ಬೇಸರ‍ ಎಷ್ಟೆತ್ತರ‌‌

ಬೇಸರ‍ ಎಷ್ಟೆತ್ತರ‌‌

ಕವನ

ಉಮೀ ಮತ್ತೆ  ಹೋಗುವುದಾದರೆ


ನೀ ಬಾರದಿರುವುದೇ   ಚೆನ್ನ                                       


ಈ ಒಂಟಿತನ  ಏಕಾಂಗತೆ                                 


ಕಾಡ್ಗಿಚ್   ಹರಡಲೇಕೇ  ಚಿನ್ನ


 


ನಿನ್ನ ಕಂದು ಬಣ್ಣ್ನದ  ಕಣ್ಣಿನ


ಕುಂದದ ಪ್ರೇಮ  ಪ್ರೀತಿಯ ಕ್ಷ ಕಿರಣ


ಲೇಸರ್ ಬೀಮ್ ನಂತೆ


ಕೊರೆಯಿತು ಎಲ್ಲಾ ನಿರುತ್ಸಾಹ ಜಡತ್ವ


ಮನ ಆಯಿತು ಅನಂತ ಶಾಂತಿ ಧಾಮ.


 


ನಿನ್ನ ಸವಿ ನುಡಿ, ತುಂಟ ನಗೆ


ಜೀವಕೆ ತಂದಿತು ಹತ್ತಾರು ಅಶ್ವ ಶಕ್ತಿ


ಈಗ ಈ ಒಂಟಿ ಬಾಳು


ಮರಳುಗಾಡಿನ   ಒಂಟೆ


ದಿಕ್ಕು ದೆಸೆಯಿಲ್ಲದ  ಪರದೇಸಿ!


 


ಯಾವ ಜನ್ಮದ ಅಪರಾಧಕೆ ಈ ಶಿಕ್ಷೆ


ಈ ಏಕಾಂಗಿತನದ ದಂಡ ಜುಲ್ಮಾನೆ


ವಿರಹ ತಾಪದ  ಜೀವಾವಧಿ  ಸಜ !


 


ಉಮೀ , ನೀನಿಲ್ಲದೆ ಬೇಸರ


ಬುರ್ಜ್ ಖಲೀಫದಷ್ಟೇ  ಎತ್ತರ   !


  ಶ್ರಿ ನಾಗರಾಜ್