ಬ್ರಹ್ಮಾಂಡದ ಹುಟ್ಟು: ಒಂದು ಮನಮೋಹಕ ಕಥೆ!


ಸಾಮಾನ್ಯವಾಗಿ, ರಾತ್ರಿಯ ಆಕಾಶವು ರಸಿಕರಿಗೆ ನೈಸರ್ಗಿಕ ಸೌಂದರ್ಯದ ಬಡಿದಿಟ್ಟ ರಸದೌತಣವಾಗಿದೆ. ತಿಂಗಳಿನ ಬೆಳದಿಂಗಳು... ಮಿನುಗುವ ಅಗಣಿತ ತಾರೆಗಳು... ಧೂಮಕೇತುಗಳು.. ಇತ್ಯಾದಿಗಳು ಕವಿಮನಸ್ಸಿನವರಿಗೆ ಕವಿತೆಗಳನ್ನು ರಚಿಸಲು ಪ್ರೇರಿಸುತ್ತವೆ. ಆದರೆ, ಒಮ್ಮೊಮ್ಮೆ ಈ ಸುಂದರ ಬ್ರಹ್ಮಾಂಡ ಹೇಗೆ ಹುಟ್ಟಿಕೊಂಡಿತು ಎಂಬ ಪ್ರಶ್ನೆಯೂ ಕಾಡಿದ್ದುಂಟು! ಬಹಳ ಹಿಂದಿನಿಂದಲೂ ಬುದ್ಧಿಜೀವಿಗಳು, ಚಿಂತಕರು – ಈ ಕಾಡುವ ಪ್ರಶ್ನೆಯನ್ನು ಉತ್ತರಿಸಲು ಯತ್ನಿಸಿದ್ದರು. ಆದರೆ, ಅವರಲ್ಲಿ ವೈಜ್ಞಾನಿಕ ಪುರಾವೆಗಳ ಕೊರತೆಯಿರುವುದರಿಂದ ಅವರ ಸಿದ್ಧಾಂತಗಳು ವಿಫಲಗೊಂಡವು.
ಆಧುನಿಕ ವಿಜ್ಞಾನಿಗಳ ಪ್ರಕಾರ ನಮ್ಮ ಭೂಮಿ, ಆಕಾಶ, ಸೂರ್ಯ, ಚಂದ್ರ, ಸುಸೂತ್ರವಾಗಿ ತಮ್ಮ ಕಕ್ಷೆಗಳ ಮೇಲೆ ತೇಲುತ್ತಿರುವ ಗ್ರಹಗಳ ಸಾಲು... ಇವೆಲ್ಲವೂ ಒಂದು ಬೃಹತ್ ಸ್ಫೋಟದೊಂದಿಗೆ ಹುಟ್ಟಿಕೊಂಡಿತ್ತು. ಸರಳ ಭಾಷೆಯಲ್ಲಿ ಆ 'ಮಹಾಸ್ಪೋಟ'ವನ್ನು 'Big Bang' ಎಂದು ಕರೆಯುತ್ತಾರೆ.
