ಬ್ರಹ್ಮಾಸ್ತ್ರ, ಜಗದ ಮೊದಲ ಅಣು ಬಾಂಬ್!


ಜುಲೈ 16, 1945, ಅಲಾಮೊಗೋಡರ್ೊ, ಮೆಕ್ಸಿಕೋ. ಅಮೆರಿಕಾದ ನೂರಾರು ಸೈನಿಕರು ಮತ್ತು ವಿಜ್ಞಾನಿಗಳು ಜೊರಾಂಡ ಡೆಲ್ ಮಾಟರ್ೋ ಮರುಭೂಮಿಯಲ್ಲಿ ಸೇರಿದ್ದರು. ಅವತ್ತು ಹೊಸದಾದ ಒಂದು ಬಲಿಷ್ಟ ಆಯುಧ ಪರೀಕ್ಷೆ ಇತ್ತು. ಇದರ ಬಗ್ಗೆ ಅವ್ರಲ್ಲೇ ಕೆಲವು ನಂಬಿಕೆಗಳಿದ್ದವು. ಕೆಲವ್ರು ಇದು ಪೂತರ್ಿ ಫೆಯ್ಲ್ಯೂರ್ ಆಗುತ್ತೆ ಅಂದ್ಕೊಂಡ್ರೆ, ಇನ್ ಕೆಲವ್ರು ಇದು ಇಡೀ ಮೆಕ್ಸಿಕೋ ರಾಷ್ಟ್ರವನ್ನು ಸುಟ್ಟು ಹಾಕುತ್ತೆ ಅಂತ ಭಾವಿಸಿದ್ದರು. ಮುನ್ನೆಚ್ಚರಿಕೆಯ ಕ್ರಮವಾಗಿ ವೀಕ್ಷಣಾ ಕೇಂದ್ರಗಳನ್ನು ಸ್ಪೋಟಗೊಳ್ಳುವ ಸ್ಥಳದಿಂದ 10-15 ಮೈಲಿ ದೂರದಲ್ಲಿ ರೂಪಿಸಲಾಗಿತ್ತು.
5 ಗಂಟೆ 29 ನಿಮಿಷ 45 ಸೆಕೆಂಡಿಗೆ ವಿಶ್ವದ ಮೊದಲ ಅಣುಬಾಂಬ್ನ ಪರೀಕ್ಷೆ ನಡೀತು. ಸ್ಪೋಟಗೊಂಡ ಬೆಂಕಿಯ ಉಂಡೆ 600 ಅಡಿಗಳನ್ನು ಆವರಿಸಿಕೊಂಡಿತ್ತು. ಅದರ ಫೋಸರ್್ 20 ಟನ್ ಟಿಎನ್ಟಿಯಷ್ಟಿತ್ತು. ಆ ಬೆಂಕಿಯುಂಡೆಗಳ ಉರಿ ಹೊಗೆ ಏಳು ಮೈಲಿಗಳಷ್ಟು ಎತ್ತರಕ್ಕೆ ರಾಚುತಿತ್ತು. ಸ್ಪೋಟದ ಪ್ರತಿಧ್ವನಿ 100 ಮೈಲುಗಳನ್ನು ಹಬ್ಬಿತ್ತು. ಅವತ್ತು ಮನುಕುಲದ ಕೈಗೆ ಮತ್ತೊಂದು ಪ್ರಬಲ ಆಯುಧ ಸೇರ್ಪಡೆಯಾದಂತಾಯ್ತು. ಸ್ಫೋಟವನ್ನು ಕಂಡ ಆ ಆಯುಧದ ಸೃಷ್ಟಿಕರ್ತ ಡಾ. ರಾಬಟರ್್ ಒಪೆನ್ಹೈಮರ್ ಕೂಡ ಬಿಚ್ಚಿಬಿದ್ದಿದ್ರು. ಭೂಮಿ ಮೊದಲ ಬಾರಿಗೆ ಮಾನವ ನಿಮರ್ಿತ ಆಯುಧದಿಂದ ಆಕ್ರಮಣಗೊಂಡಿತ್ತು. ಅಂದ್ಹಾಗೆ ಭೂಮಿಯ ಜೀವಿತಾವಧಿಯಲ್ಲಿ ಕಂಡ ಅತ್ಯಂತ ಪ್ರಬಲ ಸ್ಫೋಟ ಇದುವೇನಾ?
