ಬೆಳ್ಳಿ ಮೂಡಿತೋ, ಕತ್ತಲಾಯಿತೋ....

Submitted by SHABEER AHMED2 on Tue, 02/21/2017 - 19:15

ಅದೇನು ವಾಸ್ತವವೋ, ನಟನೆಯೋ ಗೊತ್ತಿಲ್ಲ‌, ಒಟ್ಟಿನಲ್ಲಿ ಭಾರತೀಯರ‌ ಪರಿತಾಪವನ್ನು, ಅವರ‌ ಮನಸ್ಸಿನ‌ ಕ್ರೋಧವನ್ನು ಬೆಂಕಿಯ‌ ಉಂಡೆಯಂತೆ ಹೊರಬಿಟ್ಟರೆ ಒಮ್ಮೆಲೇ ಧಗೆಯೆತ್ತಿ ಈ ಪ್ರಪಂಚವಿಡೀ ಉರಿಯುತ್ತದೋ ಏನೋ,..  ಅಷ್ಟರ‌ ಮಟ್ಟಿಗೆ ಎಲ್ಲಾ ದ್ವೇಷವನ್ನು ತಮ್ಮಲ್ಲಿಯೇ ಜೀರ್ಣಿಸಿಕೊಳ್ಳುತ್ತಾ ಇದ್ದ ಜನರು ಒಂಚೂರು ವಿಶ್ರಾಂತಿ ಬಿಡುತ್ತಿದ್ದಾರೆ. ಕೆಲವೊಂದು ಜನರು ‘ಸಂಸಾರದ‌ ಇವನದೇನು ತಲೆಹರಟೆ? ಎಂದು ವಕ್ರ‌ ಮಾತಿನಲ್ಲಿ ಟ್ವೀಟ್ ಮಾಡುತ್ತಾ ಇದ್ದಾರೆ. ಕಾರಣವಿಷ್ಟೇ ಭಾರತದಲ್ಲಿ ಮೋದಿ ಸರ್ಕಾರ‌ ನೋಟು ಬದಲಾವಣೆಯ‌ ಡ್ರಾಮ‌ ಮಾಡ್ಕೊಂಡು ಪೀಚಿಗೀಡಾಗಿದೆ. ರಾತೋರಾತ್ರಿ ಅದೇನು ಕನಸು ಬಿತ್ತೋ ಎನೋ ಗೊತ್ತಿಲ್ಲ‌. ನಿದ್ರೆಯಿಂದೆದ್ದು ಎಚ್ಚೆತ್ತುಕೊಂಡವನಂತೆ ಆಜ್ನೆ ಹೊರಡಿಸಿಯೇ ಬಿಟ್ಟ.
ಕಪ್ಪು ಹಣ‌ ಬಂದಿತೋ, ಬಂದ‌ ಹಣವೆಲ್ಲಾ ಕಪ್ಪಾಯಿತೋ ಗೊತ್ತಿಲ್ಲ‌.ನಿರ್ಗತಿಕರ‌, ಕೂಲಿಯಾಲುಗಳ‌, ಬಡಪಾಯಿಗಳ‌, ಕ್ರಷಿಕರ‌, ಬೀದಿ ವ್ಯಾಪಾರಸ್ಥರ‌ ಬಾಳು ಮಾತ್ರ‌ ಬೆಳಗಾಗಲೇ ಇಲ್ಲ‌. ಅಂದು ಯಾರೋ ಹೇಳಿದ್ದ‌ ಮಾತು, ಕುಣಿಯಲು ಗೊತ್ತಿಲ್ಲದವನಿಗೆ ನೆಲ‌ ಡೊಂಕು ಎಂದು. ವಿದೇಶದಲ್ಲಿರುವ‌ ಕಪ್ಪು ಹಣ‌ ತರಲಾಗದವರು ಸ್ವದೇಶದಲ್ಲಿ ಕಪ್ಪು ಹಣವನ್ನು ಹುಡುಕಿಕೊಡುತ್ತೇವೆ ಎಂಬ‌ ಅವಾಂತರ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ತಾವರೆ ಅರಳೀತೋ, ತಿರುಗೀತೋ ಗೊತ್ತಿಲ್ಲ‌. ಜನರ‌ ದ್ರಿಷ್ಟಿಗಳು ಮಾತ್ರ‌ ಅದರಿಂದ‌ ಹಿಂದೆ ಸರಿಯಲಿಲ್ಲ‌. ಹೊತ್ತು ಗೊತ್ತು ಏನೂ ತಿಳಿಯದ‌ ಈ ಅಸಾಮಿ ಧಿಡೀರನೇ ಪ್ರತ್ಯಕ್ಷನಾಗಿದ್ದುದರ‌ ಮರ್ಮ‌ ಏನಿರಬಹುದು ? ಎಂಬ‌ ಬಗ್ಗೆ ತಿಳಿದುಕೊಳ್ಳುವ‌ ಸಮಯವೂ ಯಾರಿಗೂ ಕೊಡಲಿಲ್ಲ‌. ಆಗಲೇ ತೆರೆಯಿತು ನೋಡಿ. ಬಿಂದಾಸ್ ದುನಿಯಾ. ಈ ದುನಿಯಾದಲ್ಲಿ ಕ್ಷಣ‌ ಕ್ಷಣಕ್ಕೂ ನಿರೀಕ್ಷಿಸದ್ದೇ ನಡೆಯುತ್ತದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿ ನಿಂತಿತ್ತು.
ವಿಷಯವನ್ನು ಹುಡುಕುತ್ತಾ ಕಾಯುತ್ತಿದ್ದ‌ ಮಾಧ್ಯಮಗಳು ಈ ಸಂಗತಿ ಸಿಕ್ಕಿದ‌ ಕೂಡಲೇ ಎಷ್ಟು ಉದ್ದ‌ ಬೇಕಾದರೂ ಎಳೆಯಬಹುದೆಂಬ‌ ಖುಷಿಯಿಂದ‌ ಹೊಸ‌ ಆವೇಶಭರಿತವಾಗಿ ವಿಜ್ರಂಭಿಸಿದವು. ಕ್ರಷಿಕರಿಗೆ ಬೇಕಾಗಿದ್ದ‌ ಗೊಬ್ಬರಗಳು ಇನ್ನೂ ಮುಟ್ಟಲೇ ಇಲ್ಲ‌. ಸಾಲಗಾರ‌ ಸಾಲ‌ ತೀರಿಸಲು ಬರಲೇ ಇಲ್ಲ‌. ಮದುವೆ ದಿಬ್ಬಣ‌ ಚೆಕ್ ಕ್ಲಿಯರ್ ಆಗದೇ ಹೊರಡಲೇ ಇಲ್ಲ‌. ಕೂಲಿಗಳು, ಕ್ರಷಿಕರು ದಿನ‌ ಹೊತ್ತಿನ‌ ಅಕ್ಕಿ, ಬೇಳೆಗಾಗಿ ಕ್ಯೂನಲ್ಲಿ ಗಂಟೆಗಟ್ಟಲೆ ನಿಂತಿದ್ದರೆ ಉಳ್ಳವರ‌ ಮಕ್ಕಳು ಬಿಂದಾಸ್ ಆಗಿ ಪಿಜ್ಜಾ, ಬರ್ಗರ್ ಕೊಂಡು ಕ್ರಡಿಟ್,ಡೆಬಿಟ್ ಕಾರ್ಡ್ ಗಳಲ್ಲಿ ಪಾವತಿ ಮಾಡಿಕೊಂಡು ತಿನ್ನುತ್ತಿದ್ದರು.  ಆಡುಗೆಗಾಗಿ ಹಾಕಿದ‌ ಅಕ್ಕಿ ಬೇಯುತ್ತಲೇ ಇತ್ತು. ಕೂಲಿಯಾಳುಗಳ‌ ಸಂಬಳದ‌ ಹಣ‌ ನೀಡದೇ ಫಸಲು ಮಾತ್ರ‌ ಬರುತ್ತಿರಲಿಲ್ಲ‌. ಮೀನುಗಾರರ‌ ಬೋಟುಗಳು ಕ್ಯೂನಲ್ಲಿ ನಿಲ್ಲಲಾರದೇ ಹಿಂದೆ ಬಂದವು.  ಬೆಲೆ ಕಮ್ಮಿಯಾದರೂ ಮೀನುಗಳು ಮಾರಾಟವಾಗಲೇ ಇಲ್ಲ‌. ಚಿಲ್ಲರೆಯೆಂತೂ ಇಲ್ಲವೇ ಇಲ್ಲ‌. ಮೀನು ಬುಟ್ಟಿಯ‌ ಒಳಗೊಂದು Swiping machine ಇಡುವ‌ ಮೂರ್ಖತನದ‌ ಉಪಾಯ‌ ಬಂದರೂ ಯಾರಿಗೂ ಹೇಳಗೊಡಲಿಲ್ಲ‌.
