ಭಯದ ಬಳಕೆ

ಭಯದ ಬಳಕೆ

ಕವನ

ಭಯವಿರಬೇಕು ಬದುಕಿನಲ್ಲಿ

ಬದುಕಿರಬೇಕು ಭಯದ ನೇರಳಲ್ಲಿ

 

ಭಯದ ಮೇಲೆ ಮಾಡಿ ನೀವು ಸವಾರಿ

ಭಯವೇ ಓಡಬೇಕು ನಿಮಗೆ ಹೆದರಿ

ಸಾವಿನ ಭಯವು ಕಲಿಸುವುದು ಬದುಕುವ ರೀತಿಯ

ಸೋಲಿನ ಭಯವು ಕಲಿಸುವುದು ಗೆಲ್ಲುವ ನೀತಿಯ

!!ಭಯವಿರಬೇಕು ಬದುಕಿನಲ್ಲಿ!!

 

ಅವಮಾನದ ಭಯವು ಕಲಿಸುವುದು ಸದಾಚಾರವನ್ನು

ಅನುಮಾನದ ಭಯವು ಕಲಿಸುವುದು ಸನ್ನಡತೆಯನ್ನು

ಗುರುವಿನ ಭಯವು ಕಲಿಸುವುದು ಸಕಲ ವಿದ್ಯೆಯನ್ನು

ಗುರಿಯ ಭಯವು ಕಲಿಸುವುದು ಸರಿಯಾದ ಮಾರ್ಗವನ್ನು

!!ಭಯವಿರಬೇಕು ಬದುಕಿನಲ್ಲಿ!!

 

ಅಪ್ಪನ ಭಯವು ಕಲಿಸುವುದು ಶಿಸ್ತು ಸಂಯಮವನ್ನು

ಅಮ್ಮನ ಭಯವು ಕಲಿಸುವುದು ಉಪಕಾರದ ಬದುಕನ್ನು

ಸಹೋದರರ ಭಯವು ಕಲಿಸುವುದು ಸೌಹಾರ್ದತೆಯನ್ನು

ಸಹೋದರಿಯರ ಭಯವು ಕಲಿಸುವುದು ಸಹೃದಯತೆಯನ್ನು

!!ಭಯವಿರಬೇಕು ಬದುಕಿನಲ್ಲಿ!!

 

ಅಜ್ಜನ ಭಯವು ಕಲಿಸುವುದು ಅನುಬಂಧವನ್ನು

ಅಜ್ಜಿಯ ಭಯವು ಕಲಿಸುವುದು ಆಪ್ತತೆ ಯನ್ನು

ಬಂಧುತ್ವದ ಭಯವು ಕಲಿಸುವುದು ಬದ್ಧತೆಯನ್ನು

ಸ್ನೇಹತ್ವದ ಭಯವು ಕಲಿಸುವುದು ವಿಶ್ವಾಸವನ್ನು

!!ಭಯವಿರಬೇಕು ಬದುಕಿನಲ್ಲಿ!!

 

ತಪ್ಪಿನ ಭಯವು ಕಲಿಸುವುದು ಪಶ್ಚಾತ್ತಾಪದ ಗುಟ್ಟನ್ನು

ಮುಪ್ಪಿನ ಭಯವು ಕಲಿಸುವುದು ಒಪ್ಪಿ ನಡೆಯುವ ಗುಟ್ಟನ್ನು

ರೋಗದ ಭಯವು ಕಲಿಸುವುದು ಆರೋಗ್ಯದ ಗುಟ್ಟನ್ನು

ಭಗವಂತನ ಭಯವು ಕಲಿಸುವುದು ನಿತ್ಯ ಸತ್ಯದ ಗುಟ್ಟನ್ನು

 

-ತುಂಬೇನಹಳ್ಳಿ ಕಿರಣ್ ರಾಜು ಎನ್

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್