"ಬಿಗ್ ಬ್ಯಾಂಗ್" ಎಂದರೆ ಏನು?: ಸರಿಸುಮಾರು, 10ರಿಂದ 15 ಶತಕೋಟಿ ವರ್ಷಗಳ ಹಿಂದೆ 'ಬಿಗ್ ಬ್ಯಾಂಗ್' ಎಂಬ ಸ್ಫೋಟದಲ್ಲಿ ಬ್ರಹ್ಮಾಂಡವು ಇದ್ದಕ್ಕಿದ್ದಂತೆ ಪ್ರಾರಂಭವಾಯಿತು ಎಂದು ಖಗೋಳ ತಜ್ಞರು ನಂಬುತ್ತಾರೆ. ವಿಪರೀತ ಶಾಖದ ಪರಿಸ್ಥಿತಿಗಳಲ್ಲಿ, ಬ್ರಹ್ಮಾಂಡವನ್ನು ರೂಪಿಸುವ ಎಲ್ಲಾ "Matter" ಮತ್ತು "Energy"ಯು ಜಾಗವನ್ನು ಸೃಷ್ಟಿಸಲು ಹರಡುತ್ತದೆ. "ಖಗೋಳಶಾಸ್ತ್ರಜ್ಞರು" ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಬ್ರಹ್ಮಾಂಡವನ್ನು ಅಧ್ಯಯನ ಮಾಡುವ ತಜ್ಞರು `ಬಿಗ್ ಬ್ಯಾಂಗ್´ ಸಂಭವಿಸಿದೆ ಎಂದು ವೈಜ್ಞಾನಿಕ ಪೂರಾವೆಗಳೊಂದಿಗೆ ಸಾಬೀತುಪಡಿಸುವಲ್ಲಿ ವಿಫಲಗೊಂಡಿದ್ದಾರೆ. ಆದರೂ, ಅವರು ಬಿಗ್ ಬ್ಯಾಂಗ್ ನ ಪರಿಕಲ್ಪನೆಯನ್ನು ಎತ್ತಿ ಹಿಡಿಯುವ ಪುರಾವೆಗಳನ್ನು ಕಂಡುಕೊಂಡಿದ್ದಾರೆ.
'ಬಿಗ್ ಬ್ಯಾಂಗ್' ಮತ್ತು ಆ ಸ್ಪೋಟದ ನಂತರ…: ಬಿಗ್ ಬ್ಯಾಂಗ್ ನ ಸಮಯದಲ್ಲಿ ಬ್ರಹ್ಮಾಂಡವು ಬಹಳ ಉಷ್ಣವಾಗಿತ್ತು; ಮತ್ತು ಬಿಗಿಯಾಗಿ ಪ್ಯಾಕ್ ಆಗಿತ್ತು. ಬಿಗ್ ಬ್ಯಾಂಗ್ ಸ್ಪೋಟದ ನಂತರ ಬ್ರಹ್ಮಾಂಡವು ತ್ವರಿತವಾಗಿ ತಣ್ಣಗಾಗಲು ಮತ್ತು ವಿಸ್ತರಿಸಲು ಪ್ರಾರಂಭಗೊಂಡಿತು. ಸ್ಪೋಟಗೊಂಡ ನಿಮಿಷಗಳಲ್ಲೇ, ವಸ್ತುವಿನ ಕಣಗಳು ಹೈಡ್ರೋಜನ್ ಮತ್ತು ಹೀಲಿಯಂನ ಪರಮಾಣುಗಳನ್ನು ರಚಿಸಿದವು. ಆ ಪರಮಾಣುಗಳು ನಂತರ ನಕ್ಷತ್ರಗಳನ್ನು ರೂಪಿಸಿದವು; ಇದು ಗ್ರಹಗಳ ಸೃಷ್ಟಿಗೂ ಕಾರಣವಾಯಿತು. ಆಧುನಿಕ ಖಗೋಳತಜ್ಞರ ಪ್ರಕಾರ, ಬ್ರಹ್ಮಾಂಡವು ಇನ್ನೂ ವಿಸ್ತಾರಗೊಳ್ಳುತ್ತಿದೆ.
'ಬಿಗ್ ಬ್ಯಾಂಗ್' ಸಿದ್ಧಾಂತಕ್ಕೆ ಸಾಕ್ಷ್ಯಾಧಾರಗಳು: ಖಗೋಳತಜ್ಞರು ಬಿಗ್ ಬ್ಯಾಂಗ್ ಸಿದ್ಧಾಂತವನ್ನು ಎತ್ತಿ ಹಿಡಿಯುವ ಹಲವಾರು ಸಾಕ್ಷ್ಯಾಧಾರಗಳನ್ನು ಹೊಂದಿದ್ದಾರೆ.
