ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ಪ್ರವಾಸ ಕಥನ )....
ಎಲ್ಲದಕ್ಕೂ ಕಾಲ ಕೂಡಿ ಬರಬೇಕು...!!
ಇದು ನಾವ್ ಅವಾಗವಾಗ ಹೇಳಿಕೊಳ್ಳುವ-ಹೇಳುವ ಮಾತು..
ಕೆಲ ತಿಂಗಳ ಹಿಂದೆ ಸಂಪದದಲ್ಲಿ 'ಅಪ್ರಮೇಯ ದೇವಸ್ಥಾನದ' ಬಗ್ಗೆ ವಿಸ್ತೃತ ಮಾಹಿತಿ-ಚಿತ್ರ ಬರಹ ಪ್ರಕಟವಾಗಿತ್ತು..
ಅಪ್ರಮೇಯ ಸ್ವಾಮಿ ದೇವಸ್ಥಾನ
ಅಪ್ರಮೇಯ ಸ್ವಾಮಿಯ ಜಾತ್ರೆಯು ಮೇ ೦೩ ರಂದು ಇದ್ದಿದ್ದರೂ ಮತ್ತು ಅದು ನನಗೆ ಗೊತ್ತ್ತಿದ್ದರೂ ಜಾತ್ರೆಗೆ ನನ್ನ ಪರೀಕ್ಷಾ ನಿಮಿತ್ಯ ಹೋಗಲು ಆಗಿರಲಿಲ್ಲ, ಆದರೆ ಇವತ್ತು ಬೆಳಗ್ಗೆ 'ಧಿಡೀರನೆ' ಬೇರೆ ಒಂದು ಕೆಲಸದ ಮೇಲೆ ಚನ್ನಪಟ್ಟಣಕ್ಕೆ ಹೋಗುವ ಪ್ರಸಂಗ ಬಂತು..
ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಿಂದ ಮೈಸೂರಿಗೆ ಹೋಗುವ ರೈಲಿನಲ್ಲಿ (ಪ್ಯಾಸೆಂಜರ್) ಪ್ರಯಾಣಿಸಲು ತಲಾ ಹತ್ತು ರುಪಯೀ ಪಾವತಿಸಿ ಟಿಕೆಟ್ ಪಡೆದು ನಮ್ಮ ಚನ್ನ ಪಟ್ಟಣಕ್ಕೆ ಪ್ರವಾಸ ಆರಂಭಿಸಿದೆವು.. ಬೆಂಗಳೂರಿಂದ ಸುಮಾರು ೬೦ ಕಿಲೋ ಮೀಟರ್ ದೂರದಲ್ಲಿರುವ ಈ ಚನ್ನಪಟ್ಟಣಕ್ಕೆ ಹೋಗುವಾಗ ದಾರಿಯಲ್ಲಿ ಬೆಂಗಳೂರು ಸಿಟಿ ದಾಟುವವರೆಗೆ ಏನೂ ವಿಶೇಷತೆಯಿಲ್ಲ, ಆದರೆ ಬಿಡದಿ-ರಾಮನಗರ ಚನ್ನಪಟ್ಟಣ ದಾರಿಯಲ್ಲಿ ಸುತ್ತ ಮುತ್ತಲಿನ 'ಹಸಿರು' ಪರಿಸರ ಮನ ಆಹ್ಲಾದಕರಗೊಳಿಸುತ್ತದೆ..
೪೦ ನಿಮಿಷಗಳಲ್ಲೇ ಚನ್ನಪಟ್ಟಣ ಮುಟ್ಟಿ ಅಲ್ಲಿಯ ರೈಲು ನಿಲ್ದಾಣದಿಂದ ಆಚೆ ಬಂದ ಕೂಡಲೇ ಎದುರಿಗೆ ಚಿಕ್ಕ ಬೋರ್ಡ್- 'ಅಪ್ರಮೇಯ ದೇವಸ್ಥಾನಕ್ಕೆ ಮತ್ತು ಅಂಜನೇಯ ದೇವಸ್ಥಾನಕ್ಕೆ ೩ ಕಿಲೋ ಮೀಟರ್' ..
