ಬೇರುಗಳು

ಬೇರುಗಳು

ಕವನ

ಮೌನ

ಹೀಗೆಯೇ ಎಂದೂ ಹೇಳಬರುವುದಿಲ್ಲ

ಒಳಗಿನ ಗೂಡಾರ್ಥ 

ಅರಿವಾಗುವುದೂ ಇಲ್ಲ !

 

ಹಲ ಕೆಲವರ ನಡೆ ನುಡಿಗಳೇ 

ಮೌನಕೂ ನಿಲುಕದ ಉತ್ತರಗಳು

ಶಬ್ದಾರ್ಥಗಳ ನಡುವೆ ಹುದುಗಿರುವ 

ಶಬ್ದಾತೀತಗಳು !

 

ಬಯಸಿದಾಗ ಹತ್ತಿರ ಬರುವ 

ಮನುಜರು, ಕೆಲಸವಾಯಿತೋ

ದೂರ ಸರಿವರು ನಿಂತ ನೀರಿನಂತೆ !

ಯಾಕೆಂದರೆ ? ಘಟಾರದ ನೀರೂ 

ಹರಿದು ಹೋಗುತ್ತದೆ ; ಜೊತೆಗೆ 

ನದಿಯ ನೀರೂ ! 

ಒಂದು ವಾಸನೆ ಇನ್ನೊಂದು ಸುವಾಸನೆ , ಅಷ್ಟೇ 

ವ್ಯತ್ಯಾಸ !

 

ಬೇರುಗಳು ಆಳಕ್ಕಿಳಿದಂತೆ ಮರ ಕ್ಕೆ 

ಆಸರೆ ಹಾಗೇ ಓದು ಬರಹದಾಳಕ್ಕೆ 

ನಾವಿಳಿದಂತೆ ಜ್ಞಾನ ವಿಕಸನ ! 

ಜೊತೆಗೆ ಮಾನ ಸನ್ಮಾನ !

 

ತಲೆ ತಿರುಗುವ ರೋಗ, ಇಂದು 

ನಿನ್ನೆಯದಲ್ಲ ! ಬಹಳ ಹಿಂದಿನಿಂದಲೇ 

ಪ್ರತಿಯೊಂದರಲ್ಲೂ ನಮ್ಮ ಜೊತೆಗೇ 

ಬಂದಂತ್ತ ಅಂಟು ಜಾಡ್ಯ ! 

ಅದಕ್ಕೆ ಕಲಿಕೆಯೇ ಮುಖ್ಯವಾಗುವುದಿಲ್ಲ ; 

ಅಹಂಕಾರವೇ ಸರ್ವಾಧಿಕಾರಿ !!

 

ನಲಿಯುವವರು ನಲಿಯುತ್ತಲೇ 

ಇರುತ್ತಾರೆ ; ಅಳಲೂ ಗೊತ್ತಿರದೆ ! 

ಆದರೆ ಅಳುವವರಿಗೆ ನಗಲೂ 

ಗೊತ್ತಿರುತ್ತದೆ ! ನನ್ನಂತವರಿಗೆ ಎರಡೂ 

ಗೊತ್ತಿರದೆ ಮೌನಿಗಳು!!

 

ಈಗೀಗ ಉಪ್ಪು ತಿಂದವನು ನೀರು 

ಕುಡಿಯುತ್ತಾನೆ ಆದರೆ ತಪ್ಪು 

ಮಾಡಿದವನು ಪಾಠ ಕಲಿಯುವುದೇ 

ಇಲ್ಲ ಕಲಿಯುವುದೂ ಇಲ್ಲ !!

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್