*ಬೇಟದ ರಾಣಿ* (ಮಂದಾನೀಲ ರಗಳೆ)

*ಬೇಟದ ರಾಣಿ* (ಮಂದಾನೀಲ ರಗಳೆ)

ಕವನ

ಬೇಟವ ಕೊಡುತಲಿ ನಿಂತಿಹ ನಾರಿಯು

ಕೂಟದಿ ನಲಿಯುವ ಕೌಮುದಿ ಚೋರಿಯು

ಒಲವಿನ ಬಲೆಯನು ಬೀಸುತ ಹಾಸದಿ

ಚೆಲುವಿನ ಕಿನ್ನರಿ ಹೃದಯವ ಲಾಸದಿ||

 

ಬೇಡನ ಮನವನು ಮೋಹದಿ ಕದ್ದಳು

ಕಾಡುತ ಕನಸಲಿ ವಿರಹದಿ ಗೆದ್ದಳು

ಮಾನಿನಿ ಕಾಂತನ ಸೆಳೆಯುತ ಮೆಲ್ಲನೆ

ಜಾಣೆಯ ಹಾಗೆಯೆ ಹೊರಟಳು ಜಲ್ಲೆನೆ||

 

ಇಂತಹ ಪೇಶಲ ಚೆಲುವೆಯು ಕನ್ನಿಕೆ

ದಂತದ ಗೊಂಬೆಯು ನೋಡಲು ಚನ್ನಿಕೆ

ಇಂದಿರ ತನಯಳು ನನ್ನನು ಕೂಡಲು

ಬಂಧಿಸಿ ರಾಧೆಯ ತೆರದಲಿ ಹಾಡಲು||

 

ತಳಮಳ ಮನದಲಿ ಮೂಡಲು ಮೌನದಿ

ಕಳವಳದಿಂದಲಿ ಮದನ ಧ್ಯಾನದಿ

ಬಲ್ಮೆಯ ತೋರಲು ಸೆಳೆತವು ಬಿಡಲಲಿ

ನಲ್ಮೆಯ ನಲ್ಲನ ತನುವಿನ ಮಡಿಲಲಿ||

 

ಪರ್ಣದ ಹಸಿರದು ತೋರುವ ಹಾಗೆಯೆ

ವರ್ಣದಿ ನಯನದ ನೋಟವು ಹೀಗೆಯೆ

ರವವನ್ನಾಲಿಸಿ ನಿಂದೆನು ವನದಲಿ

ನವವಿಧ ಭಾವದಿ ತೇಲುವೆ ಚಣದಲಿ||

 

-*ಶಂಕರಾನಂದ ಹೆಬ್ಬಾಳ*

ಕನ್ನಡ ಉಪನ್ಯಾಸಕರು ರಾಂಪೂರ 

 

ಚಿತ್ರ್