ರೈಲಿನಲ್ಲಿ ಬರುವಾಗಲೇ ಸಹ ಪ್ರಯಾಣಿಕರಲ್ಲಿ ಬಸ್ ಸ್ಟಾಂಡ್ ಹತ್ತಿರವೋ ದೂರವೋ? ಎಂದಾಗ ನಡೆದೇ ಹೋಗಬಹುದು ಎಂದಿದ್ದು ಕೇಳಿ, ನಡೆದುಕೊಂಡು ಹತ್ತೇ ನಿಮಿಷದಲ್ಲಿ ಚನ್ನ ಪಟ್ಟಣ ಬಸ್ ಸ್ಟ್ಯಾಂಡ್ ತಲುಪಿದೆವು....
ಅಲ್ಲಿ ನಮ್ಮ ವಯುಕ್ತಿಕ ಕೆಲಸವೊಂದನ್ನು ಮುಗಿಸಿಕೊಂಡು, ಆಟೋದವರಲ್ಲಿ ಅಪ್ರಮೇಯ ದೇವಸ್ಥಾನಕ್ಕೆ ಬರಲು ಎಷ್ಟು ಕೊಡಬೇಕು ಎಂದಾಗ , ತಲಾ ೨೦ ರುಪಯೀ ಕೊಡಿ ಎಂದರು, ೪೦ ರುಪಾಯೀ ಕೊಟ್ಟು ಹತ್ತೇ ನಿಮಿಷದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇರುವ 'ದೊಡ್ಡ ಮಳೂರು' ಎಂಬಲ್ಲಿ ಶ್ರೀ 'ರಾಮಾ ಅಪ್ರಮೇಯ ಸ್ವಾಮಿಯ' ದೇವಸ್ಥಾನದ ಸ್ವಾಗತ ಕಮಾನಿನ ಹತ್ತಿರ ಇಳಿದೆವು..
ದೇವಸ್ಥಾನವನ್ನು ನಾವ್ ಪ್ರವೇಶಿಸಿದಾಗ ಸಮಯ ಮಧ್ಯಾಹ್ನ ೧೨:೩೫ , ದೇವಸ್ಥಾನ ಪ್ರವೇಶಿಸುವಲ್ಲಿ ಹೊರಗಡೆ ಬೋರ್ಡ್ ನೋಡಿದಾಗ ಅಲ್ಲಿ
ದರ್ಶನ ಸಮಯ ಬೆಳಗ್ಗೆ ೦೭:೩೦ ಇಂದ ಮಧ್ಯಾಹ್ನ ೧೨:೩೦ ವರೆಗೆ
ಆಮೇಲೆ ಸಂಜೆ ೦೪ ರಿಂದ ರಾತ್ರಿ ೦೮:೩೦ ವರೆಗೆ (ವಾರದ ದಿನಗಳಲ್ಲಿ )
ವಾರಾಂತ್ಯ(ಶನಿವಾರ-ಭಾನುವಾರ-ಮತ್ತು ಸರಕಾರೀ ರಜಾ ದಿನಗಳಲ್ಲಿ)
ಬೆಳಗ್ಗೆ ೦೭ ರಿಂದ ಮಧ್ಯಾಹ್ನ ೦೧ ಘಂಟೆವರೆಗೆ
ಸಂಜೆ ೦೪ ರಿಂದ ರಾತ್ರಿ ೦೮:೩೦ ವರೆಗೆ ದರ್ಶನ ಲಭ್ಯ ಎಂದು ಇತ್ತು..
ಆಗಲೇ ಸಮಯವಾಗುತ್ತಿದ್ದುದರಿಂದ ತರಾತುರಿಯಲ್ಲಿ ದೇವಸ್ಥಾನವನ್ನ ಯಾವುದೇ ಹೂವು ಹಣ್ಣು ಕಾಯಿ ಇಲ್ಲದೆ ಪ್ರವೇಶಿಸಿ..!!
