆ

ಏತಕೀಗ ಜಾತಿ ವರಸೆ

ಉಸಿರ ಗಾಳಿ ಒಂದೇ ಇಲ್ಲಿ 

ಹಸಿರ ನೆಲಕೆ ಭೇದವೆಲ್ಲಿ??

 

ಕಿತ್ತು ತಿನ್ನೋ ಕ್ರೋಧವೇಕೆ

ಹತ್ತು ಜನರ ಶಾಪವೇಕೆ

ಸ್ನೇಹ ಬಳಸಿ ಸಂಗ ಉಳಿಸಿ

ಭ್ರಾತೃ ಭಾವ ಬೆಳೆಸು ಇಲ್ಲಿ..

 

ನಿಮ್ಮ ಮನೆಯ ತುಳಸಿಯಲ್ಲಿ

ನಮ್ಮ ಮನದ ಸುಖವಿದೆ

ಪ್ರಾರ್ಥನೆಯ ನಮಾಜಿನಲ್ಲಿ

ನಿಮಗೂ ಒಂದು ದುಆ ಇದೆ..

 

-’ಮೌನರಾಗ’ ಶಮೀರ್ ನಂದಿಬೆಟ್ಟ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್