ಬೋರಿಬಂದರ್ (ಈಗಿನ ಸಿ. ಎಸ್. ಟಿ ರೈಲ್ವೆ ನಿಲ್ದಾಣ) ಮತ್ತು "ತನ್ನಾ" (ಈಗಿನ ಥಾಣೆ) ನಡುವೆ ರೈಲುಸಂಚಾರ !

ಬೋರಿಬಂದರ್ (ಈಗಿನ ಸಿ. ಎಸ್. ಟಿ ರೈಲ್ವೆ ನಿಲ್ದಾಣ) ಮತ್ತು "ತನ್ನಾ" (ಈಗಿನ ಥಾಣೆ) ನಡುವೆ ರೈಲುಸಂಚಾರ !

ಬರಹ

 

೧೫೭ ವರ್ಷಗಳ ಹಿಂದಿನ ಸವಿನೆನಪುಗಳು ಇಂದೂ ಹಸಿರಾಗಿವೆ. ಭಾರತದಲ್ಲಿ ರೈಲು ಸಂಚಾರ ವ್ಯವಸ್ಥೆಯ ಭದ್ರ ತಳಹದಿಯನ್ನು ಪ್ರಪ್ರಥಮವಾಗಿ, ಅಂದಿನ ಬೊಂಬಾಯಿನಗರದ, ಕೋಟೆ ಪ್ರದೇಶದ ಬೊಹ್ರಾ ಮುಸಲ್ಮಾನರು ವಾಸವಾಗಿದ್ದ, ಸಮುದ್ರ ತಟ, ’ಬೋರಿಬಂದರ್” ಎಂಬಲ್ಲಿ ಹಾಕಲಾಯಿತು. ಭಾರತವೆಂಬ ಬೃಹತ್ ದೇಶದ ಒಡೆಯರೆಂಬ ಭಾವನೆ ಅಂದಿನ ಬ್ರಿಟಿಷ್ ಕಂಪೆನಿ ಸರಕಾರದ ತನುಮನಗಳಲ್ಲಿ ಅವೃತವಾಗಿತ್ತು ! ಅದಕ್ಕಾಗಿ ಅತ್ಯಂತ ಆಸಕ್ತಿಯಿಂದ ನಗರ ನಿರ್ಮಾಣ, ಮೂಲಭೂತ ಸೌಕರ್ಯಗಳ ಪ್ರಾರಂಭದ ಕೆಲಸಗಳನ್ನು ಮನಃ ಪೂರ್ವಕವಾಗಿ, ಶ್ರದ್ಧೆಯಿಂದ ಮಾಡಿಮುಗಿಸಿದ್ದರು.

ಈ ಹಿನ್ನೆಲೆಯಲ್ಲಿ, ರೈಲು ಯಾನದ ಕಥೆಗೆ ಮತ್ತಷ್ಟು ಮಹತ್ವಬರುವುದು ಸ್ವಾಭಾವಿಕ !  ಈ ಚಾರಿತ್ರ್ಯಿಕ ರೈಲಿನ ಒಂದು ಬೋಗಿಯಲ್ಲಿ ನಮ್ಮಬೊಂಬಾಯಿನ ಹಿರಿಯ ಭಾರತೀಯರಾಗಿದ್ದ ಜಗನ್ನಾಥ್ ಶಂಕರ್ ಶೇಠ್ ಪ್ರಯಾಣಿಸದ್ದರಂತೆ. ತಮ್ಮ ಆತ್ಮ ಕಥೆಯಲ್ಲಿ ಅದನ್ನು ದಾಖಲಿಸಿದ್ದಾರೆ. ಓಹ್ ! ಅದೊಂದು ಸುಂದರ ಪ್ರಯಾಣ ! 