ಇದಕ್ಕೂ ಮುಂಚೆಯೇ ಅಣುಬಾಂಬ್ನಂತಹ ಸ್ಫೋಟಗಳು ನಡೆದಿರುವ ಬಗ್ಗೆ ವಿಜ್ಞಾನಿಗಳು ಅಭಿಪ್ರಾಯಪಡ್ತಾರೆ. ಅಂತಹ ಸ್ಫೋಟದ ಕುರುಹುಗಳು ಒಂದು ಪವಿತ್ರ ಗ್ರಂಥದಲ್ಲಿ ಸಿಗುತ್ತೆ. ಅದುವೇ ಹಿಂದೂಗಳ ಪವಿತ್ರ ಗ್ರಂಥ ಮಹಾಭಾರತ.
ಹೌದು ಈ ವಾದಕ್ಕೆ ಅಣುಬಾಂಬ್ನ ಸೃಷ್ಟಿಕರ್ತ ಡಾ. ರಾಬಟರ್್ ಒಪನ್ಹೈಮರ್ ಕೂಡ ಭಗವದ್ಗೀತೆಯ ಒಂದು ಶ್ಲೋಕದಿಂದ ಸ್ಪಷ್ಟೀಕರಣ ನೀಡ್ತಾರೆ. ಅಂದ್ಹಾಗೆ ಅಣುಬಾಂಬ್ ಮೊದಲ ಬಾರಿ ಬಳಸಿದ್ದು ಭಾರತೀಯರಾ? ಅದು ಹೇಗೆ ಅನ್ನೋದನ್ನ ತಿಳಿಯೋಕು ಮುನ್ನ ವಿಶ್ವದ ಹಲವು ರಾಷ್ಟ್ರಗಳಲ್ಲಿ ಅಣುಬಾಂಬ್ಗಳ ಇತಿಹಾಸದ ಬಗ್ಗೆ ತಿಳಿಯೋಣ.
ಇದಾಗ್ಲೇ ತಿಳಿದ ಹಾಗೆ ಅಮೆರಿಕ ಮೊದಲ ಅಣುಬಾಂಬ್ ರೂಪಿಸಿತ್ತು. ಅಷ್ಟೇ ಅಲ್ಲ ಅದನ್ನು ಜಪಾನ್ನ ಹಿರೋಷಿಮಾ ಮತ್ತು ನಾಗಸಾಕಿ ಪಟ್ಟಣಗಳ ಮೇಲೆ ಹಾಕುವ ಮೂಲಕ ತನ್ನ ಶಕ್ತ ಏನೆಂಬುದನ್ನು ಅಮೆರಿಕ ಸಾಬೀತುಪಡಿಸಿತ್ತು. ಬಾಂಬ್ನಿಂದಾಗಿ ಅಪಾರ ಸಾವು-ನೋವುಗಳಾಗಿದ್ದವು. ಈ ವೇಳೆ ಅಣುಬಾಂಬ್ನ ಅಗತ್ಯವೆಷ್ಟು ಎಂಬುದನ್ನ ಅರಿತ ಯುಎಸ್ಎಸ್ಆರ್ ನಾಯಕ ಜೋಸೆಫ್ ಸ್ಟಾಲಿನ್ ಅಣುಬಾಂಬ್ ಷೃಷ್ಟಿಗೆ ಮುಂದಾದ್ರು. ಪರಿಣಾಮ ಆಗಸ್ಟ್ 29, 1949 ಯುಎಸ್ಎಸ್ಆರ್ ಕೂಡ ತನ್ನ ಮೊದಲ ಅಣುಬಾಂಬ್ ರೂಪಿಸಿ, ಯಶಸ್ವಿ ಪರೀಕ್ಷೆ ನಡೆಸ್ತು.
ರಷ್ಯಾದ ನಂತರ ಬ್ರಿಟನ್ ಕೂಡ ಅಕ್ಟೋಬರ್ 03, 1952 ರಂದು ತನ್ನ ಮೊದಲ ಒಂದು ಅಣುಬಾಂಬ್ ರೂಪಿಸಿ, ಪರೀಕ್ಷಿಸಿತ್ತು. ಬ್ರಿಟನ್ ಹಿಂದೆಯೇ ಪ್ರಾನ್ಸ್ ಕೂಡ ಫೆಬ್ರವರಿ 13, 1960 ರಲ್ಲಿ ತನದೂ ಒಂದು ಅಣುಬಾಂಬ್ ಸೃಷ್ಟಿಸಿ, ಪರೀಕ್ಷೆ ನಡೆಸಿತ್ತು. ಇದಾದ ನಂತರ ಬಂದ ಬಾಂಬ್ ಅಣುಬಾಂಬ್ಗಳ ರಾಜ. ಅದು ಬಹುದೊಡ್ಡ ಹೈಡೋಜನ್ ಬಾಂಬ್. ಅದರ ಹೆಸ್ರು ತ್ಸಾರ್. ಇದನ್ನ ಅಕ್ಟೋಬರ್ 30, 1961 ರಷ್ಯಾ ರೂಪಿಸಿತ್ತು. ರಷ್ಯಾದ ಶಕ್ತಿ ಪ್ರದರ್ಶನದ ನಂತರ ಚೀನಾ ಕೂಡ ಅಕ್ಟೋಬರ್ 16, 1964 ತನ್ನ ಮೊದಲ ಅಣುಬಾಂಬ್ ಪರೀಕ್ಷೆ ನಡೆಸಿತ್ತು. ಈ ವೇಳೆಗೆ ಒಬ್ಬ ಸ್ಮೈಲಿಂಗ್ ಬುದ್ಧ ಮೇ 18, 1974ರಲ್ಲಿ ಧರೆಗೆ ಬಂದ. ಇದು ಭಾರತದ ಮೊಟ್ಟ ಮೊದಲ ಅಣುಬಾಂಬ್. ಭಾರತ ಅಣುಬಾಂಬ್ ರೂಪಿಸಿದ್ದೇ ತಡ ಪಾಕ್ ಕೂಡ 1998ರಲ್ಲಿ ಒಂದು ಅಣುಬಾಂಬ್ ರೂಪಿಸಿಬಿಡ್ತು.
