ಬ್ಲಾಗ್ ಸ್ಪಾಟ್ ಬಳಕೆದಾರರಿಗೊಂದು ಕಹಿ ಸುದ್ದಿ

ಬ್ಲಾಗ್ ಸ್ಪಾಟ್ ಬಳಕೆದಾರರಿಗೊಂದು ಕಹಿ ಸುದ್ದಿ

ಬರಹ

ಬ್ಲಾಗ್ ಸ್ಪಾಟ್ ಡೊಮೈನು ಬಳಸುವ ಎಲ್ಲ ಬ್ಲಾಗುಗಳನ್ನು (ಉದಾ: [:http://kannada-kathe.blogspot.com|kannada-kathe.blogspot.com]) ಭಾರತದ ISPಗಳು (ಇಂಟರ್ನೆಟ್ ಸೌಲಭ್ಯ ಒದಗಿಸುವ ಕಂಪೆನಿಗಳು) ಬ್ಲಾಕ್ ಮಾಡಿದಂತಿದೆ. [:http://www.sepiamutiny.com/sepia/archives/003580.html|ಕೆಲವು ಮೂಲಗಳ] ಪ್ರಕಾರ ಇದು ಭಾರತದ ಸರ್ಕಾರ ಜಾರಿಗೊಳಿಸಿರುವ ಆಜ್ಞೆ. ಉಗ್ರಗಾಮಿಗಳು ಬ್ಲಾಗ್‌ಸ್ಪಾಟನ್ನು ಸಂವಹನಕ್ಕಾಗಿ ಬಳಸುತ್ತಿದ್ದಾರೆ, ಆದ್ದರಿಂದ ಭಾರತದ ಸರಕಾರ ಐ ಎಸ್ ಪಿಗಳಿಗೆ blogspot ಬ್ಲಾಕ್ ಮಾಡುವಂತೆ ಆಜ್ಞೆಯಿತ್ತಿದೆ ಎಂಬ ಗುಲ್ಲು ಅಂತರಜಾಲದಾದ್ಯಂತ ಇಂದು ಹಬ್ಬಿದೆ. ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ, ಆದರೆ ಅದು ನಿಜವೇ ಆಗಿದ್ದಲ್ಲಿ, ಹಾಗೆ ಬ್ಲಾಕ್ ಮಾಡುವುದರಿಂದ ಸರಕಾರಕ್ಕೂ ಇಲ್ಲಿನ ಜನತೆಗೂ ಹಾನಿಯೇ ಹೊರತು, ಬಹುಶಃ ಏನೂ ಸಾಧಿಸಿದಂತಾಗದು (ಏಕೆಂದರೆ ಪ್ರಾಕ್ಸಿ ಬಳಸಿ, ಅಥವಾ ಇನ್ನೊಬ್ಬರ ಕಂಪ್ಯೂಟರಿಗೆ ಲಾಗಿನ್ ಆಗಿ ಬ್ಲಾಗ್ ಸ್ಪಾಟ್ ಎಂದಿನಂತೆ ವೀಕ್ಷಿಸಬಹುದು).

ಹೆಚ್ಚಿನ ವಿವರ: [:http://in.rediff.com/news/2006/jul/17blog.htm|ರೀಡಿಫ್ ಲೇಖನದಲ್ಲಿ], [:http://yro.slashdot.org/yro/06/07/17/1732209.shtml|/. ಪುಟದಲ್ಲಿ].