ಬ್ರೆಡ್ ಬಟರ್ ಪುಡ್ಡಿಂಗ್

ಬ್ರೆಡ್ ಹಾಳೆಗಳು ೬, ಮೆದು ಬೆಣ್ಣೆ ೫.ಚಮಚ., ಹಾಲು ೨ ಕಪ್, ಸಕ್ಕರೆ ಮುಕ್ಕಾಲು ಕಪ್, ಮೊಟ್ಟೆ ೪, ವೆನಿಲ್ಲಾ ಎಸೆನ್ಸ್ ೧ ಚಿ.ಚ., ಒಣದ್ರಾಕ್ಷಿ ಮುಕ್ಕಾಲು ಕಪ್.
ಬ್ರೆಡ್ ಹಾಳೆಗಳನ್ನು ನಾಲ್ಕು ತ್ರಿಕೋನಾಕಾರದ ತುಂಡುಗಳನ್ನಾಗಿ ಕತ್ತರಿಸಿರಿ. ಒಂದು ಅವನ್ ಟ್ರೇಯಲ್ಲಿ ತ್ರಿಕೋನಾಕಾರದ ಬ್ರೆಡ್ ತುಂಡುಗಳನ್ನು ಒಂದು ಇನ್ನೊಂದರ ಮೇಲೆ ಸ್ವಲ್ಪ ಹಾಯುವಂತೆ ಹರಡಿರಿ. ಎರಡು ಕಪ್ ಬಿಸಿ ಹಾಲಿನಲ್ಲಿ ಸಕ್ಕರೆ ಬೆರೆಸಿರಿ. ಮೊಟ್ಟೆಗಳನ್ನು ಒಡೆದು ಹಾಲಿನಲ್ಲಿ ಬೆರೆಸಿ ಚೆನ್ನಾಗಿ ಗೊಟಾಯಿಸಿ. ವೆನಿಲ್ಲಾ ಎಸೆನ್ಸ್ ಸೇರಿಸಿ ಬೆರೆಸಿ.
ಅವನ್‌ನನ್ನು ೧೮೦ ಡಿಗ್ರಿ ಸೆಂಟಿಗ್ರೇಡ್ ಗೆ ಬಿಸಿ ಮಾಡಿರಿ. ತಯಾರಿಸಿದ ಹಾಲಿನ ಮಿಶ್ರಣವನ್ನು ಅವನ್ ಟ್ರೇ ಮೇಲೆ ಅಲಂಕರಿಸಿಟ್ಟ ಬ್ರೆಡ್ ತುಂಡುಗಳ ಮೇಲೆ ಸುರಿಯಿರಿ. ಒಂದು ದೊಡ್ಡ ಚಮಚದಿಂದ ಬ್ರೆಡ್ ತುಂಡುಗಳನ್ನು ನಯವಾಗಿ ಒತ್ತಿರಿ. ಹಾಲನ್ನು ಬ್ರೆಡ್ ತುಂಡುಗಳು ಚೆನ್ನಾಗಿ ಎಳೆದುಕೊಳ್ಳಲಿ. ಮೇಲಿನಿಂದ ಒಣದ್ರಾಕ್ಷಿಗಳನ್ನು ಉದುರಿಸಿರಿ. ಬಿಸಿ ಅವನ್‌ನಲ್ಲಿರಿಸಿ ೪೦ ನಿಮಿಷ ಕಾಯಿಸಿರಿ. ಬಿಸಿಬಿಸಿ ಸವಿಯಿರಿ ಅಥವಾ ತಣ್ಣಗೆ ಸಹ ಸವಿಯಬಹುದು. ಹೇಗೆ ಸವಿದರೂ ರುಚಿಯೇ.