೧೮೫೧ ರಲ್ಲಿ ಕೆಲಸ ಪ್ರಾರಂಭವಾಯಿತು. ಕೇವಲ ೨೫ ತಿಂಗಳಲ್ಲಿ ಮುಗಿಯಿತು ಎನ್ನುವುದು, ಅತಿ ಮುಖ್ಯವಾದ ಸಂಗತಿ.
ಏಪ್ರಿಲ್, ೧೬ ೧೮೫೩ ಬೋರಿಬಂದರ್ ನಿಂದ " ತನ್ನ " ವರೆಗೆ(ಈಗಿನ ಥಾನೆ) ರೈಲುಯಾನ ಆರಂಭವಾಯಿತು.
ಮೇ ೧೮೭೮ ಬೋರಿಬಂದರ್ ರೈಲ್ವೆ ಸ್ಟೇಶನ್ ಆರಂಭ. ೧೦ ವರ್ಷಗಳಲ್ಲಿ ೧೬.೧೪ ಲಕ್ಷರೂ ವೆಚ್ಚದಲ್ಲಿ 
ಪ್ರಪ್ರಥಮ ಸೀಸನ್ ಟಿಕೆಟ್ ೧೮೫೪ ರಲ್ಲೇ. ಪ್ರಪ್ರಥಮ ಡೈನಿಂಗ್ ಕಾರ್ ಅಳವಡಸಲಾಗಿದ್ದು, ೧೯೦೪ ರಲ್ಲಿ,
ಮೊಟ್ಟಮೊದಲ ಉಪನಗರ ರೈಲ್ವೆ ಸೇವೆ ಶುರುವಾಗಿದ್ದು-  ವಿ. ಟಿ (ಈಗಿನ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ) ಮತ್ತು ಕುರ್ಲಾ ಗಳ ನಡುವೆ, ಫೆಬ್ರುವರಿ, ೩, ೧೯೨೫ ರಲ್ಲಿ, ಹಾಗೆಯೇ ಮೊಟ್ಟಮೊದಲ ಲೇಡೀಸ್ ಪಶ್ಚಿಮ ಸಬರ್ಬನ್ ರೈಲು ಸೇವೆ ಆರಂಭವಾದದ್ದು, ಮೇ, ೪, ೧೯೯೨ ರಲ್ಲಿ, ಪ್ರಥಮ ಜನಶತಾಬ್ದಿ ರೈಲು ಸೇವೆ ಏಪ್ರಿಲ್, ೧೬ ರಂದು, ೨೦೦೨ ರಲ್ಲಿ, ಮುಂಬೈ ಮತ್ತು "ಮಡ್ ಗಾವ್" ವರೆಗೆ. 
ಭಾರತದ ಮಹಾನ್ ರೈಲು ಯಾನ ಆರಂಭವಾದದ್ದು, ಏಪ್ರಿಲ್ ೧೬ ರಲ್ಲಿ, ೧೫೭ ವರ್ಷಗಳ ಹಿಂದೆ, ೧೪ ಡಬ್ಬಿಗಳ ಉಗಿ ಎಂಜಿನ್ ಗಾಡಿ ಬೋರಿಬಂದರ್ ನಿಂದ ೩೪ ಕಿ. ಮೀ ದೂರದ ಉಪನಗರಿ, ತನ್ನ ಗೆ ಆಗಿನ ಗವರ್ನರ್ ಲೇಡಿ ಫಾಕ್ ಲ್ಯಾಂಡ್ ರವರನ್ನು ಹೊಂದಿತ್ತು.  ೪೦೦ ಜನ ವಿಶೇಷ ಅತಿಥಿಗಳಜೊತೆಗೆ, ಆಹ್ವಾನಿತರು, ಬೈಕುಲ್ಲಾ ದಲ್ಲಿ ಒಂದು ಬಾರಿ ನಿಲ್ಲಲು,
ಮದ್ಯಾನ್ಹ ೩-೩೦ ಕ್ಕೆ ೨೧ ಗನ್ ಸೆಲ್ಯೂಟ್ ನೊಂದಿಗೆ, ಸಾವಿರಾರು ಜನರ ಕರತಾಡನದ ಧ್ವನಿಯೊಂದಿಗೆ, ೧ ಗಂಟೆ, ೧೫ ನಿಮಿಷಗಳಲ್ಲಿ, ಟೇಬಲ್ ನ ಮೇಲೆ ಆಗ ಸಿಗುವ ಹಣ್ಣುಗಳು ಆಹಾರವನ್ನು ಬಡಿಸಲಾಯಿತು. ಸಾಹಿಬ್, ಸಿಂಧ್, ಸುಲ್ತಾನ್, ಎಂಬ ಆಗಿನ ಕಾಲದ ಅತ್ಯಾಧುನಿಕ  ರೈಲ್ವೆ ಎಂಜಿನ್, ೧೮೫೧ ರಲ್ಲಿ ರೈಲುದಾರಿ ಪ್ರಾರಂಭವಾಗಿ ೨೫ ತಿಂಗಳಲ್ಲಿ ಮುಗಿಯಿತು. ೧೦ ಸಾವಿರ ಜನ, ೨೦% ಕಡಿಮೆ ಖರ್ಚಿನಲ್ಲಿ, ಪಬ್ಲಿಕ್ ಹಾಲಿಡೇ, ಏಪ್ರಿಲ್, ೧೬, ೧೮೫೩,  ಹಳ್ಳಿಯ ರೈತರು, ಮಾರ್ಗದಲ್ಲಿ ಬಂದು ಕುಂಕುಮಹಚ್ಚಿ ಆರತಿಬೆಳಗಿದರು. ೧೯೨೫ ರಲ್ಲಿ ೧೫೦ ಸರ್ವಿಚೆ, ರೈಲ್ವೆ ವಾರವನ್ನು ಆಚರಿಸುತ್ತಿದ್ದಾರೆ. ಶುಕ್ರವಾರ ಬಹುಮಾನಗಳನ್ನು ವಿತರಿಸಲಾಯಿತು.

