ಬ್ರಹ್ಮಾಂಡದ ಕುರಿತು ಕೆಲವು ವಿಚಾರಗಳು

ಬ್ರಹ್ಮಾಂಡದ ಕುರಿತು ಕೆಲವು ವಿಚಾರಗಳು

ಬಹಳ ಹಿಂದೆಯೇ, ಸರಿಸುಮಾರು 340 ಕ್ರಿಸ್ತಪೂರ್ವದಲ್ಲಿ ಅರಿಸ್ಟಾಟಲ್ ತನ್ನ ಕೃತಿ 'On the Heavens' ನಲ್ಲಿ, ಭೂಮಿಯು ಸಮತಟ್ಟಾದ ತಟ್ಟೆಯ ಆಕಾರದ ಬದಲು ದುಂಡಗಿನ ಚೆಂಡಿನ ಆಕಾರದಲ್ಲಿದೆ ಎಂದು ಎರಡು ಅತ್ಯುತ್ತಮ ನಂಬಿಕಸ್ಥ ವಾದಗಳನ್ನು ಮಂಡಿಸಲು ಸಾಧ್ಯವಾಯಿತು. ಪ್ರಪ್ರಥಮವಾಗಿ, ಚಂದ್ರ-ಗ್ರಹಣಗಳು ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ಬರುತ್ತಿರುವುದರಿಂದ ಉಂಟಾಗುವುದೆಂದು ಅರಿತುಕೊಂಡನು. ಭೂಮಿಯ ನೆರಳು ಚಂದ್ರನ ಮೇಲೆ ಪ್ರತಿ ಗ್ರಹಣದಲ್ಲಿ ದುಂಡಾಗಿತ್ತು, ಅದು ಭೂಮಿ ಗೋಳಾಕಾರವಾಗುವುದರಿಂದ ಮಾತ್ರ ಸಾಧ್ಯವಾಗುವುದು. ಭೂಮಿಯು ಚಪ್ಪಟ್ಟೆ ಆಗಿದ್ದರೆ, ನೆರಳು ಅಂಡಾಕಾರ ಅಥವಾ ಉದ್ದವಾಗುತ್ತಿತ್ತು.

ಎರಡನೆಯದಾಗಿ, ಧ್ರುವ ನಕ್ಷತ್ರವು ಈಶಾನ್ಯ ಪ್ರದೇಶಗಳಲ್ಲಿ ನೋಡಿದ್ದಕ್ಕಿಂತ ದಕ್ಷಿಣದಿಂದ ನೋಡಿದಾಗ ಆಕಾಶದ ಕೆಳಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ಗ್ರೀಕರು ತಮ್ಮ ಪ್ರಯಾಣದಿಂದ ತಿಳಿದಿದ್ದರು. ಗ್ರೀಸ್ ಮತ್ತು ಈಜಿಪ್ಟ್‌ನಲ್ಲಿ ಧ್ರುವ ನಕ್ಷತ್ರದ ಸ್ಪಷ್ಟಸ್ಥಾನದ ವ್ಯತ್ಯಾಸದಿಂದ, ಅರಿಸ್ಟಾಟಲ್ ಭೂಮಿಯ ಸುತ್ತಲಿನ ಅಂತರವನ್ನು ನಾಲ್ಕು ಲಕ್ಷ ಸ್ಟೇಡಿಯಾ ಆಗಬಹುದೆಂದು ಅಂದಾಜಿಸಿದ್ದರು. 'Stadium’ನ ಉದ್ದ ಎಷ್ಟು ಎಂದು ನಿಖರವಾಗಿ ತಿಳಿದಿಲ್ಲದಿದ್ದರೂ, ಇದು ಸುಮಾರು ಇನ್ನೂರು ಗಜಗಳಷ್ಟು ಇರಬಹುದೆಂದು ಅಂದಾಜಿಲಾಗಿದೆ. ಅರಿಸ್ಟಾಟಲ್‌'ನ ಅಂದಾಜು ಪ್ರಸ್ತುತ ಸ್ವೀಕರಿಸಿದ ಸಂಖ್ಯೆತಾಕ್ಷರಗಿಂತ ಎರಡು ಪಟ್ಟು ಹೆಚ್ಚು ಎಂದೀಗ ತಿಳಿದುಬರುತ್ತದೆ.