ಅಪ್ರಮೇಯ ಸ್ವಾಮಿಗೆ ನಮಿಸಿ, ಅರ್ಚಕರು ಕೊಟ್ಟ ಆರತಿಗೆ ನಮಿಸಿ ,ಕಾಣಿಕೆ ಹಾಕಿ, ಅರ್ಚಕರಿಗೆ ಅಪ್ರಮೇಯ ಸ್ವಾಮಿಯ ಫೋಟೋ ತೆಗೆಯಬಹುದೇ? ಎಂದು ಕೇಳಿದಾಗ, ಅವರು ಫೋಟೋ ತೆಗೆಯುವುದು ಬೇಡ ಎಂದರು..:(
ಅಪ್ರಮೇಯ ಸ್ವಾಮಿಯ ಫೋಟೋ ತೆಗೆಯಲು ಅನುಮತಿ ಸಿಗದ ಕಾರಣ ,ಆ ಫೋಟೋ ಹಾಕಲು ಆಗಲಿಲ್ಲ..
ಆ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..
ಲೇಖಕಿ : ಪವಿತ್ರ -
ಹೀಗಾಗಿ ಒಳಗಡೆ ಯಾವುದೇ ಫೋಟೋ ತೆಗೆಯದೆ ಬರೀ ಕಣ್ಣುಗಳಲ್ಲೇ ದೇವಸ್ಥಾನದ ಒಳಗಿನ ಕಲ್ಲು ಕಂಬ ಅವುಗಳ ಕೆತ್ತನೆ ಇತ್ಯಾದಿ ನೋಡಿದೆ.. ದೇವಸ್ಥಾನ ಒಳಗಡೆ ವಿಶಾಲವಾಗಿದೆ, (ಇಸ್ಟೇ ವಿಶಾಲವಾದ ಇನ್ನೊಂದು ದೇವಸ್ಥಾನವನ್ನ ನಾ ನೋಡಿದ್ದು ನಂಜನಗೂಡಿನಲ್ಲಿ -ಅದು ಶ್ರೀ ಕಂಥೆಶ್ವರ ಸ್ವಾಮೀ ದೇವಸ್ಥಾನ.. ) ಹೊರಗಡೆ ಬಂದು ಅಲ್ಲಿಯ ಕೆಲವು ಫೋಟೋಗಳನ್ನು ತೆಗೆದೇ..
ಹಾಗೆಯೇ ಸುತ್ತ ಮುತ್ತ ನೋಡುವಾಗ, ಕರ್ನಾಟಕ ಸರಕಾರ ಈ ದೇವಸ್ಥಾನವನ್ನು ಸಂರಕ್ಷಿಸಲ್ಪಟ್ಟ ಪ್ರಾಚೀನ ಸ್ಥಳ ವಸ್ತು ಎಂದು ಘೋಷಣೆ ಮಾಡಿ ಆ ಬಗ್ಗೆ ಹಾಕಿದ ಬೋರ್ಡ್ ಕಾಣಿಸಿತು..
ದೇವಸ್ಥಾನದ ಹೊರಗಡೆ ಅಪ್ರಮೇಯನ 'ಅಂಬೆಗಾಲು' ಚಿಕ್ಕ ವಿಗ್ರಹ ಖರೀದಿಸಿದೆ..
ಮೊನ್ನೆ ತಾನೇ ಮುಗಿದಿದ್ದ ಜಾತ್ರೆ(ಮೇ ೦೩-೨೦೧೨)ಯ ಕಾರಣವಾಗಿ ಅಲ್ಲಿ ನಿಲ್ಲಿಸಿದ್ದ ರಥ ವರ್ಣಮಯವಾಗಿ ಮಿನುಗುತ್ತಿತ್ತು..
ನಮ್ ಕಡೆ(ಉತ್ತರ ಕರ್ನಾಟಕ) ಬರೀ ತೇರುಗಳನ್ನೇ ಜಾತ್ರೆಯ ಸಮಯದಲ್ಲಿ ಕಾಣುತ್ತಿದ್ದ ನಮಗೆ ಈ ಭವ್ಯ-ಎತ್ತರವಾದ ರಥವನ್ನು ನೋಡಿ ಅಚ್ಚರಿ ಆಯ್ತು..
ಕ್ರಿಷ್ಣನ್ನು ಮಾತ್ರ ನೋಡಿಕೊಂಡು ಹಾಗೆ ಬಂದರೆ ಅಲ್ಲೇ ಪಕ್ಕದಲ್ಲಿ ಇರುವ ಅಂಜನೇಯ ಸುಮ್ಮನೆ ಇದ್ದಾನೆಯೇ?...:())
ಹೀಗಾಗಿ ಪಕ್ಕದಲ್ಲೇ ಇರುವ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿಯ ಸನ್ನಿಧಿಗೆ ಹೋಗಿ ನಮಿಸಿ, ಬಾಗಿಲನ್ನು ಹಾಕಿದ್ದರಿಂದ ಆ ಬಾಗಿಲ ಮೂಲಕವೇ ನಮ್ಮ ಕ್ಯಾಮೆರ ಮೊಬೈಲು ಇರಿಸಿ ಒಂದು ಫೋಟೋ ತೆಗೆದದ್ದು ಆಯ್ತು..
