ಬೋಧಿವೃಕ್ಷ, ಮತ್ತು ಗೌತಮ ಬುದ್ಧ !

ಬೋಧಿವೃಕ್ಷ, ಮತ್ತು ಗೌತಮ ಬುದ್ಧ !

ಸಿದ್ಧಾರ್ಥ, ಅಥವಾ, ಗೌತಮ ಕ್ರಿ.ಪೂ.೫೬೩ ನಲ್ಲಿ ನೇಪಾಳದ 'ಲುಂಬಿನಿ'ಎಂಬ ಜಾಗದಲ್ಲಿ ಜನಿಸಿದನು. ತಂದೆ, ಕಪಿಲವಸ್ತುನಗರದ 'ಶುದ್ಧೋಧನ ಮಹಾರಾಜ' ಮತ್ತು ತಾಯಿ, 'ಮಾಯಾದೇವಿ'. 'ಸಿದ್ಧಾರ್ಥ' ಕೇವಲ ೭ ವರ್ಷದ ಬಾಲಕನಾಗಿರುವಾಗಲೇ ತಾಯಿಯವರು ಮರಣಹೊಂದಿದರು. ಮಲತಾಯಿ 'ಗೌತಮಿ'ಯವರ ಪ್ರೀತಿಯ ನೆರಳಿನಲ್ಲಿ ಬೆಳೆದರು. ರಾಜ ಜ್ಯೋತಿಷಿಗಳು ಮಗು ಜನಿಸಿದ ಸಮಯದಲ್ಲೇ ಅವನು ಮುಂದೆ ಒಬ್ಬ ದಾರ್ಶನಿಕನಾಗಿ, ವಿಶ್ವಕ್ಕೇ ಬೆಳಕುನೀಡುತ್ತಾನೆ ಎಂದು ನುಡಿದಿದ್ದರು. ಈ ವಾರ್ತೆಯಿಂದ ಧೃತಿಗೆಟ್ಟ ತಂದೆಯು ಬಾಲಕ ಗೌತಮನಿಗೆ ಕಷ್ಟಕೋಟಲೆಗಳ ಲವಶೇಶವೂ ಗೊತ್ತಾಗದಂತೆ ಅತ್ಯಂತ ಎಚ್ಚರಿಕೆಯಿಂದ ಲಾಲನೆಪಾಲನೆ ಮಾಡಿದನು. ತಮ್ಮ ಅರಮನೆಯಿಂದ ಹೊರೆಗೆ ಹೋಗದಂತೆ, ಮತ್ತು ಸಾಮಾನ್ಯ ಜನರ ಕಾರ್ಪಣ್ಯದ ಜೀವನ ಶೈಲಿಯ ನೆರಳು ಬೀಳದಂತೆ ನಿಗವಹಿಸಿದರು. ತನ್ನ ಮರಣಾನಂತರ ರಾಜ್ಯಕ್ಕೆ ದೊರೆಯನ್ನಾಗಿಮಾಡುವುದೇ 'ಶುದ್ಧೋಧನ ಮಹರಾಜ'ನ ಕನಸಾಗಿತ್ತು.   ಸಿದ್ಧಾರ್ಥ. ಬೋಧಿವೃಕ್ಷದ ಕೆಳಗೆ ಕುಳಿತು ತಪಸ್ಸನ್ನು ಆಚರಿಸಿದಾಗ ಅವನಿಗೆ ಜ್ಞಾನೋದಯವಾಯಿತು ! ಆಶೆಯೇ ಎಲ್ಲಾ ದುಃಖಕ್ಕೆ ಮೂಲ. ಆದ್ದರಿಂದ ಯಾವುದಕ್ಕೂ ಆಶಿಸಬಾರದು ಎನ್ನುವ  ಮೂಲ ಮಂತ್ರವನ್ನು ವಿಶ್ವದ ಜನತೆಯ ಗಮನಕ್ಕೆ ತಂದನು. ಭಾರತಕ್ಕಿಂತ  ನೆರೆಹೊರೆಯ ರಾಷ್ಟ್ರಗಳು, ದೇಶಗಳು ಈ ಬೋಧನೆಗಳಿಂದ ಪ್ರಭಾವಿತವಾದವು. ವಿಶ್ವದಲ್ಲಿ ಭಾರತಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಬುದ್ಧ ಮತೀಯರು ಚೈನಾ, ಜಪಾನ್, ಥೈಲೆಂಡ್, ಶ್ರೀ ಲಂಕಾ, ಇಂಡೋನೇಷ್ಯಾಗಳಲ್ಲಿ ಕಾಣಿಸುತ್ತಾರೆ.
 
ಬೋಧಿ ವೃಕ್ಷ....

ಕ್ರಿ. ಪೂ. ೬೨೩, ರ,  ವೈಶಾಖ ಪೂರ್ಣಿಮೆಯ ಶುಭದಿನ, ಬೋಧಿ ವೃಕ್ಷದ ಕೆಳಗೆ ಕುಳಿತು ತಪಸ್ಸನ್ನು ಮಾಡಿದ  ಗುತಮ ಬುದ್ಧ ನಿಗೆ ಜ್ಞಾನೋದಯವಾಯಿತು.....

 ಈಗ ಗುತಮ.  ಬುದ್ಧನಾಗಿದ್ದಾನೆ.

ಗುತಮ,  ಬುದ್ಧನಾದಮೇಲೆ..

ಗುತಮ  ಬುದ್ಧನ ತಾಯಿಯವರ (ಮಹಾ ಮಾಯಾದೇವಿ )  ಪ್ರತಿಮೆ...