ಗ್ರೀಕರು ಭೂಮಿಯು ದುಂಡಾಕಾರವಾಗಿರಬೇಕು ಎಂದು ಮೂರನೆಯ ವಾದವನ್ನೂ ಪ್ರಸ್ತಾಪಿಸಿದ್ದರು; ಇಲ್ಲದಿದ್ದರೆ, ಕ್ಷಿತಿಜದಿಂದ ಆಗಮಿಸುವ ಹಡಗಿನ ಹೊರಹೊದಿಕೆಗಳನ್ನು ಮೊದಲು ನೋಡಿ, ತದನಂತರ ಹಡಗುಗಳನ್ನು ಏಕೆ ನೋಡುತ್ತಾನೆ? ಅರಿಸ್ಟಾಟಲ್- ಭೂಮಿಯು ಸ್ಥಿರವಾಗಿದೆ; ಮತ್ತು ಸೂರ್ಯ, ಚಂದ್ರ, ಗ್ರಹಗಳು ಮತ್ತು ನಕ್ಷತ್ರಗಳು, ಭೂಮಿಯ ಸುತ್ತ ವೃತ್ತಾಕಾರದ ಕಕ್ಷೆಗಳಲ್ಲಿ ಚಲಿಸುತ್ತವೆ ಎಂದು ಭಾವಿಸಿಕೊಂಡಿದ್ದನು. ಅಧ್ಯಾತ್ಮಿಕ-ಇಂದ್ರಿಯಾತ್ಮಿಕ ಕುಂಟು ನೆಪಗಳಿಂದ ಅವರು ಭೂಮಿಯು ಬ್ರಹ್ಮಾಂಡದ ಕೇಂದ್ರ ಆಗಿತ್ತು ಮತ್ತು ಆ ವೃತ್ತಾಕಾರದ ಚಲನೆಯು ಅತ್ಯಂತ ಪರಿಪೂರ್ಣವಾಗಿದೆ ಎಂದು ಪ್ರತಿಪಾದಿಸುತ್ತಿದ್ದರು.