ಇಲ್ಲಿರುವ ಅಂಜನೇಯ ಮಾಮೂಲಿ ಅಂಜನೆಯಗಿಂತ ಭಿನ್ನ...
ಹೇಗೆ ಅಂದಿರಾ?
ಆಂಜನೇಯನ ಕಣ್ಣು ಧೃಸ್ಟಿ ಭಲೇ ಭಯಂಕರವಾಗಿತ್ತು..
ಅದ್ಕೆ ಏನೋ
ಮುಖದಲ್ಲಿ ಕೊಂಚ ರೌದ್ರಾಕಾರದ ಛಾಯೆ /ಭಾವ ಕಂಡು ಬಂತು..!!
ಅಲ್ಲಿಂದ ಅಲ್ಲಿಯೇ ಹೊರಗೆ ನಿಂತು ದೇವಸ್ಥಾನದ ಹೊರ ಭಾಗವನ್ನು ಗೋಪುರ ಸಮೇತ ಕ್ಲಿಕ್ಕಿಸಿದೆ...
ಅಪ್ರಮೇಯ ದೇವಸ್ಥಾನ -ಮದ್ಯ್ಹದಲ್ಲಿ -ಶೌಚಾಲಯ ..!! ನಂತರ ಕಾಣಿಸುವುದು .ಪ್ರಸನ್ನ ಅಂಜನೇಯ ದೇವಸ್ಥಾನ....
ಒಂದಷ್ಟು ಹೊತ್ತು ಅಲ್ಲಿ ಕುಳಿತಿದ್ದು ತರುವಾಯ ಮತ್ತೆ ಆಟೋ ಹತ್ತಿ ೩೦ ರುಪಾಯೀ ಕೊಟ್ಟು ಚನ್ನ ಪಟ್ಟಣ ರೈಲ್ವೆ ಸ್ಟೇಶನ್ ತಲುಪಿದೆವು , ಟಿಕೆಟ್ ಖರೀದಿಸಿ ರೈಲು ಹತ್ತಿ ಬೆಂಗಳೂರಿಗೆ ವಾಪಾಸ್..
ನಾ ಹೋದ ಸಮಯದಲ್ಲೇ ದೇವಸ್ಥಾನದ ಬಾಗಿಲು ಹಾಕುತ್ತಿದ್ದುದರಿಂದ ಅವಸರವಸರವಾಗಿ ದರ್ಶನ ಮುಗಿಸಿ ಒಳಗಿನ ಯಾವುದೇ ಕೆತ್ತನೆ-ಕುಸುರಿ ಇತ್ಯಾದಿ ಫೋಟೋ ಹೊಡೆಯಲು ಆಗದೆ ಬರೀ ಕಣ್ಣಲ್ಲೇ ನೋಡಿ- ಮನದಲ್ಲಿ ಅದನ್ನು ಶೇಖರಿಸಿ ಇಟ್ಟೆವು ..!!
ಚನ್ನಪಟ್ಟಣದಲ್ಲಿ ಹೆಸರುವಾಸಿಯಾದ (ಬೊಂಬೆ ಕೆತ್ತನೆಯಿಂದಾಗಿ ಚನ್ನ ಪಟ್ಟಣ -ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ) ಬೊಂಬೆ ಕೆತ್ತನೆಯ ಕೆಲ ಬೊಂಬೆಗಳನ್ನು ಖರೀದಿಸುವ ಮನಸ್ಸು ಇತ್ತು, ಆದರೆ ಅವುಗಳನ್ನ ಬರೀ ಕಣ್ಣಲ್ಲೇ ನೋಡಿ ಅವುಗಳ ಅಂದ ಸವಿದು ಬಂದೆವು...!!
