ಬೇಸನ್ ಲಾಡು

ಬೇಸನ್ ಲಾಡು

ಬೇಕಿರುವ ಸಾಮಗ್ರಿ

ಕಡಲೆ ಹಿಟ್ಟು ೧ ಕಪ್, ಸಕ್ಕರೆ ೧ ಕಪ್, ತುಪ್ಪ ೧/೨ ಕಪ್, ಏಲಕ್ಕಿ ಪುಡಿ ಸ್ವಲ್ಪ, ಗೋಡಂಬಿ ಚೂರು ಸ್ವಲ್ಪ.

ತಯಾರಿಸುವ ವಿಧಾನ

ಕಡಲೆ ಹಿಟ್ಟನ್ನು ಸ್ವಲ್ಪ ತುಪ್ಪದಲ್ಲಿ ಪರಿಮಳ ಬರುವಷ್ಟು ಹುರಿಯಿರಿ. ಅದಕ್ಕೆ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಹಾಕಿ ಕಲೆಸಿ. ಸಕ್ಕರೆ ಮುಳುಗುವಷ್ಟು ನೀರು ಹಾಕಿ ಎಳೆಪಾಕ ಮಾಡಿಕೊಳ್ಳಿ. ಹಿಟ್ಟು ಬಿಸಿಯಿರುವಾಗಲೇ ಸಕ್ಕರೆ ಪಾಕ ಹಾಕಿ ಚೆನ್ನಾಗಿ ಮಗುಚಿ. ಅದು ಮುದ್ದೆಯಾಗುತ್ತದೆ. ತಣಿದ ನಂತರ ಉಂಡೆ ಕಟ್ಟಿ. ಮಕ್ಕಳಿಗೆ ಬಲು ಇಷ್ಟ ಈ ತಿಂಡಿ.

- ಸಹನಾ ಕಾಂತಬೈಲು, ಮಡಿಕೇರಿ