ಇದರ ಜೊತೆ ಜೊತೆಗೆ ಅಂದ್ರೆ 1979ರಲ್ಲಿ ಇಸ್ರೇಲ್ ಹಾಗೂ 2009ರರಲ್ಲಿ ಉತ್ತರ ಕೋರಿಯಾ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ತಾನೂ ಅಣ್ವಸ್ತ್ರಗಳಿಂದ ಕೂಡಿದ ಶಕ್ತಶಾಲಿ ಅನ್ನೋದನ್ನ ತೋರಿಸಿಕೊಟ್ಟಿದೆ. ಇವತ್ತು ಭತರ್ಿ ಒಂಬತ್ತು ರಾಷ್ಟ್ರಗಳ ಬಳಿ ಅಣ್ವಸ್ತ್ರಗಳಿವೆ. ಮುಂದೇನಾದ್ರೂ ಮೂರನೇ ವಿಶ್ವ ಮಹಾಯುದ್ಧವಾದ್ರೆ ಮನುಕುಲ ತನ್ನಿಂದ ಸೃಷ್ಟಿಯಾದ ಮಾರಕಾಸ್ತ್ರಗಳಿಂದ ಸರ್ವನಾಶವಾಗುವುದಂತೂ ಖಂಡಿತ.
ಸರ್ವನಾಶವಂತೂ ಶತಸಿದ್ಧ ಅನ್ನೋಕೆ ಹಿರೋಷಿಮಾ ಮತ್ತು ನಾಗಸಾಕಿ ಉದಾಹರಣೆಗಳಂತೆ ನಿಂತಿವೆ. ಇದಕ್ಕಿಂತ ಅಚ್ಚರಿಯ ವಿಚಾರ ಅಂದ್ರೆ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಇಂತಹದ್ದೊಂದು ಸರ್ವನಾಶ ಆಗಿರುವ ನಗರ.
ಆಗಸ್ಟ್ 06, 1945, ಜಪಾನ್. ಅವತ್ತು ಅಮೆರಿಕ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿತ್ತು. ಹಾಗಾಗಿಯೇ ಯುಎಸ್ಎ, ಜಪಾನ್ ರಾಷ್ಟ್ರದ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ತನ್ನ ಅಣುಬಾಂಬ್ ಲಿಟಲ್ ಬಾಯ್ನನ್ನು ಎಸೆದಿತ್ತು. ಲಕ್ಷಾಂತರ ಮಂದಿ ಅಸುನೀಗಿದ್ದರು. ಅದರ ಚಹರೆ ಇಂದಿಗೂ ಜಪಾನ್ನಲ್ಲಿ ಉಳಿದುಕೊಂಡಿದೆ. ಆಗಸ್ಟ್ 06ರ ದಿನವನ್ನ ಮನುಕುಲ ಎಂದಿಗೂ ಮರೆಯದಂತೆ ಮಾಡಿತ್ತು. ಅಂತಹದ್ದೊಂದು ಆಕ್ರಮಣ ಜಪಾನ್ನ ಮೇಲಾಗಿತ್ತು. ಅದುವೇ ಮೊದಲ ಸಲ ಅಂತ ಅಂದ್ಕೊಂಡಿದ್ದ್ರು. ಆದ್ರೆ ಜಪಾನ್ ರಾಷ್ಟ್ರಕ್ಕೂ ಮುನ್ನವೇ ಒಂದು ನಗರ ಸರ್ವನಾಶವಾಗಿತ್ತು. ಅದು ಭತರ್ಿ 4000 ವರ್ಷಗಳ ಹಿಂದೆ...
