ಭಕ್ತಿ ಗೀತೆ : ಶ್ರೀ ಗುರು ರಾಘವೇಂದ್ರ

ಭಕ್ತಿ ಗೀತೆ : ಶ್ರೀ ಗುರು ರಾಘವೇಂದ್ರ

ಕವನ

ರಾಯ ಬಾರೋ ನಮ್ಮ ಮನೆಗೆ

ಶಿರಬಾಗಿ ಕರಮುಗಿವ ಭಕುತರಿಗೆ

ಒಲಿದು ಬಾರಯ್ಯ ಶ್ರೀ ಗುರು ರಾಘವೇಂದ್ರ//

 

ಭೃತ್ಯಗೆ ಬಂದ ಅಪಮೃತ್ಯುವ ತಡೆದ

ಎಲ್ಲರ ಸಲಹುವ ಪುರುಷೋತ್ತಮನೇ

ಅನಾಥರಕ್ಷಕ ಓಡೋಡಿ ಬಾರಯ್ಯ ನೀ//

 

ಭೂತಳನಾಥನ ಭೀತಿಯ ಬಿಡಿಸಿದೆ

ವಿಮಲ ಸುಮತೀಂದ್ರಪ್ರಿಯ ಯತಿವರ್ಯ

ಬೃಂದಾವನದಿ ನೆಲೆಸಿಹ ರಾಯನೇ//

 

ದರುಶನ ಮಾತ್ರದಿ ದುರಿತಗಳೆಲ್ಲ ದೂರವಾಯಿತು

ಕೃಪಾಸಾಗರ ವರವನು ಕರುಣಿಸಿ ಉದ್ಧರಿಸು

 ಮಂಗಳಕರ ಶುಭಕರ ಶ್ರೀ ಗುರು ರಾಘವೇಂದ್ರನೇ//

 

ತುಂಗಾತೀರದಿ ನೆಲೆಸಿಹ ರಾಯನೇ

ಯೋಗಿ ಸನ್ನಿಧಿ ಭಾಗವತ ಶ್ರೇಷ್ಠನೇ

 ಸದ್ಗುಣ ಸಾಂದ್ರ ಗುಣಗಣಭರಿತ ಮಹಾಮಹಿಮನೇ//

 

ಹೃದಯ ಮಂದಿರದಿ ನೆಲೆಸು ನಿರಂತರ

ಕರುಣದಿ  ಪೊರೆಯೋ ಅನಂತ ಮೂರುತಿ

ದಯಾಸಾಂದ್ರ ನಮಿಪೆನು ಶ್ರೀ ಗುರು ರಾಘವೇಂದ್ರ//

 

-ರತ್ನಾ ಭಟ್ ತಲಂಜೇರಿ

 

ಚಿತ್ರ್