ಬ್ರೆಡ್ ಬರ್ಫಿ

ಬೇಕಿರುವ ಸಾಮಗ್ರಿ
ಬ್ರೆಡ್ ಹುಡಿ ೨ ಕಪ್, ಹಾಲು ೧ ಕಪ್, ಸಕ್ಕರೆ ೧ ಕಪ್, ಕಾಯಿತುರಿ ೨ ಕಪ್, ಗೇರುಬೀಜದ ತುಂಡುಗಳು ಅರ್ಧ ಕಪ್, ತುಪ್ಪ ೪ ಚಮಚ.
ತಯಾರಿಸುವ ವಿಧಾನ
ಬ್ರೆಡ್ ಹುಡಿ ಮತ್ತು ಹಾಲನ್ನು ಚೆನ್ನಾಗಿ ಬೆರೆಸಿ. ಸಕ್ಕರೆ ಮತ್ತು ಕಾಯಿತುರಿಯನ್ನು ಸಣ್ಣ ಉರಿಯಲ್ಲಿ ಏಳೆಂಟು ನಿಮಿಷ ಹುರಿಯಿರಿ. ಬಳಿಕ ಬ್ರೆಡ್ ಹುಡಿ ಮಿಶ್ರಣವನ್ನು ಸೇರಿಸಿ, ಬೆರೆಸಿ. ಮಿಶ್ರಣವು ಬದಿ ಬಿಡಲು ಆರಂಭಿಸಿದಾಗ ಎರಡು ಚಮಚ ತುಪ್ಪ ಸೇರಿಸಿ ಕೈಯಾಡಿಸಿ. ಒಂದು ಸ್ಟೀಲ್ ತಾಟಿಗೆ ಉಳಿದ ತುಪ್ಪ ಸವರಿ ತಯಾರಿಸಿದ ಮಿಶ್ರಣವನ್ನು ಸುರಿದು ಚೆನ್ನಾಗಿ ಸೆಟ್ ಮಾಡಿರಿ. ತಣಿದ ಬಳಿಕ ಫ್ರಿಡ್ಜ್ ನಲ್ಲಿಡಿ. ಸೆಟ್ ಆದ ಬಳಿಕ ಬೇಕಾದ ಆಕಾರಕ್ಕೆ ಕತ್ತರಿಸಿರಿ.