ಬೇರುಗಳು
ಮೌನ
ಹೀಗೆಯೇ ಎಂದೂ ಹೇಳಬರುವುದಿಲ್ಲ
ಒಳಗಿನ ಗೂಡಾರ್ಥ ಅರಿವಾಗುವುದೂ ಇಲ್ಲ !
ಹಲ ಕೆಲವರ ನಡೆ ನುಡಿಗಳೇ
ಮೌನಕೂ ನಿಲುಕದ ಉತ್ತರಗಳು
ಶಬ್ದ ಅರ್ಥಗಳ ನಡುವೆ
ಹುದುಗಿರುವ ನಿಶಬ್ದಗಳು !
ಬಯಸಿದಾಗ ಹತ್ತಿರ ಬರುವ ಮನುಜರು,
ಕೆಲಸವಾಯಿತೋ ದೂರ ಸರಿವರು
ನಿಂತ ನೀರಿನಂತೆ !ಯಾಕೆಂದರೆ ?
ಘಟಾರದ ನೀರೂ ಹರಿದು ಹೋಗುತ್ತದೆ ;
ಜೊತೆಗೆ ನದಿಯ ನೀರೂ !
ಒಂದು ವಾಸನೆ ಇನ್ನೊಂದು ಸುವಾಸನೆ ,
ಅಷ್ಟೇ ವ್ಯತ್ಯಾಸ !
ಬೇರುಗಳು ಆಳಕ್ಕಿಳಿದಂತೆ
ಮರಕ್ಕೆ ಆಸರೆ ಹಾಗೇ ಓದು,
ಬರಹದಾಳಕ್ಕೆ ನಾವಿಳಿದಂತೆ ಜ್ಞಾನ ವಿಕಸನ ;
ಜೊತೆಗೆ ಮಾನ ಸನ್ಮಾನ !
ತಲೆ ತಿರುಗುವ ರೋಗ,
ಇಂದು ನಿನ್ನೆಯದಲ್ಲ !
ಬಹಳ ಹಿಂದಿನಿಂದಲೇ ಪ್ರತಿಯೊಂದರಲ್ಲೂ
ನಮ್ಮ ಜೊತೆಗೇ ಬಂದಂತ್ತ ಅಂಟು ಜಾಡ್ಯ !
ಅದಕ್ಕೆ ಕಲಿಕೆಯೇ ಮುಖ್ಯವಾಗುವುದಿಲ್ಲ ;
ಅಹಂಕಾರವೇ ಸರ್ವಾಧಿಕಾರಿ !!
ನಲಿಯುವವರು ನಲಿಯುತ್ತಲೇ ಇರುತ್ತಾರೆ ;
ಅಳಲೂ ಗೊತ್ತಿರದೆ !
ಆದರೆ ಅಳುವವರಿಗೆ ನಗಲೂ ಗೊತ್ತಿರುತ್ತದೆ !
ನನ್ನಂತವರಿಗೆ ಎರಡೂ ಗೊತ್ತಿರದೆ ಮೌನಿಗಳು!!
ಈಗೀಗ ಉಪ್ಪು ತಿಂದವನು
ಆಗಲೇ ನೀರು ಕುಡಿಯುತ್ತಾನೆ,
ಆದರೆ ತಪ್ಪು ಮಾಡಿದವನು
ಹೊಸದಾಗಿ ಕಲಿಯುವುದೂ ಇಲ್ಲ ;
ಕೊನೆಗೂ ಪಾಠ ಕಲಿಯುವುದೇ ಇಲ್ಲ !!
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