ಬ್ರೆಡ್ ಇಡ್ಲಿ
![](https://saaranga-aws.s3.ap-south-1.amazonaws.com/s3fs-public/styles/article-landing/public/%E0%B2%AC%E0%B3%8D%E0%B2%B0%E0%B3%86%E0%B2%A1%E0%B3%8D.jpg?itok=ihXUcqJC)
ಬೇಕಿರುವ ಸಾಮಗ್ರಿ
ಬ್ರೆಡ್ ಸ್ಲೈಸ್ ೨, ದಪ್ಪ ಮೊಸರು ೨ ಚಮಚ, ಹೆಚ್ಚಿದ ಹಸಿರು ಮೆಣಸಿನಕಾಯಿ ೧, ಕರಿ ಮೆಣಸಿನ ಹುಡಿ - ೧ ಚಿಟಿಕೆ, ಸಾಸಿವೆ ಅರ್ಧ ಚಮಚ, ಉದ್ದಿನ ಬೇಳೆ ಕಾಲು ಚಮಚ, ಎಣ್ಣೆ ೩ ಚಮಚ, ಕರಿಬೇವಿನ ಸೊಪ್ಪು ೧ ಚಮಚ, ಕೊತ್ತಂಬರಿ ಸೊಪ್ಪು ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಬ್ರೆಡ್ ಸ್ಲೈಸ್ ಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ, ಅದನ್ನು ಮೊಸರಿನೊಂದಿಗೆ ಚೆನ್ನಾಗಿ ಬೆರೆಸಿ. ನಂತರ ಹಸಿರು ಮೆಣಸಿನಕಾಯಿ, ಉಪ್ಪು, ಕರಿ ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ. ಒಂದು ಸಣ್ಣ ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನ ಬೇಳೆ, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ. ಬ್ರೆಡ್ಡಿನ ಮಿಶ್ರಣದ ಮೇಲೆ ಸುರಿಯಿರಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ ಅಂಗೈಯಿಂದ ಉಂಡೆಗಳನ್ನು ಮಾಡಿ ಇಡ್ಲಿ ಆಕಾರಕ್ಕೆ ತನ್ನಿ. ನಾಲ್ಕು ಇಡ್ಲಿಗಳನ್ನು ತಯಾರಿಸಬಹುದು. ಕೊತ್ತಂಬರಿ ಸೊಪ್ಪಿನ ಚಟ್ನಿಯ ಜೊತೆ ತಿನ್ನಲು ಬಹು ರುಚಿಕರ.