ಅದಕ್ಕೆ ಕಾರಣ ನಾವ್ ವಾಪಾಸು ಹೊರಡುವ ಟ್ರೈನ್ ಗೆ ಟೈಮ್ ಆದದ್ದು..
ಹೀಗಾಗಿ ಇನ್ನೊಮ್ಮೆ ಬಂದಾಗ ಗೊಂಬೆ ತೆಗೆದುಕೊಂಡು ಹೋಗೋಣ ಅಂತ ಅಂದುಕೊಂಡು ವಾಪಸ್ಸು ಬಂದೆವು..
ಒಟ್ಟಿನಲ್ಲಿ ಅರ್ಧ ದಿನದಲ್ಲೇ ದೇವಸ್ಥಾನ ಸಂದರ್ಶಿಸಿ ವಾಪಾಸು ಬೆಂಗಳೂರಿಗೆ ಬಂದಿದ್ದಾಯ್ತು..... ಮುಂದಿನ ಸಾರಿ ಜಾತ್ರೆಗೆ ಹೋಗುವ ಯೋಚನೆ ಇದೆ...ನೋಡುವ..
ಚನ್ನ ಪಟ್ಟಣಕ್ಕೆ ರೈಲು(ಮೈಸೂರಿಗೆ ಹೋಗುವ ಎಲ್ಲ ಪ್ಯಾಸೆಂಜರ್/ ಎಕ್ಸ್ಪ್ರೆಸ್ಸ್ ರೈಲುಗಳು) ಬಸ್ಸಿನ ವ್ಯವಸ್ಥೆ ಇದೆ..
ರೈಲು ನಿಲ್ದಾಣ ಬಸ್ಸು ನಿಲ್ದಾಣ ತಲುಪಿ ಆಟೋ ಕೇಳಿದರೆ
ರೈಲು ನಿಲ್ದಾಣದಿಂದ ೩೦ ರಿಂದ ೪೦ ರುಪಾಯೀ
ಬಸ್ಸು ನಿಲ್ದಾಣದಿಂದ ಒಬ್ಬರಿಗೆ ೧೦ ರುಪಾಯೀ ..
ಆಟೋದವರ ನಯ-ವಿನಯ ಹಿಡಿಸಿತು (ಬೆಂಗಳೂರಿನ ಕಹಿ ಅನುಭವಗಳು ಸಾಮಿ..!!)
ದೇವಸ್ಥಾನದ ಹೊರಗೆ (ಅಂಜನೇಯ ಸಾಮಿ- ಅಪ್ರಮೇಯ ದೇವಸ್ಥಾನ ಮಧ್ಯ ) ದರ್ಶನಾರ್ಥಿ(ಭಕ್ತಾದಿ)ಗಳಿಗಾಗಿ ಪಾವತಿಸಿ ಉಪಯೋಗಿಸುವ ಶೌಚಾಲಯ ವ್ಯವಸ್ಥೆಯೂ ಇದೆ.. ದೇವಸ್ಥಾನದಿಂದ ವಾಪಾಸ್ಸು ಬಸ್ಸು ನಿಲ್ದಾಣ-ರೈಲು ನಿಲ್ದಾಣಕ್ಕೆ ಆಟೋ ಸಹಾ ಸಿಗುವುವು...
ಮನೆ ಮಂದಿ ಸಮೇತ ಹೋಗಿ ನೋಡಿ ಬರಲು ಹತ್ತಿರ ಇರುವ ಸ್ಥಳ..
ಚಿತ್ರ ಮೂಲಗಳು:
ದೇವಸ್ಥಾನ-ರಥ-ಇತ್ಯಾದಿ : ಸಪ್ತಗಿರಿವಾಸಿ
ಚನ್ನ ಪಟ್ಟಣ ಬೊಂಬೆಗಳು :
Comments
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
In reply to ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ... by ಗಣೇಶ
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
In reply to ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ... by venkatb83
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
In reply to ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ... by sathishnasa
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
In reply to ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ... by makara
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
In reply to ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ... by ಸುಮ ನಾಡಿಗ್
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
In reply to ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ... by ಸುಮ ನಾಡಿಗ್
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
In reply to ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ... by venkatb83
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
In reply to ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ... by ಸುಮ ನಾಡಿಗ್
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
In reply to ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ... by nanjunda
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
In reply to ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ... by partha1059
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...
In reply to ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ... by Chikku123
ಉ: ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ...