ಬೆಳದಿಂಗಳ ರಾತ್ರಿಯಲ್ಲಿ... By Maalu on Wed, 01/23/2013 - 18:36 ಕವನ ಬೆಳದಿಂಗಳ ರಾತ್ರಿಯಲ್ಲಿ ಬೆರಗಾಯಿತು ಕಣ್ಣು ತಿಳಿ ನೀರಿಗೂ ಮೈ ಹೊಳಪಿದೆ ಹೊನ್ನಾಗಿದೆ ಮಣ್ಣು ! ಹರಯದ ಹೊಸ ಆಸೆಯ ಬಿಸಿ ಮಾಡುವ ಸಮಯ ಇರಬಾರದೇ ಇಲ್ಲಿ ನೀನು ನಿಜ ಮಾಡಲು ಭ್ರಮೆಯ! ಸವಿಯಬೇಕು ಮತ್ತೆ ನಾನು ಮನದಿ ಮೆದ್ದ ಬೆಲ್ಲ ನಿನ್ನ ಸಿಹಿ ಮುತ್ತಿಗೆ, ಗೆಳೆಯ ಕಾದಿದೆ ತುಟಿ, ಗಲ್ಲ! -ಮಾಲು Log in or register to post comments