ಅದರ ಬಗ್ಗೆ ಲಿಖಿತ ದಾಖಲೆ ಇರೋದು ಭಾರತೀಯರ ಪವಿತ್ರ ಗ್ರಂಥ ಮಹಾಭಾರತದಲ್ಲಿ. ಇದು ಕ್ರಿ.ಪೂ. 5 ಮತ್ತು 2ನೇ ಶತಮಾನದಲ್ಲಿ ರಚಿತವಾಯ್ತು. ಒಂದು ಲಕ್ಷ ಶ್ಲೋಕಗಳ ಈ ಬೃಹತ್ ಗ್ರಂಥ ಕೃಷ್ಣನ ಕಥೆ ಹೇಳುತ್ತದೆ. ಇದು ನಡೆದದ್ದು 12 ಸಾವಿರ ವರ್ಷಗಳ ಹಿಂದೆ. ಅಥರ್ಾತ್ ಮೆಸಪಟೋಮಿಯಾ ನಾಗರೀಕತೆಗೂ 5 ಸಾವಿರ ವರ್ಷಗಳ ಮುಂಚೆ. ಪಾಶ್ಚಾತ್ಯ ವಿಜ್ಞಾನಿಗಳ ಪ್ರಕಾರ ಮಹಾಭಾರತ ಆಧುನಿಕ ಕಾಲದ ವೈಜ್ಞಾನಿಕ ಕಾದಂಬರಿಯಂತೆ. ಆಗಿನ ಯುದ್ಧಗಳಲ್ಲಿ ಕೇವಲ ಹಾರುವ ಸಾರೋಟುಗಳು ಮಾತ್ರವಲ್ಲ, ಅತ್ಯಾಧುನಿಕ ತಂತ್ರಜ್ಞಾನದ ಆಯುಧಗಳ ಬಳಕೆಯೂ ಅವರನ್ನ ಚಿಂತನೆಗೆ ಹಚ್ಚಿದೆ. ಅದ್ರಲ್ಲೂ ಮುಖ್ಯವಾಗಿ ಕಾಡುವ ಅಸ್ತ್ರ ಬ್ರಹ್ಮಾಸ್ತ್ರ
ಈ ಬ್ರಹ್ಮಾಸ್ತ್ರ ಬಳಸಿದ ಕೂಡ್ಲೇ ಜನ ಸುಟ್ಟಬೂದಿಯಾದರಷ್ಟೇ ಅಲ್ಲ, ಕಮರಿಹೋದ್ರು, ಇಂತಹ ವಿವರಣೆಗಳು ಮಹಾಭಾರತದಲ್ಲಿ ಕಾಣಬಹುದು. ಇಂತಹದ್ದೊಂದು ಸ್ಫೋಟದ ಬಗ್ಗೆ ಪ್ರಾಚೀನ ಗಗನಯಾತ್ರಿಕ ಸಿದ್ಧಾಂತಿಗಳ ಹೊಸದೊಂದು ರಹಸ್ಯವನ್ನು ಬಿಚ್ಚಿಟ್ಟರು. ಆ ರಹಸ್ಯ ಏನು ಅಂದ್ರೆ ಬ್ರಹ್ಮಾಸ್ತ್ರ ಮೊತ್ತಮೊದಲ ಅಣ್ವಸ್ತ್ರ!
ಕೆಲವು ಸಂಶೋಧಕರ ಪ್ರಕಾರ ಮಹಾಭಾರತದಲ್ಲಿ ಅಣ್ವಸ್ತ್ರದ ಬಗ್ಗೆ ಯಾವುದೇ ದಾಖಲೆಯಿಲ್ಲ. ಅಲ್ಲಿರುವುದು ಕೇವಲ ಯುದ್ಧ ಮತ್ತು ಅತ್ಯಂತ ಪ್ರಬಲ ಸ್ಫೋಟಗಳ ಮಾಹಿತಿ ಮಾತ್ರ. ಅದಕ್ಕಿಂತ ಸೂಕ್ತವಾಗಿ ಹೇಳಬೇಕಂದ್ರೆ ಯುದ್ಧಗಳಲ್ಲಿ ಸ್ಫೋಟಗಳ ಸೂಚನೆಯನ್ನು ಗ್ರಂಥ ತಿಳಿಸುತ್ತದೆ ಅಂತಾರೆ.
