ಬೇವಿನ ಸೊಪ್ಪು ತಂಬುಳಿ
![](https://saaranga-aws.s3.ap-south-1.amazonaws.com/s3fs-public/styles/article-landing/public/%E0%B2%B0%E0%B2%95%E0%B3%8D%E0%B2%B0%E0%B3%8D%E0%B2%AC%E0%B3%87%E0%B2%B5%E0%B3%81.jpg?itok=Hku0W1mg)
ಬೇಕಿರುವ ಸಾಮಗ್ರಿ
ಕರಿಬೇವಿನ ಸೊಪ್ಪು ಒಂದು ಹಿಡಿ, ಜೀರಿಗೆ ೧ ಚಮಚ, ೫ ಕಾಳು ಒಳ್ಳೆ ಮೆಣಸು, ಹಸಿ ತೆಂಗಿನತುರಿ ೨ಕಪ್, ಮಜ್ಜಿಗೆ ೨ ಸೌತ್ ಟು, ಬೆಣ್ಣೆ ೧/೨ ಚಮಚ, ಒಗ್ಗರಣೆ ಗೆ ಒಣಮೆಣಸು, ಸಾಸಿವೆ, ಚೂರು ತುಪ್ಪ.
ತಯಾರಿಸುವ ವಿಧಾನ
ಶುದ್ಧೀಕರಿಸಿದ ಬೇವಿನಸೊಪ್ಪುನ್ನು, ಜೀರಿಗೆ ಬೆಣ್ಣೆ ಹಾಕಿ ಹುರಿದು ಕೊಳ್ಳಬೇಕು. ಹುರಿದ ಬೇವಿನಸೊಪ್ಪನ್ನು ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಿಕೊಳ್ಳಬೇಕು. ಬೀಸಿದ ಮಿಶ್ರಣಕ್ಕೆ ಮಜ್ಜಿಗೆ ಉಪ್ಪು, ಹಾಕಿ ತಕ್ಕಷ್ಟು ನೀರು ಹಾಕಿ ಕುದಿಸಬೇಕು. ಸಣ್ಣಗೆ ಕುದಿಯುವಾಗ ಒಗ್ಗರಣೆ ಹಾಕಿದರೆ ಬೇವಿನಸೊಪ್ಪು ತಂಬುಳಿ ತಯಾರು.
- ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