ತಮ್ಮ‌ ನಾಯಕ‌ ಒಮ್ಮೆಲೀ ಯೂಟರ್ನ್ ಹೊಡೆದಾಗ‌ ಆನುಯಾಯಿಗಳು ಒಮ್ಮೆಲೇ ಅವಾಕ್ಕಾದರೂ ತಮ್ಮ‌ ನಾಯಕನ‌ ಆಜ್ನೆಯನ್ನು ಪಾಲಿಸಬೇಕೆಂದು ಕೊಂಡು ಅದರೊಂದಿಗೆ ತಾವೂ ಬೆಂಬಲ‌ ತೋರಿಸಿದವು. ಸರಿಯಾದರೂ, ತಪ್ಪಾದರೂ ನಮಗೆ ಜಯಕಾರ‌ ಹಾಕುವ‌ ಒಂದು ಗುಂಪನ್ನು ಪೋಷಿಸಿ ಬೆಳೆಸಿದ್ದೇವೆ ಎಂದು ಬೀಗಿಕೊಳ್ಳುತ್ತಾ ನಾಯಕರು ನಡೆಯುವ‌ ರೀತಿ ಮಾತ್ರ‌ ಮೂದಲಿಸುವಂತಿತ್ತು. ಸಭೆಯಲ್ಲಿ ಈ ತೀರ್ಮಾನಕ್ಕೆ ಜೈಕಾರ‌ ಹಾಕಿದವರು ಯಾರಿಗೂ ಗೊತ್ತಾಗದ‌ ಹಾಗೆ ಮಾನೆಯೊಳಗೆ ಹೋಗಿ ತಮ್ಮ‌ ನೇತಾರನ‌ ಈ ತೀರ್ಮಾನಕ್ಕೆ ಮನಬಂದಂತೆ ಬೈದುಕೊಂಡರು. ಬೆಳ್ಳಿ ಮೂಡಿತೋ ಕೋಳಿಕೂಗಿತೋ ಗೊತ್ತಿಲ್ಲ‌, ಕತ್ತಲೆ ಮಾತ್ರ‌ ಆವರಿಸಿಯಾಗಿತ್ತು. ಅದರೊಂದಿಗೆ ಮೀಡಿಯಾಗಳು ಯೂಟರ್ನ್ ಹಾಕಿಕೊಂಡವು.  ಶ್ರೀಮಂತರ‌ ಕ್ರೆಡಿಟ್ ಕಾರ್ಡ್ ಗಳು ಮಾತ್ರ‌ ಮಾಲ್ ಗಳಲ್ಲಿ ಚಲಾವಣೆಯಾಯಿತು.  ಆಕ್ಷರ‌ ಗೊತ್ತಿಲ್ಲದ‌ ಹಳ್ಳಿ ಕ್ರಷಿಯರು ಡೆಬಿಟ್‍, ಕ್ರೆಡಿಟ್ ಕಾರ್ಡ್ ಅಂದಾಗ‌ ಮೂಕವಿಷ್ಮಯವಾಗಿ ನೋಡಿಕೊಂಡರು. ಒಂದೆಡೆ ಬೆಳ್ಳಿ ಮೂಡಿದರೆ ಆವಾಗಲೇ ಕತ್ತಲಾಗಿತ್ತು.