ಭರತ ಖಂಡದ ಧ್ರುವತಾರೆ - ಆರ್ಯಭಟ್ಟ

'ಸೈನ್ - Sine' ಪದವು ಪ್ರಪ್ರಥಮವಾಗಿ ಆರ್ಯಭಟ್ಟರ 'ಆರ್ಯಭಟಿಯಂ' (ಕ್ರಿ.ಶ. 500) ಎಂಬ ವಿಶ್ವಕೋಶದಲ್ಲಿ ಕಾಣಸಿಕ್ಕಿತು. ಅವರು ಈ ಪದವನ್ನು Half Chordಕ್ಕೆ ಅರ್ಧ-ಜ್ಯ ಎಂದು ನಾಮಕರಿಸಿ, ತದನಂತರ ಅದನ್ನು ಕೇವಲ 'ಜ್ಯಾ' ಎಂದು ಸಂಕ್ಷಿಪ್ತಗೊಳಿಸಿ ಸರಳಗೊಳಿಸಿದರು. 'ಆರ್ಯಭಟಿಯಂ'ಅನ್ನು ಅರೇಬಿಕ್ಗೆ ಅನುವಾದಿಸಿದಾಗ, 'ಜ್ಯಾ' ಎಂಬ ಪದವನ್ನು 'ಜಿವಾ' ಎಂದು ಉಚ್ಚರಿಸಲಾಗುತ್ತದೆ. ಕೊನೆಗೆ, ಈ ಪದವು ಲ್ಯಾಟಿನ್ನಲ್ಲಿ 'ಸೈನಸ್' ಅರ್ಥಾತ 'ಬಾಗಿರುವಿಕೆ - Curve' ಎಂದು ಮರುನಾಮಕರಣಗೊಳಿಸಲಾಯಿತು. ಖಗೋಳಶಾಸ್ತ್ರದ ಪ್ರಾಧ್ಯಾಪಕರು ಎಡ್ಮಂಡ್ ಗುಂಟರ್ (1581-1626) ಇದನ್ನು ನಾವು ಈಗ ಬಳಸುತ್ತಿರುವ 'ಸೈನ್' ಎಂದು ಸಂಕ್ಷೀಪ್ತಗೊಳಿಸಿ ಸರಳಗೊಳಿಸಿದರು.
ಅಲ್ಲದೆ, 'ಕೊಸೈನ್ ಥೀಟಾ' ಎಂಬ ಪದವು 'ಕೋಟಿ-ಜ್ಯ' ಎಂಬ ಹೆಸರಿನಡಿ 'ಆರ್ಯಭಟಿಯಂ'ನಲ್ಲಿ ಕಂಡುಬರುತ್ತದೆ. "ಹಿತ್ತಲಿನ ಗಿಡ, ಮದ್ದಲ್ಲ" ಎಂಬ ಗಾದೆಯಂತೆ, ನಾವು ನ್ಯೂಟನ್, ಐನ್ಸ್ಟೈನ್ ಇತ್ಯಾದಿರವರ ಕುರಿತು ಪ್ರತಿನಿತ್ಯ ಓದುತ್ತೇವೆ; ನಮ್ಮದೇ ಮಣ್ಣಿನ ರತ್ನಗಳನ್ನು ಮರೆಯುತ್ತಿದ್ದೇವೆ.
-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