ಭಯ
ಬರಹ
ನಾನಿಲ್ಲಿ ವಿಚಾರಿಸಿ ಹೊಱಟಿರುವ ವಿಚಾರ ಮನುಷ್ಯನ ಆಂತರಿಕ ಭಯ. ಸಹಜವಾಗಿ ಬೆಂಕಿ ಸುಡುತ್ತದೆನ್ನುವ ಭಯ, ಬೀೞುವ ಭಯ ನಮ್ಮ ಅನುಭವದ ಮೂಲಕ ಕಂಡುಕೊಂಡ ಭಯ. ಇವೆಲ್ಲ ನಮ್ಮನ್ನು ಗೋಜಲಿಗೆ ಸಿಕ್ಕಿಸುವುದಿಲ್ಲ. ಆದರೆ ನಾನು ಹೇೞುವ ಭಯ ಮಾನಸಿಕ ಭಯ ಉದಾಹರಣೆಗೆ ಹಾವಿನ ಭಯ, ಏಕಾಂತದ ಭಯ ಇತ್ಯಾದಿ. ಹಾವಿನ ಮೇಲೆ ನಮಗೇಕೆ ಭಯ. ಯಾಕೆಂದರೆ ಹಾವಿನ ವಿಷಯವಾಗಿ ನಮಗಿರುವ ಅಜ್ಞಾನ. ಆದುದಱಿಂದ ಭಯ. ಹಾಗೆಯೇ ಒಂಟಿತನ ನಮಗೇಕೆ ಭಯ ತರುತ್ತದೆ. ಯಾಕೆಂದರೆ ನಮ್ಮ ಒಂಟಿತನದ ಬಗ್ಗೆ ನಮಗಱಿವಿಲ್ಲ. ಈ ಅಱಿವು ಮೂಡಿಸಿಕೊಳ್ಳುವ ಮುನ್ನವೇ ನಾವು ನಿರ್ಧಾರಕ್ಕೆ ಬರುತ್ತೇವೆ ಅಥವಾ ಬೇಱೆ ಯಾರೋ ಹೇೞಿದ್ದನ್ನು ನಂಬುತ್ತೇವೆ. ಹಾಗಾಗಿ ಮೂಢನಂಬಿಕೆಗೆ ಒಳಗಾಗುತ್ತೇವೆ. ಒಂದು ವಿಚಾರವಾಗಿ ಆಮೂಲಾಗ್ರ ತಿಳಿಯಲು ಪ್ರಾರಂಬಿಸಿದ ಕೂಡಲೇ ಈ ಅಜ್ಞಾನ, ಭಯ, ನಂಬಿಕೆಗಳೆಲ್ಲ ಕರಗಿಹೋಗುತ್ತವೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