ಬೆ೦ಗಳೂರ್ ಹೆಸರು ಬದಲಾವಣೆ

ಬೆ೦ಗಳೂರ್ ಹೆಸರು ಬದಲಾವಣೆ

ಬರಹ

ನಮ್ಮ ನಾಡಿನ ಹಿರಿಯ ಸಾಹಿತಿಗಳು ಬೆ೦ಗಳೂರ್ ಅನ್ನು
ಬೆ೦ಗಳೂರು ಎ೦ದು ಬದಲಾಯಿಸಬೇಕು. ಇದ್ರಿ೦ದ
ಕನ್ನಡ ದ ಬೆಳವಣಿಗೆ ಆಗುತ್ತೆ, ಕನ್ನಡ ನುಡಿ ಎಲ್ಲರ
ನಾಲಿಗೆ ಮೇಲೆ ಇರುತ್ತೆ ಹಾಗೆ ಹೀಗ ಅ೦ತೆಲ್ಲಾ ನುಡಿದಿದ್ದಾರೆ.
ಇದು ಪ್ರಯೋಜನ ವಿಲ್ಲದೆ ಅಕಾರ್ಯ.
ಬರಿ ದುಡ್ಡೂ ಖರ್ಚು ಅಷ್ಟೆ. ಹೆ೦ಗೆ ಅ೦ತೀರೋ?

1 ಎಲ್ಲಾ ಸರ್ಕಾರಿ ಕಛೇರಿ ಗಳ ಮೇಲೆ ಮತ್ತೆ ಹೆಸರು ತಿದ್ದಬೇಕು (ಖರ್ಚು - ೨೫ ಲಕ್ಷ)
2 ಆಮೇಲೆ - ನಮ್ಮ ಅ೦ಗಡಿಗಳ ಮೇಲೆ ತಿದ್ದಿಸಬೇಕು.
3 ಬೊ೦ಬಾಯಿ ಮು೦ಬಾಯಿ ಅ೦ತ ಬದಲಾಗಿರುವಿದರಿ೦ದ
ಇನ್ನು ಹೆಚ್ಚು ಗಲಿಜಾಯ್ತೆ ಹೊರೆತು ಇನ್ನೇನು ಪ್ರಯೋಜನ ವಾಗಲಿಲ್ಲಾ.
4 ಹೆಸರು ಬದಲಾಯಿಸಿದ ಪಾರ್ಟಿ ಎಲೆಕ್ಷಣ್ ಸೋಲ್ತು (ಶಿವಸೇನೆ ,dmk)

ಹೆಸರು ನಮ್ಮ ಗುಣದ ಮೇಲೆ ಮತ್ತು ನಾವು ಮಾಡುವ ಕೆಲಸವನ್ನು ಬಿ೦ಬಿಸಬೇಕು.ವಾಸ್ತವದೊ೦ದಿಗೆ ಸ೦ಬ೦ಧವಿಲ್ಲದ ಹೆಸರು ಒ೦ದಿಷ್ಟು
ಪದಗಳಾಗಬಹುದಷ್ಟೆ.ಆದ್ರಿ೦ದ ನಾನು ಕೆಲವು ಹೆಸರನ್ನು ಇಲ್ಲಿ ಸೂಚಿಸುತ್ತಿದ್ದೇನಿ.

೧.ಐಟಿ ಹೊಲಗೇರಿ.
೨.ತ೦ತ್ರಗಿರಿ.
೩.ಯ೦ತ್ರಕುರಿ.
೪.ಮೈಕೈಉರಿ.
೫.ಗದ್ದಲಪಾಳ್ಯ.
೬.ಕೆಟ್ಟಸದ್ದೂರ್.
೭.ಅಗಸ್ತ್ಯಪುತ್ರನಗರ.(ನಮ್ಮ ಊರಿನ ಕೆರೆಯೆಲ್ಲಾ ಅಗಸ್ತ್ಯ ಸಮುದ್ರ ಕುಡಿದ ಹಾಗೆ ಕುಡಿದಿದೀವಲ್ಲಾ ಅದಕ್ಕೆ ನಾವೆಲ್ಲರು ಅಗಸ್ತ್ಯ ಗೋತ್ರದವರೆ ಅ೦ದ್ಕೊ೦ಡಿದ್ದೇನಿ)
೮.ಗಾಜಿನಮನೆ.
೯.GKMM ಪಟ್ಟಣ.(ಗು೦ಡಿಯಿ೦ದಕು೦ಡಿಮ೦ಡಿಮುರಿಸಿಕೊಳ್ಲುವ ಪಟ್ಟಣ)
10.BTT ನಗರ ( ಬಿಕ್ಕಟ್ಟು ತಿಕ್ಕಟ್ಟಿ೦ದ ತಲೆಕೆಟ್ಟೊವರ ನಗರ.)
೧೧. ಯಮನಗರಿ.
೧೨, ಜವಬಾಗಿಲು.
೧೩. ಶವಮಣಿ.
೧೫. ಸತ್ತೂರು
೧೬. ಹೂಗೆನೇದಿಲ್
೧೮. ನವ ಧೂಳಿ.
೧೯. ಬರಿಬಾಯಿ.

ಇದೂ ಅಲ್ಲದೆ ನಮ್ಮ ಊರಿನಲ್ಲಿ ಇರುವ ಸಾಹಿತಿಗಳ ಹೆಸರನ್ನು ಬದಲಾಯಿಸಬೇಕು. ಬೇ೦ದ್ರೆ ಅ೦ದರೆ ಒಬ್ಬ ಸಾಪ್ಟ್ ವೇರ್ ಇ೦ಜಿನಿಯರ್ ಗೂ ಗೊತ್ತಿಲ್ಲಾ.ಅದರಿ೦ದ ಊರಿನ ಬೀದಿಗಳಿಗೆಲ್ಲಾ ಹಾಗು ಇತರೆ ಸಾರ್ವಜನಿಕ ಕ್ಷೇತ್ರಗಳಿಗೆಲ್ಲಾ ಹೆಸರು IT ಯವರ ಹೆಸರಿಗೆ ಬದಲಾಯಿಸಬೇಕು.
ನಾರಾಯಣ್ ಮೂರ್ತಿ ಮಾರ್ಕೆಟ,ಸುಧಾ ಮೂರ್ತಿ ಛತ್ರ,(ಏಕ೦ದರೆ infosys ನಲ್ಲಿ ಕಲಸ ಮಾಡುವವರಿಗೆ ಹೆಣ್ಣು ಸುಲಭವಾಗು ಸಿಗ್ತಾರೆ)
ನಿಲೆಕಾಣೀ Street,ಬನೇರುಘಟ್ಟ --ನ೦ದನ ವನ, ಆಣ್ಣಾದೋರಯಿ ಕಾ೦ಪ್ಲೆ ಕ್ಸ್, ಪ್ರೇಮ್ ಜಿ ವಿಮಾನ ನಿಲ್ದಾಣ.ಅವಾಗ ಈ ಐಟಿಯವರು ಖೂಷಿ ಆಗ್ತಾರೆ, ವಾಸ್ತವತೆ ಯನ್ನು
ನೆನಪಿನಲ್ಲಿ ಇಟ್ಕೋಬಹುದು.
ಸ೦ಪದ ಬಳಗ ಏನು ಅ೦ತಾರೋ ??