೧೮೫೧ ರಲ್ಲಿ ರೈಲು ಯಾನದ  ಕೆಲಸ ಪ್ರಾರಂಭವಾಯಿತು. ಕೇವಲ ೨೫ ತಿಂಗಳಲ್ಲಿ ಮುಗಿಯಿತು ಎನ್ನುವುದು, ಅತಿ ಮುಖ್ಯವಾದ ಸಂಗತಿ. ಏಪ್ರಿಲ್, ೧೬,  ೧೮೫೩ ಬೋರಿಬಂದರ್ ನಿಂದ " ತನ್ನ " ವರೆಗೆ(ಈಗಿನ ಥಾನೆ) ರೈಲುಯಾನ ಆರಂಭವಾಯಿತು. ವಿ. ಟಿ.ಕಟ್ಟಡ ಇನ್ನೂ ಕಟ್ಟಿರಲಿಲ್ಲ.

ಮೇ, ೧೮೭೮ ಬೋರಿಬಂದರ್ ರೈಲ್ವೆ ಸ್ಟೇಶನ್ ಕಟ್ಟಡ ಕಟ್ಟಲು ಆರಂಭ. ೧೦ ವರ್ಷಗಳಲ್ಲಿ ೧೬.೧೪ ಲಕ್ಷ ರೂಗಳ ವೆಚ್ಚದಲ್ಲಿ, ಈ ಕಾರ್ಯ ಸಂಪನ್ನವಾಯಿತು.  ೧೬, ೧೮೫೩, ಬೊಂಬಾಯಿನ ಜನರಿಗೆ ಸಾರ್ವತ್ರಿಕ ರಜ ಘೋಷಿಸಲ್ಪ ಟ್ಟು, ಅದೊಂದು ಹಬ್ಬದ ದಿನದ ಸಂಭ್ರಮವನ್ನು ತಂದಿತ್ತು ! ಹಳ್ಳಿಯ ರೈತರು, ಮಾರ್ಗದಲ್ಲಿ ಬಂದು ರೈಲಿನ ಎಂಜಿನ್ ಗೆ  ಕುಂಕುಮಹಚ್ಚಿ, ಹಾರತೊಡಿಸಿ, ಆರತಿಬೆಳಗಿದರು. ನಮಸ್ಕಾರಮಾಡಿದರು. ಸಾವಿರಾರು ಜನ ಇದನ್ನು ನೋಡಲು ಬಂದಿದ್ದರು. ಅದೊಂದು ಅದ್ಭುತ ಪ್ರಯಾಣವೆಂಬುದು, ಎಲ್ಲರ ಬಾಯಿನಲ್ಲೂ ಕೇಳಿಬರುತ್ತಿತ್ತು.

* ಪ್ರಪ್ರಥಮ ರೈಲ್ವೆ ಸೀಸನ್ ಟಿಕೆಟ್ ಪ್ರಾರಂಭವಾದದ್ದು- ೧೮೫೪ ರಲ್ಲೇ.