ಇಂತಹ ಸಂಶೋಧಕರ ಬಾಯಿ ಮುಚ್ಚಿಸೋಕೆ ಒಂದು ಉಲ್ಲೇಖವಿದೆ. ಆ ಉಲ್ಲೇಖದ ಪ್ರಕಾರ ಮಹಾಭಾರತದಲ್ಲಿ ಅಣ್ವಸ್ತ್ರ ಬಳಸಿರುವುದು ನಿಜವೆಂಬುದನ್ನು ಪ್ರತಿಪಾದಿಸುತ್ತದೆ. ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಉಂಟಾದ ಸ್ಫೋಟ ಸಾವಿರ ಸೂರ್ಯರ ಶಕ್ತಿ ಸಮವಾಗಿತ್ತಂತೆ. ಅಸ್ತ್ರ ಪ್ರಯೋಗವದ ಕೂಡ್ಲೇ ಸೂರ್ಯ ಅತ್ಯಂತ ವೇಗವಾಗಿ ಚಲಿಸಲಾರಂಭಿಸಿದ್ನಂತೆ. ಅದ್ರಿಂದಾಗಿ ಚಂಡಮಾರುತವುಂಡಾಗಿ ಸರ್ವನಾಶವುಂಟಾಯ್ತು. ಸ್ಫೋಟದ ನಂತರ ಅದೆಷ್ಟೋ ಮಂದಿ ಸತ್ತರು. ಅಳಿದುಳಿದ ಮಂದಿಯ ಕೂದಲು ಮತ್ತು ಉಗುರುಗಳು ಉದುರಿದ್ವಂತೆ. ವಾತಾವರಣ ವಿಷಮಯವಾಯ್ತು ಅನ್ನೋದು ಉಲ್ಲೇಖದಲ್ಲಿರೋ ಮಾಹಿತಿ.
ಮಹಾಭಾರತ ನಿಜವೇ ಆಗಿದ್ದಲ್ಲಿ ಅದರ ಬಗೆಗಿನ ಯಾವುದಾದ್ರೂ ಕುಹುಗಳನ್ನು ಭಾರತೀಯ ಪುರಾತತ್ವ ಅಧಿಕಾರಿಗಳು ಗುತರ್ಿಸಿದ್ದಾರಾ? ಈ ಪ್ರಶ್ನೆಗೆ ಭಾರತೀಯ ಪುರಾತತ್ವ ಅಧಿಕಾರಿಗಳ ಬಳಿ ಉತ್ತರವಿದೆ.
ಸಿಂಧೂ ಕಣಿವೆ, ಈಗೀನ ಪಾಕಿಸ್ತಾನ. 1922ರಲ್ಲಿ ಭಾರತೀಯ ಪುರಾತತ್ವ ಸಂಶೋಧಕರು ಅತಿ ಪುರಾತನ ನಾಗರೀಕತೆಯ ನಗರವನ್ನು ಶೋಧಿಸಿದ್ರು. ಅದುವೇ ಮಹೆಂಜೋದರೋ ನಗರ. ಪ್ರಮುಖ ಪ್ರಾಚ್ಯಶಾಸ್ತ್ರಜ್ಞರ ಪ್ರಕಾರ ಮಹೆಂಜೋದರೋ ನಗರ ಅಂದ್ರೆ ಸತ್ತವರ ದಿಬ್ಬ. ಇದು ಕ್ರಿ.ಪೂ 2600 - ಕ್ರಿ.ಪೂ. 1900 ರ ಮಧ್ಯೆ ನಾಶಗೊಂಡಿದೆ ಎಂಬುದು ವಿಜ್ಞನಿಗಳ ವಾದ. ಆದ್ರೆ ಪಾಕಿಸ್ತಾನಿ ವಿಜ್ಞಾನಿಗಳ ಪ್ರಕಾರ ಮಹೆಂಜೋದರೋ ನಗರ ತುಂಬಾ ಪುರಾತನವಾದದ್ದು.
ಒಂದು ಕಾಲದಲ್ಲಿ ಮಹೆಂಜೋದರೋ ಹವಾಮಾನ ವೈಪರಿತ್ಯಗಳಿಂದಾಗಿ ನಿಷಿದ್ಧಗೊಂಡಿತ್ತಂತೆ. ಇದಕ್ಕೆ ಪೂರಕವೆಂಬಂತೆ 1922ರ ಉತ್ಖನನದ ವೇಳೆ 44 ಅಸ್ಥಿಪಂಜರಗಳು ದೊರೆತವು. ಇವುಗಳ ಮುಖ ಕೆಳಗೆ ಮಾಡಿ, ಕೈಗಳು ಮೇಲೆತ್ತಿಕೊಂಡಿದ್ದವು. ಅವು ಮೂಲ ನಗರದ ಬೀದಿಗಳಲ್ಲಿ ಬಿದ್ದಿದ್ದವು. ವಿಶೇಷ ಅಂದ್ರೆ ಅಸ್ಥಿಗಳ ಮುಖ ಮತ್ತು ದೇಹ ಸ್ಥಿತಿ ಗುತರ್ಿಸಿದ್ರೆ ಅವ್ರು ಹಠಾತ್ ದುರ್ಮರಣಕ್ಕೆ ತುತ್ತಾಗಿರಬಹುದೆಂದು ತಿಳಿದುಬರುತ್ತದೆ.
