ಬ್ಲಾಗೂಪಾಖ್ಯಾನ
ಬರಹ
ಏನಿದು ಮಂಡ್ಯ ಟುಡೇ , ನಂಗು ಮಂಡ್ಯಗು ಏನು ಸಂಬಂಧ ? ಬೇರೆ ಬೇರೆ ಹೆಸರು ಹುಡುಕಿದರೂ ಇದೇ ಸೂಪರ್ ಅನಿಸ್ತು . ದಾವಣಗೆರೆ ಡೈರಿ ಅಂತ ಇಡಬೇಕು ಅನಿಸ್ತು , ದಾವಣಗೆರೆ ಬಿಟ್ಟು ಎಷ್ಟು ವರ್ಷ ಆಯಿತು ಅದರ ನೆನಪೇ ಕಮ್ಮಿ ಆಗಿದೆ , ಬರಿ ಮುಸುಕು ಮುಸುಕು ನೆನಪು. ಖಾರ ಮಂಡಕ್ಕಿ , ಬಜ್ಜಿ , ಬ್ಯಾಡಗಿ ಶೆಟ್ಟರ ಸ್ಕೂಲು , ರಾಮ್ ಅಂಡ್ ಕೋ ಸರ್ಕಲ್ , ರೈತರ ಬೀದಿ ಇವೆಲ್ಲ ಅವಾಗವಾಗ ನೆನಪು ಬರುತ್ತೆ. ಸೊ coming back, ಇಂಡಿಯ ಟುಡೇ ತರಹ ಮಂಡ್ಯ ಟುಡೇ , ಸುಮ್ನೆ ಚಮಕ್ . ರೆಬೆಲ್ ಸ್ಟಾರ್ ಮೇಲಿನ ಸ್ವಲ್ಪ ಅಭಿಮಾನನು ಇರಬಹುದೇನೋ? ಅಥವಾ ಮಂಡ್ಯ ಪಟ್ಟ ಪಟ್ಟೆ ಚಡ್ಡಿ ವ್ಯಾಮೋಹ ಇರಬಹುದು. ನೋ ಮಂಡ್ಯ ನ್ಯೂಸ್ ಬರೀ ನನ್ನ ಮಂಡೆಯ ಅನಿಸಿಕೆ / ಅನುಭವ ದ ಮಾತು ಮಾತ್ರ, ಅದುವೇ ಮಂಡೆಯ (ಮಂಡ್ಯ) ನ್ಯೂಸ್ .