ಬ್ರೆಡ್ ರೋಲ್
ಬೇಕಿರುವ ಸಾಮಗ್ರಿ
ಆಲೂಗಡ್ಡೆ 2,(ದೊಡ್ಡದು), ಬ್ರೆಡ್ ಪೀಸ್‌ಗಳು 4, ಹಸಿಮೆಣಸಿನಕಾಯಿ 2, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.
ತಯಾರಿಸುವ ವಿಧಾನ
ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು, ಪುಡಿ ಮಾಡಿ. ಇದಕ್ಕೆ ರುಚಿಗೆ ತಕ್ಕ ಷ್ಟು ಉಪ್ಪು ಮತ್ತು ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ ಕಲೆಸಿ . ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಲು ಇಡಿ, ಬ್ರೆಡ್ ಸ್ಲೈಸ್‌ನ ಬ್ರೌನ್ ಬಣ್ಣದ ಅಂಚನ್ನು ತೆಗೆದು ಬಿಳಿ ಭಾಗವನ್ನು ಮಾತ್ರ ಉಳಿಸಿಕೊಳ್ಳಿ. ಬ್ರೆಡ್ ಸ್ಲೈಸ್‌ನ್ನು ನೀರಿನಲ್ಲಿ ಅದ್ದಿ, ಕೈಯಿಂದ ನೀರನ್ನು ಒತ್ತಿ ತೆಗೆದು, ಅದರಲ್ಲಿ ಆಲೂಗಡ್ಡೆ ಮಿಶ್ರಣವನ್ನು ತುಂಬಿ, ಅದನ್ನು ರೋಲ್ ಮಾಡಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿದರೆ ರುಚಿಯಾದ ಬ್ರೆಡ್ ರೋಲ್ ಸಿದ್ಧ.