ಭವಿಷ್ಯದ ಹಾರುವ ಕಾರುಗಳು!

ಈ ಭವಿಷ್ಯದ ಕಾರುಗಳನ್ನು ನೀವೇ ಕಲ್ಪಿಸಿಕೊಳ್ಳಿ. ಆಕಾಶದಲ್ಲಿ ಹಾರುವ ಕಾರುಗಳು, ಅಲ್ಲಿ ಟ್ರಾಫಿಕ್ ಜಾಮ್ನ ತಲೆ ನೋವುಗಳಿಲ್ಲ. ಈ ಕಾರುಗಳ ಪ್ರಯಾಣ ಫೈಟ್ಗಳಲ್ಲಿ ಚಲಿಸಿದಂತೆ ಸ್ಮೂತ್ ಹಾರಾಟ ಕುಲುಕಾಟ-ಬಳುಕಾಟಗಳಿಲ್ಲ. ಇದೊಂದು ಘರ್ಷಾಣಾ ರಹಿತ ಚಾಲನೆ. ಬೇಕೆಂದಾಗ ಭೂಮಿಯ ಮೇಲೂ ಚಲಿಸಬಹುದು. ಅಬ್ಬಾ ಎಷ್ಟೊಂದು ವಿಸ್ಮಯದ ಹಾರಾಟ! ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಕನಸು ನನಸಾಗುವ ಕಾಲ ಸಾಕಾರಗೊಳ್ಳಲಿದೆ!
ಫೈಯಿಂಗ್ ಕಾರ್ ಇದೊಂದು ಸುಧಾರಿತ ಹಾಗೂ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಆಕಾಶದಲ್ಲಿ ಹಾರುವ ಕಾರು. ಇದು ರಸ್ತೆಯಲ್ಲಿ ಚಲಿಸುವ ಹಾಗೂ ಆಕಾಶದಲ್ಲಿ ಹಾರುವ ಎರಡೂ ಸಾಧ್ಯತೆಗಳನ್ನು ಹೊಂದಿದೆ. ಇದರಲ್ಲಿ ಚಾಲಕ ಹಾಗೂ ಪ್ರಯಾಣಿಕರು ರಸ್ತೆ ಹಾಗೂ ಆಕಾಶ ಎರಡರಲ್ಲೂ ಮನ ಬಿಚ್ಚಿ ಪ್ರಯಾಣಿಸಬಹುದು! ಇದು ಇಂದಿನ ಕಾರ್ ಪ್ರಯಾಣದ ಎಲ್ಲಾ ಜಂಜಡಗಳಿಂದ ಮುಕ್ತಗೊಳಿಸಬಹುದಾದ ಒಂದು ಅದ್ಭುತ ವ್ಯವಸ್ಥೆ, ಅತ್ಯಂತ ಜನ ನಿಬಿಡ ನಗರ ಪ್ರದೇಶಗಳಿಗೆ ಈ ಪ್ಲೆಯಿಂಗ್ ಕಾರ್ ' ಕಾರ್ ಒಂದು ವರದಾನವೇ ಸೈ।
ಫೈಯಿಂಗ್ ಕಾರ್ ನಿರ್ಮಾಣದ ಚಾಲೆಂಜ್ ಗಳು: ಈ ಕಾರ್ ನಿರ್ಮಾಣದಲ್ಲಿ ತಂತ್ರಜ್ಞರು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಮೊಟ್ಟ ಮೊದಲ ಸವಾಲು ಎಂದರೆ ಈ ಕಾರ್ ಪ್ರಯಾಣದ ಸುರಕ್ಷತೆ. ಇದು ರಸ್ತೆ ಮತ್ತು ಆಕಾಶಗಳೆರಡರಲ್ಲೂ ಚಲಿಸುವುದರಿಂದ ಎರಡೂ ಕಡೆಗಳಲ್ಲಿನ ಸುರಕ್ಷತಾ ಮಾನದಂಡಗಳು ಕಾರ್ ತಯಾರಕರಿಗೆ ಅನೇಕ ಸವಾಲುಗಳು ಮುಂದಿಟ್ಟಿವೆ. ಇನ್ನು ಇಂತಹ ಕಾರುಗಳ ಹಾರುವಿಕೆ ಮತ್ತು ಇಳಿಯುವಿಕೆ ( ಟೇಕ್ ಆಫ್ ಮತ್ತು ಲ್ಯಾಂಡಿಂಗ್) ಜನಸಂದಣಿ ನಗರಗಳಲ್ಲಿ ಅತ್ಯಂತ ದೊಡ್ಡ ಸಮಸ್ಯೆಯಾಗುವುದೂ ಅಷ್ಟೇ ನಿಜ. ವಿದ್ಯುತ್ ಕಾರುಗಳು ಈ ಹಾರಾಟಗಳಲ್ಲಿ ಸಮಸ್ಯೆಯನ್ನು ತಂದೊಡ್ಡಬಹುದು ಎಂಬುದೇ ದೊಡ್ಡ ಚಿಂತೆಯಾಗಿದೆ. ಇದಕ್ಕಾಗಿ ಅತ್ಯಂತ ಹೆಚ್ಚು ಶಕ್ತಿಯ ಬ್ಯಾಟರಿಗಳ ನಿರ್ಮಾಣ ಹಾಗೂ ಅತ್ಯಂತ ವೇಗವಾಗಿ ಚಾರ್ಜ್ ಮಾಡುವ ತಂತ್ರಜ್ಞಾನದ ಹುಡುಕಾಟದಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ. ಏಕೆಂದರೆ ಆಕಾಶದಲ್ಲಿ ಹಾರಾಡುವ ಕಾರು ಪದೇ ಪದೇ ಚಾರ್ಜ್ಗಾಗಿ ಹತ್ತಿ-ಇಳಿಯುವುದು ರೇಜಿನ ಸಂಗತಿ.
