ಬ್ರಹ್ಮ ರೂಪಿ ನನ್ನಾತ್ಮ ಸಖಿ

ಬ್ರಹ್ಮ ರೂಪಿ ನನ್ನಾತ್ಮ ಸಖಿ

ಬರಹ

ದನಿ ಕೇಳಿ ನಿಂತಿರೇನು
ನಾನು ಸರ್ವ ಶಕ್ತೆ
ಜೀವದಾಟ ಗೆದ್ದು ಬಂದ
ನಾನು ಮಂತ್ರ ಮುಕ್ತೆ

ಜೀವವಿಲ್ಲದಂಥ ಮುಖದಿ
ನಗೆ ಸ್ಪರ್ಶ ಮಾತ್ರದಿಂದ
ಜೀವಕಳೆಯ ತುಂಬಬಲ್ಲೆ
ನಾನು ಆನಂದದಾಯಿನಿ

ನಯನಗಳಿಗೆ ತಂಪನೀವ
ಮನಸಿಗೆಲ್ಲ ಇಂಪನೀವ
ಪೂರ್ಣ ರೂಪ ಸುಂದರಿ
ನಾನು ಗೀತ ಮಾಧುರಿ

ಜೀವಸೆಲೆಯು ಬತ್ತಿದಾಗ
ಜೀವದೊರತೆ ಚಿಮ್ಮಲೆಂದು
ಶಿವ ಶಿರದಿಂ ಇಳಿದಿಹೆ
ನಾನು ಜೀವ ವಾಹಿನಿ

ಹೃದಯವೆಂಬ ಹೂವಿನಿಂದ
ಪ್ರೇಮಗಂಧ ತೇಲಿಬಂತು
ಮನದಿ ಪ್ರೇಮತಾರಿಣಿ
ನಾನು ಪುಷ್ಪಧಾರಿಣಿ

ಆತ್ಮ ರೂಪಿ ಜ್ಞಾನ ರೂಪಿ
ಮಿತ ಭಾಷಿ ಸತ್ಯ ರೂಪಿ
ಹರಿಯ ಸತಿ ಚಂದ್ರವದನೆ
ನಾನೇ ಬ್ರಹ್ಮ ರೂಪಳು