ಬೇವರ್ಸಿ ದೇವರು !!
ಗುಡಿ ಮುಂದಿನ ಬಿಕ್ಷುಕಿ ಬಿಕ್ಕುತಿಹಳು ,,,,,,,
ದಿನವೂ ಇಲ್ಲಿಯೇ
ದೇವನ ಭಜಿಸಿ
ದಕ್ಕಿದ್ದೆರಡು ಉರೂಟು ಪಾವಲಿಯಲಿ
ಹೊಟ್ಟೆಗಿಲ್ಲದೆ ಕಿರುಚುವಾಗ
ಎಲ್ಲಿದ್ದ ನನ್ನ ದೇವರು ?
ಆ ಬೇವರ್ಸಿ ದೇವರು ?
ಕಣ್ಣಿರದ ನನ್ನ ಕಂದಾ
ಅವ್ವಾ ಎಂದು ಕಿರುಚಿ
ಗುಡಿ ಎದುರಲ್ಲೇ
ಗಾಡಿಗೆ ಸಿಕ್ಕಿ ಸತ್ತಾಗ
ಎಲ್ಲಿದ್ದ ನನ್ನ ದೇವರು ?
ಆ ಬೇವರ್ಸಿ ದೇವರು ?
ರಾತ್ರಿ, ಗುಡಿಯಾ ಮಗ್ಗುಲಲಿ
ಕುಡುಕನೊಬ್ಬ ಅವನ
ಪುರುಷತ್ವದ ಖದ್ಗಡಲಿ
ಹೆಣ್ತನವ ಇರಿಯಲು ಬಂದಾಗ
ಎಲ್ಲಿದ್ದ ನನ್ನ ದೇವರು ?
ಆ ಬೇವರ್ಸಿ ದೇವರು ?
ಸತ್ತವರಿಗೆಸೆದ
ತೆಂಗಿನ ಚೂರನು
ನಾಯಿಗೆ ಪೈಪೋಟಿಯಲಿ
ನಾ ಕಚ್ಚಿ ತಿನ್ನುವಾಗ
ಎಲ್ಲಿದ್ದ ನನ್ನ ದೇವರು ?
ಆ ಬೇವರ್ಸಿ ದೇವರು ?
ನನ್ನ ಗರ್ಭದೊಳಗೆ
ಯಾರದೋ ವೀರ್ಯದ ಆತ್ಮ
ಅನ್ನವಿಲ್ಲದೆ ಕರಕಲಾಗಿರುವಾಗ
ಅವನು,,, ಗರ್ಭ ಗುಡಿಯೊಳಗೆ
ಬೆಚ್ಚಗೆ ಮಲಗಿಹನು
ಅವನಾವ ದೇವರು?
ಬಿಕ್ನಾಸಿ ದೇವರು?
ಅವ್ವ-ಅಪ್ಪ ಅಂತ ದೈನ್ಯವಾಗಿ
ನಾ ಬೇಡಿದರೂ
ಕೆಂಗಣ್ಣು ಬೀರಿ ಹೋಗುವ ಜನ
ಅವನ ಹುಂಡಿಯೊಳಗೆ
ಲಕ್ಷ ಲಕ್ಷ ಸುರಿದು ಸುಡುವಾಗ
ಅವನೇನಾ ದೇವರು?
ಅಡ್ನಾಡಿ ದೇವರು ?
ಭಕ್ಷಕರ ರಕ್ಷಕ ಅಷ್ಟೇ ಆತ !
ಕುತಂತ್ರಿಗಳ ಮಂತ್ರಿ ಅಷ್ಟೇ ಆತ !
ಇದ್ದವರ ಗದ್ದಕ್ಕೆ ಮುತ್ತಿಟ್ಟು ರಮಿಸುವವ,,,
ಪುರುಷ ಪುಂಗವ ಆತ,,,,
-- ನಾನೆಂಬ ಅಹಂಕಾರ
Comments
ಉ: ಬೇವರ್ಸಿ ದೇವರು !!
ದೇವರನ್ನು ಗುಡಿ-ಗೋಪುರಗಳಲ್ಲಿ, ವಿಗ್ರಹಗಳಲ್ಲಿ ಅರಸುವುದಾದರೆ ಅವನು ಸಿಗಲಾರ!
In reply to ಉ: ಬೇವರ್ಸಿ ದೇವರು !! by kavinagaraj
ಉ: ಬೇವರ್ಸಿ ದೇವರು !!
ಕವಿಗಳೇ, ನಾನು ಮೂಕನಾಗಿದ್ದೇನೆ, ಕಾಪಾಡಬೇಕು,,,, ಪ್ರತಿಕ್ರಿಯೆಗೆ ಧನ್ಯವಾದಗಳು,