ಮೊದಲನೆಯದಾಗಿ, ಅವರು ಇಂದು ವಿಶ್ವದಲ್ಲಿ ಹೀಲಿಯಂ ಮತ್ತು ಇತರ ರಾಸಾಯನಿಕ ಅಂಶಗಳ ಪ್ರಮಾಣವನ್ನು ಅಳೆಯುತ್ತಿದ್ದಾರೆ. ಆ ಮೊತ್ತಗಳು ಬಿಗ್ ಬ್ಯಾಂಗ್ ಸಿದ್ಧಾಂತದ ಪ್ರಕಾರ ಅಸ್ತಿತ್ವದಲ್ಲಿರಬೇಕು ಎಂದು ಖಗೋಳತಜ್ಞರು ಲೆಕ್ಕ ಹಾಕಿದ ಸಂಖ್ಯೆಗಳಿಗೆ ಹೊಂದಿಕೆಯಾಗುತ್ತಿವೆ.
ಎರಡನೆಯದಾಗಿ, 1920ರ ದಶಕದಲ್ಲಿ ಖಗೋಳಶಾಸ್ತ್ರಜ್ಞರು ಪ್ರತಿ ನಕ್ಷತ್ರಪುಂಜವು ನೆರೆಯ ನಕ್ಷತ್ರಪುಂಜದಿಂದ ದೂರ ಹೋಗುತ್ತಿದೆ ಎಂದು ಕಂಡುಹಿಡಿದರು. ಆಧುನಿಕ ಬೃಹತ್ ದೂರದರ್ಶಕಗಳನ್ನು ಬಳಸುವ ಮೂಲಕ, ಖಗೋಳಶಾಸ್ತ್ರಜ್ಞರು ಇತರ ನಕ್ಷತ್ರಪುಂಜಗಳಿಂದ ಬರುವ ಬೆಳಕನ್ನು ಅಳೆಯಬಹುದು. ಭೂಮಿಯ ನಕ್ಷತ್ರಪುಂಜ, ಕ್ಷೀರಪಥ [Milky way] ಸೇರಿದಂತೆ ಎಲ್ಲಾ ನಕ್ಷತ್ರಪುಂಜಗಳು ಪರಸ್ಪರ ದೂರ ಹೋಗುತ್ತಿವೆ; ಮತ್ತು ಆದ್ದರಿಂದ, ಬ್ರಹ್ಮಾಂಡವು ವಿಸ್ತರಿಸುತ್ತಿದೆ ಎಂದು ಮಾಪನಗಳು ತೋರಿಸುತ್ತವೆ.
ಮೂರನೆಯದಾಗಿ, ಬಿಗ್ ಬ್ಯಾಂಗ್ ನಿಂದ ಉಳಿದಿರುವ ಅಲೆಗಳು ಇಂದೂ ಬ್ರಹ್ಮಾಂಡದಲ್ಲಿ ಎಲ್ಲೆಡೆ ಇದೆ ಎಂದು ಖಗೋಳಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಖಗೋಳಶಾಸ್ತ್ರಜ್ಞರು 1965ರಲ್ಲಿ ಕಾಸ್ಮಿಕ್ ಮೈಕ್ರೋವೇವ್ ಹಿನ್ನೆಲೆ ವಿಕಿರಣ ಎಂದು ಕರೆಯಲ್ಪಡುವ ಶಕ್ತಿಯನ್ನು ಕಂಡುಕೊಂಡರು.
ಇದನ್ನು ಕಂಡುಹಿಡಿದ ವಿಜ್ಞಾನಿಗಳು ತಮ್ಮ ಕೆಲಸಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆಡಿದ್ದಾರೆ. ಎಲ್ಲವು ಒಳಗೊಂಡ ನಮ್ಮ ಬ್ರಹ್ಮಾಂಡವು ಒಂದು ಬೃಹತ್ ಸ್ಪೋಟದಿಂದ ಹುಟ್ಟಿಕೊಂಡಿದೆ ಎಂದು ಆಧುನಿಕ ವೈಜ್ಞಾನಿಕ ಲೋಕವು ಸಾಕ್ಷ್ಯ ಸಮೇತ ಒಪ್ಪಿಕೊಂಡಿದೆ!
-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