ಭಕ್ತಿ

ಭಕ್ತಿ

ಕವನ

ಅಪ್ಪಿ ಒಪ್ಪುವನೇ ಈ ಕೆನೆ ಮೊಸರ?

ಮೆಚ್ಚುವನೇ ಅಚ್ಯುತ ಅಪರಂಜಿಯ ಹಾರ?

ನಾ ಅರ್ಪಿಸುವೆ ಮೊಸರ ಭಕ್ತಿಯ ಹೆಸರಲಿ

ಭಕ್ತಿ ಮೀರುವುದು ವಜ್ರವ ಶಕ್ತಿಯಲಿ.

 

ನನ್ನನು ನಾ ಸಿಂಗರಿಸಿಕೊಂಡಿಹೆನು

ಅನಂತತೆಯ ಆನಂದ ಬಯಸಿಹೆನು

ಅಲಂಕಾರಕೆ ಒಲಿಯುವುದೇ ಭಕ್ತಿ ಬೆರಗು 

ಒಳಗೇ ಇರಲು ಆತ ತೋರಲು ಸೊಬಗು!!

 

ಇಂದಿನದೆಲ್ಲವೂ ಆತನೇ ಬರೆದಂತೆ

ನಾಳೆಯದೆಲ್ಲವೂ ಆತ ತೋರಿದಂತೆ

ಹಾಲ ಅಮೃತವಾಗಿಸಿ ತಂದಿಹೆನು

ನಿನ್ನ ವರವನೇ ನಿನಗೆ ಅಲ್ಪನು ನಾ ನೀಡಿಹೆನು!!

***

ಕಮಲ

ಕಮಲ ಅರಳಿ ನಗುವುದು

ಕಾಣುವ ಕಂಗಳಿಗೆ ಮುದವನೀವುದು

ಕಿನ್ನರರ ನಲಿದು ಕರೆವುದು

ಕೀಲಿ ಕೈಯಿದು ಸೊಬಗ ಔತಣಕೆ

ಕುವರಿಯ ಜಡೆಯೇರಿ ಬಳಕುವುದು

ಕೂಸ ಚರ್ಮದಂತೆ ಮೃದುವು.

 

ಕೃಪೆಗಾಗಿಯೂ ಒಲವ ಸೆಲೆಗಾಗಿಯೂ ಕಮಲ

ಕೆರಳಿದ ಮನವ ತಣಿಸುವ ಬಲ 

ಕೇಳಲು ಒಪ್ಪಿಗೆ ನೀಡುವ ಹಂಬಲ

ಕೈ ಜೋಡಿಸಿ ಅರ್ಪಿಸಲು ಕಮಲ.

 

ಕೊಳ್ಳ ಬಯಸಿಹ ಮಂದಿ ಹಲವು

ಕೋಮಲ ಸುಮದ ಅನಂತ ಘಮಲು

ಕೌತುಕದಿ ಹುಬ್ಬೇರುವುದು ಅದರ ಅಂದಕೆ

ಕಂಗಳು ಸಂತಸದಿ ಸೆರೆಹಿಡಿದ ಪ್ರತಿಬಿಂಬಕೆ.

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್