ಬೆಸ್ತ-ಕವಿ

ಬೆಸ್ತ-ಕವಿ

ಬರಹ

ಅನುಭವದ ಆಳಕ್ಕೆ ಗಾಳ
ಎಸೆದು ಕಾದರೆ ಸಾವಧಾನ
ಕತೆ, ಕವಿತೆ, ಪ್ರಬಂಧದಂಥ
ಹೊಳೆ ಹೊಳೆ-
ಯುವ ಮೀನು ನೂರು
ಸಿಕ್ಕಬಹುದೆನ್ನುವ, ದುರಾಸೆ
ಈ ಕವಿ-ಬೆಸ್ತನಿಗೆ.

ದುರದೃಷ್ಟ;

ಆಳಕ್ಕಿಳಿಯದೇ ಹಾಗೇ ತೇಲುತ್ತಿದೆ ಗಾಳ-
ದ ದಾರದ ಉದ್ದ, ಸಾಕಾಗುವುದಿಲ್ಲವೇನೋ
ಎಸೆದಷ್ಟೂ ಪಿಸಿಯುತ್ತಿದೆ, ಕಮಟು ಹಿಡಿದಿದೆ
ನೂಲು ಹಳೆಯ ಕಾಲದ್ದು.

ಕೊಕ್ಕೆಗೆ ಸಿಕ್ಕಿಸಿದ ಎರೆಹುಳುವಿನ
ಜೊತೆ ಜೊತೆಗೇ ಕವಿಯೂ ಸಂಕಟದಲ್ಲಿದ್ದಾನೆ,
ಇನ್ಯಾವ ಬಾಯಿಗೆ ಬದುಕು ಬೀಳಬೇಕೋ?