ಇಲ್ಲಿ ಮುಖ್ಯವಾಗಿ ಕಾಡುವ ಪ್ರಶ್ನೆ ಅಂದ್ರೆ ಮಹೆಂಜೋದರೋ ನಗರದ ಮಂದಿ ರಸ್ತೆಗಳಲ್ಲಿ ಹೀಗೆ ಹೆಣವಾಗಿದ್ದು ಯಾಕೆ? ಅವುಗಳ ಬಗ್ಗೆ ಪ್ರಾಚ್ಯಶಾಸ್ತ್ರಜ್ಞರು ಉತ್ತರಿಸಬೇಕಿದೆ. ನಿಜವಾಗಿ ಏನಾಗಿರಬಹುದು? ಹೆಣಗಳನ್ನು ಯಾವುದೇ ಪ್ರಾಣಿಗಳು ಟಚ್ ಕೂಡ ಮಾಡಿಲ್ಲ ಯಾಕೆ? ಇಷ್ಟು ವರ್ಷಗಳು ಕಳೆದ್ರೂ ಮೂಳೆಗಳಿಗೆ ಒಂಚೂರು ಮುಕ್ಕಾಗಿಲ್ಲ ಯಾಕೆ?
ಈ ನೆಲದ ವಿಕಿರಣದ ಮಟ್ಟ ಕೂಡ ಹೆಚ್ಚಾಗಿರುತ್ತದೆ. ವಿಜ್ಞಾನಿಗಳ ಮಟ್ಟಿಗಂತೂ ಈ ನೆಲದ ವಿಕಿರಣ ಮಟ್ಟ ಹೆಚ್ಚಾರಿರೋದು ಯಾಕೆ? ಅನ್ನೋ ಪ್ರಶ್ನೆ ಹೆಚ್ಚು ತಲೆಕೆಡೆಸುತ್ತಿದೆ.
ಭಗವದ್ಗೀತೆಯಲ್ಲಿ ಮಹೆಂಜೋದರೋ ನಗರದ ಉಲ್ಲೇಖವಿದೆ. ಈ ನಗರ ಬ್ರಹ್ಮಾಸ್ತ್ರದ ಸ್ಫೋಟಕ್ಕೆ ಬಲಿಯಾಗಿರಬಹುದಾ? ಅನ್ನೋ ಅನುಮಾನ ಕಾಡುತ್ತಿದೆ.
ಇಂತಹ ಅನುಮಾನವನ್ನು ತಣಿಸೋಕೆ 1979ರ ಒಂದು ಪುಸ್ತಕವಿದೆ. ಅದು ಬ್ರಿಟಿಷ್ ಸಂಶೋಧಕ ಡೇವಿಡ್ ಡೆವನ್ಪೋಟರ್್ ಬರೆದ `ಆಟೋಮಿಕ್ ಡಿಸ್ಟ್ರಕ್ಷನ್ ಇನ್ 2000 ಬಿ.ಸಿ.' ಪುಸ್ತಕದಲ್ಲಿ ತಿಳಿಸಿರುವಂತೆ ಮಹೆಂಜೋದರೋದ ಸುಮಾರು 46 ಮೀಟರ್ ವ್ಯಾಪ್ತಿಯಷ್ಟು ಭೂಮಿ ಮೆಲ್ಟ್ ಆಗಿದೆ ಎಂಬ ಮಾಹಿತಿಯಿದೆ. ಅಲ್ಲದೇ ಮಹೆಂಜೋದರೋ ನಗರದ ವಸ್ತುಸ್ಥಿತಿ ನಾಗಸಾಕಿ ನಗರದ ವಸ್ತುಸ್ಥಿತಿಯನ್ನೇ ಹೋಲುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ, ಸಂಶೋಧಕ ಡೇವಿಡ್. ಅದಕ್ಕಿಂತ ಮುಖ್ಯವಾದ ವಿಚಾರ ಅಂದ್ರೆ ಮಹೆಂಜೋದರೋ ನಗರದ ಕಲ್ಲುಗಳು ಗಾಜುಗಳಂತೆ ಮಾಪರ್ಾಡಾಗಿವೆ. ಇಂತಹ ಬದಲಾವಣೆಗೆ ವಿಟ್ರಿಪಿಕೇಶನ್ ಅಂತಾರೆ. ಸಾಮಾನ್ಯವಾದ ಕಲ್ಲು ಕರಗಿ ಲಾವರಸದಂತೆ ಬದಲಾಗುತ್ತದೆ. ಬದಲಾದ ಲಾವ ಗಟ್ಟಿಯಾದ ಮೇಲೆ ಅದು ಗಾಜಿನಂತೆ ರೂಪಾಂತರ ಹೊಂದುತ್ತದೆ. ಇಂತಹ ವಿಟ್ರಿಪಿಕೇಶನ್ಗೆ ಮಹೆಂಜೋದರೋದಲ್ಲಿ ನಡೆದಿರೋದು ನಿಜವೆಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ವಿಶೇಷಾಂದ್ರೆ ಇಂತಹದ್ದೊಂದು ವಿಟ್ರಿಪಿಕೇಶನ್ ಉಂಟಾಗ್ಬೇಕಂದ್ರೆ ಒಂದು ಭಯಾನಕ ಸ್ಫೋಟ ನಡೆದಿರ್ಲೇಬೇಕು.