ಈ ಕಲ್ಪನೆಯನ್ನು ಪ್ರಪ್ರಥಮ ಶತಮಾನದಲ್ಲಿ ಟಾಲೆಮಿ Ptolemy ಕಾಸ್ಮಾಲಾಜಿಕಲ್ ಮಾದರಿಯಲ್ಲಿ (Cosmological Model) ಸಫಲವಾಗಿ ವಿವರಿಸಿದರು. ಭೂಮಿಯೂ ಎಂಟು ಬಾಹ್ಯಾಕಾಶಕಾಯ ಗೋಲುಗಳ ನಡುವೆ ಕೇಂದ್ರಿತವಾಗಿತ್ತು: ಅದುವೇ ಚಂದ್ರ, ಸೂರ್ಯ, ನಕ್ಷತ್ರಗಳು ಮತ್ತು ಆ ಕಾಲಘಟ್ಟದಲ್ಲಿ ತಿಳಿದಿರುವಂತೆ ಐದು ಗ್ರಹಗಳಾದ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ. ಗ್ರಹಗಳು ಬಾಹ್ಯಾಕಾಶದಲ್ಲಿ ಅವುಗಳ ಸಂಕೀರ್ಣವಾದ ಗಮನಿಸಿದ ಕಕ್ಷೆಗಳನ್ನು ಗುಣಿಸಿ ಆಯಾ ಕ್ಷೇತ್ರಗಳ ಸಣ್ಣ ವಲಯಗಳಲ್ಲಿ ಚಲಿಸುತ್ತವೆ. ಹೊರವಲಯದ ಬಾಹ್ಯಾಕಾಶಗೋಳವು ಆಕಾಶದ ದಿವ್ಯಗಳಾದ 'ಸ್ಥಿರ ನಕ್ಷತ್ರಗಳು' ಎಂದು ಕರೆಯಲ್ಪಡುತ್ತದೆ, ಅದು ಯಾವಾಗಲೂ ಒಂದೇ ಸ್ಥಾನಗಳಲ್ಲಿರುತ್ತಲ್ಲದೆ ಪರಸ್ಪರ ಸಂಬಂಧಿಸಿದೆ. ಕೊನೆಯದಾಗಿ, ದಿವ್ಯಗೋಲವನ್ನು ಮೀರಿರುವುದನ್ನು ಎಂದಿಗೂ ಸ್ಪಷ್ಟಪಡಿಸಲಾಗಿಲ್ಲ; ಅಲ್ಲದೆ, ಇದು ಖಂಡಿತವಾಗಿಯೂ ಮಾನವಕುಲದ ವೀಕ್ಷಿಸಬಹುದಾದ ಬ್ರಹ್ಮಾಂಡದ ಭಾಗವೂ ಆಗಿರಲಿಲ್ಲ. ಇದರರ್ಥ, ಚಂದ್ರನು ಸಾಮಾನ್ಯವಾಗಿ ಎರಡು ಪಟ್ಟು ದೊಡ್ಡದಾಗಿ ಕಾಣಿಸಿಕೊಳ್ಳಬೇಕಾಗಿತ್ತು. ಟಾಲೆಮಿಗೆ ಈ ನ್ಯೂನತೆಯ ಕುರಿತು ತಿಳಿದಿತ್ತು ಆದರೆ ಅದೇನೇ ಇದ್ದರೂ ಅವರ ಮಾದರಿ ಸಾಮಾನ್ಯವಾಗಿತ್ತು, ಸಾರ್ವತ್ರಿಕವಾಗಿಲ್ಲದಿದ್ದರೂ, ಸ್ವೀಕರಿಸಲಾಗಿತ್ತು.ಇದನ್ನು ಕ್ರಿಶ್ಚಿಯನ್ ಚರ್ಚ್ ತಮ್ಮ ಧರ್ಮಗ್ರಂಥಕ್ಕೆ ಅನುಗುಣವಾಗಿರುವ ಬ್ರಹ್ಮಾಂಡದ ಚಿತ್ರಣವನ್ನು ಒಪ್ಪಿಕೊಂಡಿತು. ಸ್ಥಿರ ನಕ್ಷತ್ರಮಂಡಳದ ಹೊರಗೆ ಅದು ಸಾಕಷ್ಟು ಜಾಗವನ್ನು ಸ್ವರ್ಗ ಮತ್ತು ನರಕಕ್ಕೆ ಬಿಟ್ಟಿರುವುದು ಅನುಕೂಲವಾಗಿ ಅದು ಹೊಂದುತ್ತಿತ್ತು...

ಟಾಲೆಮಿಯ ಮಾದರಿಯು ಬಾಹ್ಯಾಕಾಶದಲ್ಲಿ ಸ್ವರ್ಗೀಯ ದಿವ್ಯದೇಹಗಳ ಸ್ಥಾನ-ಕಕ್ಷೆಗಳನ್ನು ನಿರ್ವಹಿಸಲು ಸಮಂಜಸ-ನಿಖರವಾದ ವ್ಯವಸ್ಥೆಯನ್ನು ಪ್ರವಾದಿಸಲು ಒದಗಿಸಿತು. ಆದರೆ, ಈ ಸ್ಥಾನಗಳನ್ನು ನ್ಯಜವಾಗಿ ಮುನ್ನಡಿಸಲು, ಟಾಲೆಮಿ ಚಂದ್ರನು ಒಂದು ಕಕ್ಷೆಯನ್ನು ಅನುಸರಿಸುವವನು- ಅದು ಸಾಮಯಿತವಾಗಿ-ನಿಯತಕಾಲಿಕವಾಗಿ ಕೆಲವೊಮ್ಮೆ ಭೂಮಿಗೆ ಎರಡು ಪಟ್ಟು ಹತ್ತಿರ ಬರುತ್ತೆ ಎಂದು ಕಲ್ಪಿಸಬೇಕಾದೀತು.

-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು

(ಓದುಗರ ಗಮನಕ್ಕೆ: ಅಧಿಕ ಮಾಹಿತಿ ’ಹಾಕಿಂಗ್ ವಿಕಿರಣ’ ಎಂಬ ಲೇಖನದಲ್ಲಿದೆ. ಸಂಪದದಲ್ಲಿ 28-07-2021 ರಂದು ಪ್ರಕಟವಾಗಿದೆ)