* ಪ್ರಪ್ರಥಮ ಡೈನಿಂಗ್ ಕಾರ್ ಅಳವಡಸಲಾಗಿದ್ದು, ೧೯೦೪ ರಲ್ಲಿ,

* ಮೊಟ್ಟಮೊದಲ ಉಪನಗರ ರೈಲ್ವೆ ಸೇವೆ ಶುರುವಾಗಿದ್ದು- ವಿ. ಟಿ (ಈಗಿನ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ) ಮತ್ತು ಕುರ್ಲಾ ಗಳ ನಡುವೆ, ಫೆಬ್ರುವರಿ, ೩, ೧೯೨೫ ರಲ್ಲಿ,

* ಹಾಗೆಯೇ ಮೊಟ್ಟಮೊದಲ ’ಲೇಡೀಸ್ ಪಶ್ಚಿಮ ಸಬರ್ಬನ್ ರೈಲು ಸೇವೆ ’ ಆರಂಭವಾದದ್ದು, ಮೇ, ೪, ೧೯೯೨ ರಲ್ಲಿ,

* ಪ್ರಥಮ ಜನಶತಾಬ್ದಿ ರೈಲು ಸೇವೆ ಏಪ್ರಿಲ್, ೧೬ ರಂದು, ೨೦೦೨ ರಲ್ಲಿ, ಮುಂಬೈ ಮತ್ತು "ಮಡ್ ಗಾವ್" ವರೆಗೆ. ಭಾರತದ ಮಹಾನ್ ರೈಲು ಯಾನ ಆರಂಭವಾದದ್ದು, ಏಪ್ರಿಲ್ ೧೬ ರಲ್ಲಿ,

೧೫೭ ವರ್ಷಗಳ ಹಿಂದೆ, ೧೪ ಡಬ್ಬಿಗಳ ಉಗಿ ಎಂಜಿನ್ ಗಾಡಿ ಬೋರಿಬಂದರ್ ನಿಂದ ೩೪ ಕಿ. ಮೀ ದೂರದ ಉಪನಗರಿ,’ ತನ್ನ”ಗೆ ಆಗಿನ ಗವರ್ನರ್ ಜನರಲ್ ರವರ ಪತ್ನಿ,’ ಲೇಡಿ ಫಾಕ್ ಲ್ಯಾಂಡ್ ”ವರನ್ನು ವಿಶೇಷ ಅತಿಥಿಯಾಗಿ ಹೊಂದಿತ್ತು. ೪೦೦ ಜನ ವಿಶೇಷ ಅತಿಥಿಗಳಜೊತೆಗೆ, ಆಹ್ವಾನಿತರನ್ನು ಹೊತ್ತ ರೈಲು ಗಾಡಿ, ತನ್ನ ಛುಕ್, ಛುಕ್ ಶಬ್ದದೊಂದಿಗೆ, "ಬೈಕುಲ್ಲಾ " ನಿಲ್ದಾಣದಲ್ಲಿ ಒಂದು ಬಾರಿ, ನಿಂತಿದ್ದು, ನಂತರ ಮುಂದೆ ಸಾಗಿತು. ದಾ ರಿಯ ಮಧ್ಯೆ, ಎಂಜಿನ್ ಗೆ, ನೀರುಣಿಸಲು ಮಾತ್ರ ರೈಲನ್ನು ನಿಲ್ಲಿಸಲು, ಅನುಮತಿ ಮಾತ್ರ ಇತ್ತು.

ಮದ್ಯಾನ್ಹ ೩-೩೦ ಕ್ಕೆ ೨೧ ಗನ್ ಸೆಲ್ಯೂಟ್ ನೊಂದಿಗೆ, "ಬೋರಿ ಬಂದರ್  "ನಿಂದ ಶುರುವಾದ ರೈಲ್ವೆ ಯಾನ, ಸಾವಿರಾರು ಜನರ ಕರತಾಡನದ ಧ್ವನಿಯೊಂದಿಗೆ, ೧ ಗಂಟೆ, ೧೫ ನಿಮಿಷಗಳಲ್ಲಿ,’ ತನ್ನ ’ ವನ್ನು ತಲುಪಿತು.

ಡಬ್ಬಿಯಲ್ಲಿನ ಡೈನಿಂಗ್ ಟೇಬಲ್  ಮೇಲೆ ಆಗ ಸಿಗುತ್ತಿದ್ದ ಅತ್ಯುತ್ತಮವಾದ  ಹಣ್ಣುಗಳು, ಮತ್ತು ಖಾದ್ಯಾನ್ನಗಳನ್ನು, ಮತ್ತು  ಆಹಾರವನ್ನು ಬಡಿಸಲಾಯಿತು. ಸಾಹಿಬ್, ಸಿಂಧ್, ಸುಲ್ತಾನ್, ಎಂಬ ಆಗಿನ ಕಾಲದ ಅತ್ಯಾಧುನಿಕ  ರೈಲ್ವೆ ಎಂಜಿನ್, ಗಳು ತಮ್ಮ ದೈತ್ಯಬಲದಿಂದ ಡಬ್ಬಗಳನ್ನು ಎಳೆದುಕೊಂಡು ಹೋಗುತ್ತಿದ್ದವು.  ೧೮೫೧ ರಲ್ಲಿ ರೈಲುದಾರಿ ಪ್ರಾರಂಭವಾಗಿ, ಕೇವಲ ೨೫ ತಿಂಗಳಲ್ಲಿ ಮುಗಿಯಿತು.