1940-50ರ ಅವಧಿಯಲ್ಲಿ ಬ್ರಿಟಿಷ್, ಭಾರತ ಮತ್ತು ಪಾಕಿಸ್ತಾನದ ವಿಜ್ಞಾನಿಗಳು ಮಹೆಂಜೋದರೋ, ಹರಪ್ಪಗಳಲ್ಲಿ ಸಂಶೋಧನೆ ನಡೆಸಿದ್ರು. ಸಂಶೋಧನೆಯ ಪಲಿತಾಂಶದ ಪ್ರಕಾರ ಪ್ರಾಚೀನ ಕಾಲದಲ್ಲಿ ಇಲ್ಲಿ ಅತ್ಯಂತ ಪ್ರಬಲ ಅಣ್ವಸ್ತ್ರಗಳಿದ್ದವು. ಇದಕ್ಕಿಂತ ಅಚ್ಚರಿ ಅನಿಸೋದು ಆಫ್ರಿಕಾ ಮತ್ತಿತರ ರಾಷ್ಟ್ರಗಳಲ್ಲೂ ಇಂತಹ ಪ್ರಬಲ ಸ್ಫೋಟ ಉಂಟಾಗಿ ಅಲ್ಲಿನ ಮರುಭೂಮಿಗಳ ಮರಳು ಗಾಜಿನಂತಾಗಿದೆ. ಹಾಗಾದ್ರೆ ಅಮರಿಕದ ಮೊದಲ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಏನಾಯ್ತು? ಅನ್ನೋದು ಇದಾಗ್ಲೇ ತಿಳಿದಿದೆ. ಅಂದ್ಹಾಗೆ ಮಹೆಂಜೋದರೋ ಉತ್ಖನನದಲ್ಲಿ ದೊರೆತ ಸುಳಿವುಗಳು ಏನೇ ಇರ್ಲಿ. ಆ ಸುಳಿವುಗಳಿಂದ ಉಂಟಾಗೋ ಪ್ರಶ್ನೆಗಳು ಮಾತ್ರ ಚಿಂತಿಸುವಂತೆ ಮಾಡುತ್ತವೆ.
ಭಾರತೀಯ ಪುರಾಣಗಳಲ್ಲಿ ಪದೇ ಪದೇ ಕೇಳಿಬರುವ ಅಸ್ತ್ರ ಬ್ರಹ್ಮಾಸ್ತ್ರ. ಇದು ಸೃಷ್ಟಿಕರ್ತ ಬ್ರಹ್ಮನಿಂದ ರೂಪಿತವಾದ್ದರಿಂದಾಗಿ ಬ್ರಹ್ಮಾಸ್ತ್ರ ಎಂಬ ಹೆಸರಿದೆ. ಬ್ರಹ್ಮಾಸ್ತ್ರ ಅಸ್ತ್ರ ಸಂಕುಲದಲ್ಲಿಯೇ ಅತ್ಯಂತ ಬಲಿಷ್ಟ ಮತ್ತು ಅಂತಿಮ ಅಸ್ತ್ರ. ಇಂತಹ ಪ್ರಬಲ ಅಸ್ತ್ರವನ್ನು ಧರ್ಮ ಮತ್ತು ಸತ್ಯವನ್ನು ಉಳಿಸುವುದಕ್ಕಾಗಿ, ಅತ್ಯಂತ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಮಾತ್ರ ಪ್ರಯೋಗಿಸಬೇಕೆಂಬ ನಿತಿಸಂಹಿತೆಯಿದೆ. ಹಾಗಾಗಿಯೇ ಇದನ್ನು ಕುರುಕ್ಷೇತ್ರ ಯುದ್ಧದಲ್ಲಿ ಅಜರ್ುನ ಕುರು ಸೈನ್ಯದ ಮೇಲೆ ಇದನ್ನು ಪ್ರಯೋಗಿಸಿದ್ದು.
