ಬ್ರೆಡ್ ಪಕೋಡಾ

ಬೇಕಿರುವ ಸಾಮಗ್ರಿ
ಬ್ರೆಡ್ ಹಾಳೆಗಳು (ಸ್ಲೈಸ್) ೪, ಕಡಲೆ ಹಿಟ್ಟು ೧ ಕಪ್, ಅಕ್ಕಿ ಹಿಟ್ಟು ೨ ಚಮಚ, ಚಿಟಿಕೆ ಇಂಗು, ಜೀರಿಗೆ ೧ ಚಮಚ, ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ ೨, ಹೆಚ್ಚಿದ ಕೊತ್ತಂಬರಿ ಸೊಪ್ಪು ಕಾಲು ಕಪ್, ಎಣ್ಣೆ ೩ ಕಪ್, ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಇಂಗು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಗಂಟು ಬಾರದಂತೆ ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿರಿ. ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಸೇರಿಸಿ. ಬ್ರೆಡ್ ಹಾಳೆಯ ಬದಿಗಳನ್ನು ಕತ್ತರಿಸಿ. ಒಂದು ಹಾಳೆಯ ಉದ್ದಕ್ಕೆ ಎರಡು ತುಂಡುಗಳನ್ನಾಗಿ ಮಾಡಬಹುದು ಅಥವಾ ತ್ರಿಕೋನಾಕಾರಕ್ಕೆ ಎರಡು ತುಂಡು ಮಾಡಲೂ ಬಹುದು.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬ್ರೆಡ್ ತುಂಡುಗಳನ್ನು ತಯಾರಿಸಿದ ಕಡಲೆ ಹಿಟ್ಟಿನ ಮಿಶ್ರಣಕ್ಕೆ ಮುಳುಗಿಸಿ, ಬಿಸಿ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ಕೊತ್ತಂಬರಿ ಚಟ್ನಿ, ಟೊಮೆಟೋ ಚಟ್ನಿ ಅಥವಾ ಟೊಮೆಟೋ ಸಾಸ್ ಜತೆಗೆ ಬಿಸಿಬಿಸಿ ತಿನ್ನಲು ರುಚಿಕರ.