೧೦ ಸಾವಿರ ಜನ, ಕೆಲಸಗಾರರು, ಶ್ರದ್ಧೆ, ಮತ್ತು ಅತ್ಯಂತ ಆಸಕ್ತಿಯಿಂದ ಕೆಲಸಮಾಡಿದರು. ಪೂರ್ವ ನಿರ್ಧಾರಿತ ವೆಚ್ಚಕ್ಕಿಂತ,  ೨೦% ಕಡಿಮೆ ಖರ್ಚಿನಲ್ಲಿ, ಪೂರ್ಣ ಕೆಲಸವು ಸಂಪನ್ನಗೊಂಡಿತ್ತು.

ಇಂದು ’ಮುಂಬೈನ ಸೆಂಟ್ರೆಲ್ ರೈಲ್ವೆಯ ಕರ್ಮಚಾರಿಗಳು,” ಏಪ್ರಿಲ್ ಎರಡನೆಯವಾರವನ್ನು, (ಶುಕ್ರವಾರ, ೨೦೧೦ ರ ಏಪ್ರಿಲ್ ೧೬ ರಂದು)  "ರೈಲ್ವೆ ವಾರವನ್ನಾಗಿ ಆಚರಿಸುತ್ತಿದ್ದಾರೆ."  ರೈಲುಯಾನದಲ್ಲಿ ಸೇವೆಸಲ್ಲಿಸಿದ ಕರ್ಮಚಾರಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಇದೊಂದೇ ಅಲ್ಲ ; ಈಗ ಚಾಲ್ತಿಯಲ್ಲಿರುವ ಬೃಹತ್ ಸೆಂಟ್ರೆಲ್ ರೈಲ್ವೆ, ಮತ್ತು ಅದರ ಇತರ ಶಾಖೆಗಳ ನಡುವೆ ಸೌಹಾರ್ದಯುತವಾಗಿ, ಜವಾಬ್ದಾರಿಯುತವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಪಣತೊಡುವುದು ಎಲ್ಲಕ್ಕಿಂತ ಆದ್ಯ ಕರ್ತವ್ಯವಾಗಿದೆ. ಹಾಗೆ ನೋಡಿದರೆ, ಭಾರತದ ರೈಲ್ವೆ ಇಂಜಿನಿಯರಿಂಗ್ ಕ್ಷೇತ್ರ, ಅತ್ಯಂತ ಸಕ್ಷಮವಾದದ್ದು. ಇವನ್ನು ನಾವು ರೈಲ್ವೆ ವರ್ಕ್ಸ್ ಶಾಪ್ ಗಳಲ್ಲಿ ಕಣ್ಣಾರೆ ಕಂಡಾಗ ಮಾತ್ರ ತಿಳಿಯುತ್ತದೆ. ರೈಲ್ವೆ ಇಂಜಿನಿಯರ್ ಗಳು ಅನೇಕ ಸೇತುವೆಗಳನ್ನು ರಸ್ತೆಗಳನ್ನು, ಇನ್ನೂ ಬೇರೆಬೇರೆ ಇಂಜಿನಿಯರಿಂಗ್ ವಲಯದ ಕೆಲಸಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವಷ್ಟು ಕ್ಷಮತೆಯನ್ನು ಹೊಂದಿದ್ದಾರೆ. ಅವು ’ ಅಬ್ಬ  ’ಎನ್ನಿಸುವಷ್ಟು ಬಲಿಷ್ಟವಾಗಿವೆ, ಮತ್ತು ಅನುಕರಣೀಯವಾಗಿವೆ  !

 

Courtesy by : The Central railways.

-ಟೈಮ್ಸ್ ಆಫ್ ಇಂಡಿಯ ಪತ್ರಿಕೆಯ ಸಂಗ್ರಹದಿಂದ.