ಬ್ರೆಡ್ ರೋಲ್

ಬ್ರೆಡ್ ರೋಲ್

ಬೇಕಿರುವ ಸಾಮಗ್ರಿ

ಬ್ರೆಡ್ ಸ್ಲೈಸ್ - ೪, ಬೇಯಿಸಿದ ಮಸೆದ ಆಲೂಗಡ್ಡೆ - ೧ ಕಪ್, ತುಂಡು ಮಾಡಿದ ಹಸಿ ಮೆಣಸಿನಕಾಯಿ - ೫, ಜೀರಿಗೆ ಹುಡಿ - ಅರ್ಧ ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು - ೨ ಚಮಚ, ಕತ್ತರಿಸಿದ ಕರಿಬೇವಿನ ಸೊಪ್ಪು - ೧ ಚಮಚ, ತುರಿದ ಹಸಿ ಶುಂಠಿ - ಅರ್ಧ ಚಮಚ, ಸ್ವಲ್ಪ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಸಿಪ್ಪೆ ತೆಗೆದು ಬೇಯಿಸಿ ಮಸೆದ ಆಲೂಗೆಡ್ಡೆಗೆ ಉಪ್ಪು, ಹಸಿ ಮೆಣಸಿನಕಾಯಿ, ಜೀರಿಗೆ ಹುಡಿ, ಕರಿಬೇವಿವ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ ತುರಿ ಬೆರೆಸಿ ಕಲಸಿಡಿ. ಬ್ರೆಡ್ ಸ್ಲೈಸ್ ನ ಅಂಚುಗಳನ್ನು ತೆಗೆದು ಬಿಳಿ ಭಾಗವನ್ನು ನೀರಿನಲ್ಲಿ ಅದ್ದಿ ಕೈಯಿಂದ ಒತ್ತಿ ನೀರು ತೆಗೆಯಿರಿ. ನಂತರ ಬ್ರೆಡ್ ಸ್ಲೈಸ್ ಅನ್ನು ಒಂದು ತಟ್ಟೆಯ ಮೇಲಿಟ್ಟು ಅದರಲ್ಲಿ ಸ್ವಲ್ಪ ಆಲೂಗೆಡ್ಡೆ ಮಿಶ್ರಣವನ್ನು ತುಂಬಿಸಿ ರೋಲ್ ಮಾಡಿ, ಕಾದ ಎಣ್ಣೆಯಲ್ಲಿ ಹೊಂಬಣ್ನ ಬರುವವರೆಗೆ ಕರಿಯಿರಿ. ರುಚಿಯಾದ ಬ್ರೆಡ್ ರೋಲ್ ತಯಾರು.