ಭರದ್ವಾಜ ಮುನಿ

ಭರದ್ವಾಜ ಮುನಿ

ಬರಹ

ಬ್ರಹ್ಮನ ಅಯೋನಿಜ ಪುತ್ರ ದೇವರ್ಷಿ ಅಂಗೀರಾರಿಗೆ ಉತಥ್ಯ ಮತ್ತು ಬೃಹಸ್ಪತಿ ಎಂಬ ಇಬ್ಬರು ಗಂಡು ಮಕ್ಕಳು. ಉತಥ್ಯನ ಪತ್ನಿ ಮಮತಾಳೊಂದಿಗೆ ಬೃಹಸ್ಪತಿ ಸೇರಿ ಭರದ್ವಾಜರ ಜನನ ಆಯಿತು.
ಉತಥ್ಯನ ಕ್ಷೇತ್ರದಲ್ಲಿ ಬೃಹಸ್ಪತಿಯ ಬೀಜದಿಂದ ಜನಿಸಿದುದರಿಂದ ‘ದ್ವಾಜ’.
ದ್ವಾಜಂ ಭರ ಇತಿ ಭರದ್ವಾಜಃ .

ಇಂದ್ರನಿಂದ ಆಯುರ್ವೇದ ಅಧ್ಯಯನ ಮಾಡಿ, ಮನುಷ್ಯಲೋಕದಲ್ಲಿ ಸರ್ವಪ್ರಥಮ ಪ್ರಚಾರ ಮಾಡಿದ ವ್ಯಕ್ತಿ ಇವರು.

ಇವರ ಆಶ್ರಮ ಪ್ರಯಾಗದಲ್ಲಿತ್ತು. (ಈಗಿನ ಅಲ್ಲಹಾಬಾದ್-ಯು.ಪಿ). ಸಾವಿರಾರು ಶಿಷ್ಯರನ್ನು ಹೊಂದಿದ್ದರು.

ಗೋತ್ರ ಪ್ರವರ್ತಕ ಮುನಿ. (ವರ್ಮ,ಭರದ್ವಾಜ,ದತ್ತ..ಭರದ್ವಾಜ ಗೋತ್ರಕ್ಕೆ ಸೇರಿದವರು)

ತಪೋಬಲ,ರಸಾಯನ,ದಿವ್ಯೌಷಧಗಳ ಪ್ರಭಾವದಿಂದ ಮುನಿಗಳು ದೀರ್ಘಾಯು ಹೊಂದಿರುತ್ತಿದ್ದರು. ಕೃತಯುಗದ ಅಂತ್ಯದಿಂದ ದ್ವಾಪರದ ಅಂತ್ಯಕ್ಕೆ ಕೊಂಚ ಮೊದಲಿನವರೆಗೆ ಭರದ್ವಾಜರು ಜೀವಿಸಿದ್ದರು.