ಭಯ

ಭಯ

ಕವನ

ಭಯ


ಎಲ್ಲರಿಗೂ ಇರುತ್ತವೆ ಭಯ


ಅದರ ಭಯ, ಇದರ ಭಯ


ಯಾವ್ಯಾವುದೋ ಭಯ.


ಅದರಲ್ಲಿ ಕೆಲವು ನಮ್ಮದೇ ವಿಶಿಷ್ಟ ಭಯ


ಭಯ ಕಾಡುತ್ತವೆಯೋ


ಕಾಡುವುದರಿಂದ ಭಯವೋ!


ಕಾಡುತ್ತಾ ಕಾಡುತ್ತಾ ಯಾರದೋ ಭಯ


ಇನ್ಯಾರದೋ ಭಯಗಳಾಗಿ


ಇದು ನಮ್ಮ ಭಯವೇ, ಇಲ್ಲ ನಿಮ್ಮ ಭಯವೇ


ಎಂಬ ಪ್ರಶ್ನೆಗೆ ಉತ್ತರವೇ ಸಿಗದೆ


ಎಲ್ಲರವೂ ಆಗಿ ಕಾಡುತ್ತಾವೆ ಭಯಗಳು.


ಓಟಿಗೆ ನಿಂತವನಿಗೆ ಗೆಲ್ಲದ ಭಯ,


ಗೆದ್ದವನಿಗೆ ಕುರ್ಚಿ ಸಿಗದ ಭಯ,


ಸಿಕ್ಕವನಿಗೆ ಉಳಿಸಿಕೊಳ್ಳುವ ಭಯ.


ಓದುವವನಿಗೂ ಭಯ,


ಓದದವನಿಗೂ ಪರೀಕ್ಷೆಯ ಭಯ.


ಕತ್ತಲೆಗೆ ಬೆಳಕಿನ ಭಯ,


ಬೆಳಕಿಗೆ ಕತ್ತಲೆಯ ಭಯ.


ಸುಖಕ್ಕೆ ದುಃಖದ ಭಯ,


ದುಃಖಕ್ಕೆ ಸುಖದ ಭಯ.


ನಿರ್ಭಯವಾಗಿ ಬದುಕಲು ಮರೆತು,


ನಾನಾ ನಮೂನೆಗಳ ಭಯ ಹುಟ್ಟಿಸಿ


 ಭಯೋತ್ಪಾದಕರೂ ಆಗುತ್ತಿದ್ದೇವೆ.

Comments

Submitted by dayanandac Fri, 05/27/2011 - 13:06