ನಮ್ಮ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಒಂದ ಸಾರಿಯಲ್ಲ ಐದು ಬಾರಿ ಬ್ರಹ್ಮಾಸ್ತ್ರ ಪ್ರಯೋಗಗೊಂಡಿದೆ. ಆದ್ರೆ ಪ್ರಬಲ ಸ್ಫೋಟಗಳುಂಟಾಗಿ ಅಪಾರ ಸಾವು-ನೋವುಗಳಾದದ್ದು ಎರಡು ಬಾರಿ ಮಾತ್ರ. ಅದು ಸಹ ಎರಡು ಯುಗಗಳಲ್ಲಿ. ಅದರಲ್ಲಿ ಮೊದಲ ಯುಗ ರಾಮನ ಯುಗ.
ಹೌದು ರಾಮಾಯಣದಲ್ಲೂ ಬ್ರಹ್ಮಾಸ್ತ್ರ ಬಳಕೆಯ ಉಲ್ಲೇಖವಿದೆ. ಅದು ರಾವಣ ಸಂಹಾರದ ವೇಳೆ ಬಳಸಲಾಗಿತ್ತು. ವಿಶೇಷ ಅಂದ್ರೆ ಇದಕ್ಕೂ ಮುಂಚೆ ಇಂದ್ರಜಿತ್ ಕೂಡ ರಾಮ ಲಕ್ಷ್ಮಣರ ವಿರುದ್ಧ ಈ ಅಸ್ತ್ರ ಬಳಸಿದ್ದ. ಅದಾದ ನಂತರ ಬಂದ ಕೃಷ್ಣನ ಯುಗದಲ್ಲೂ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲಾಯ್ತು.
ಪ್ರಯೋಗಕ್ಕೂ ಮುನ್ನ ಆ ವೇಳೆ ಕೃಷ್ಣಾವತಾರದ ವಿಷ್ಣು ಹೇಳಿದ ಮಾತುಗಳನ್ನೇ ಆಧುನಿಕ ಅಣುಬಾಂಬ್ ಸೃಷ್ಟಿಕರ್ತ ರಾಬಟರ್್ ಒಪನ್ಹೈಮರ್ ನೆನಪಿಸಿಕೊಂಡಿದ್ದು. ವಿಷ್ಣು ತನ್ನ ವಿರಾಟ್ರೂಪ ದರ್ಶನದ ನಂತರ ಬ್ರಹ್ಮಾಸ್ತ್ರ ಪ್ರಯೋಗಿಸಲಾಯ್ತು. ಮಹಾಭಾರತದ ಭೀಕರ ಯುದ್ಧದಿಂದಾಗಿ ಕೌರವರು ಪೂತರ್ಿಯಾಗಿ ನಾಶವಾದರು ಮಾತ್ರವಲ್ಲ, ಕೆಲವೇ ದಶಕಗಳಲ್ಲಿ ಯಾದವೀ ಕಲಹ ಉಂಟಾಗಿ ಯಾದವೀ ಕುಲವೇ ಸಂಪೂರ್ಣವಾಗಿ ನಾಶವಾಯ್ತು. ಹಾಗಾಗಿಯೇ ಈ ಯುದ್ಧ ಅಪಾರ ಸಾವು-ನೋವುಗಳುಂಟಾಗಿದ್ದವು. ಯಾದವರಾಗಲಿ, ಕೌರವ ಪಾಂಡವರಾಗಲಿ ತಂತಮ್ಮ ಒಳಗೇ ಯುದ್ಧ ಗೈದವರಲ್ಲವೇ? ಅವರು ಬಳಸಿದ ಶಸ್ತ್ರ, ಅಸ್ತ್ರಗಳ ಮುಂದೆ ಇಂದಿನ ಅಣುಬಾಂಬ್ ಮಕ್ಕಳ ಆಟಿಕೆಗೆ ಸಮಾನವಲ್ಲವೇ?
ಚಿತ್ರಕೃಪೆ-ಅಂತರ್ಜಾಲ
ಅಣುಬಾಂಬ್ ಶೋಧಕ ಓಪನ್ಹೈಮರ್ ಮಹಾಭಾರತದ ಬಗ್ಗೆ ಹೀಗೆ ಹೇಳಿದ್ದಾನೆ. ಲಿಂಕ್ ಕ್ಲಿಕಿಸಿ..
http://www.youtube.com/watch?v=ZuRvBoLu4t0