ಹಾರುವ ಕಾರಿನ ತಂತ್ರಜ್ಞಾನ
* ಲಂಬವಾಗಿ ಮೇಲೆ ಹಾರುವ ಮತ್ತು ಇಳಿಯುವ ತಂತ್ರಜ್ಞಾನ: ಈ ರೀತಿಯ ನೇರ ಲಂಬ ಹಾರಾಟಕ್ಕೆ ಅಥವಾ ಇಳಿಯುವಿಕೆಗೆ ಅಲ್ಲಲ್ಲಿ ಪಿಲ್ಲರ್ ಗಳ ನಿರ್ಮಾಣದ ಆವಶ್ಯಕತೆಯಿದೆ. ಇದರಿಂದ ರನ್ ವೇಗಳ ನಿರ್ಮಾಣದ ಅವಶ್ಯಕತೆ ಬೀಳುವುದಿಲ್ಲ.
* ವಿದ್ಯುತ್ ಶಕ್ತಿಯಿಂದ ಹಾರುವಿಕೆ, ಕೇವಲ 30 ಸೆಕೆಂಡ್ ಗಳಲ್ಲಿ 360 ಕಿ ಮೀ ವೇಗವನ್ನು ಪಡೆಯುವಂತಹ ಎಂಜಿನ್ ಗಳ ನಿರ್ಮಾಣದ ಕಾರ್ಯ ಶರವೇಗದಿಂದ ನಡೆಯುತ್ತಲಿದೆ.
* ಇದೊಂದು ಆಕಾಶಯಾನವಾಗಿರುವುದರಿಂದ ಇದಕ್ಕೇ ಬೇರೆಯದಾದ ಸಂಚಾರ ನಿಯಮಗಳ ಜಾಲವೇ ಬೇಕಾಗುತ್ತದೆ. ಇದಕ್ಕೊಂದು ಸ್ವಯಂ ಅತ್ಯಾಧುನಿಕ ಸಾಫ್ಟ್ವೇರ್ ತಂತ್ರಜ್ಞಾನವನ್ನು ರೂಪಿಸಬೇಕಾಗುತ್ತದೆ
* ಹಾರುವ ರೆಕ್ಕೆಗಳಿಂದ ಮೇಲೆ ಹಾರುವ ಕಾರು ಅದೇ ರೆಕ್ಕೆಗಳೊಂದಿಗೆ ನೆಲದ ಮೇಲೆ ಇಳಿದರೆ ಹೆಚ್ಚು ಜಾಗ ಬೇಕಾಗುವುದಲ್ಲದೆ ಅಪಘಾತದ ಭಯವೂ ಉಂಟು. ಇದಕ್ಕಾಗಿ ಸಂಶೋಧಕರು ಇಳಿಯುವಾಗ ಆ ರೆಕ್ಕೆಗಳು ಸ್ವಯಂಚಾಲಿತವಾಗಿ ಮಡಚಿಕೊಳ್ಳುವ ತಂತ್ರಜ್ಞಾನದ ಮೊರೆಹೋಗಲಿದ್ದಾರೆ.
* ಇದರ ಸುರಕ್ಷಿತ ಚಾಲನೆಗೆ ಅತ್ಯಾಧುನಿಕ ಜಿ ಪಿ ಎಸ್ ತಂತ್ರಜ್ಞಾನವನ್ನು ಅಳವಡಿಸಲಾಗುವುದು.
ಭಾರತ ಫೈಯಿಂಗ್ ಕಾರನ್ನು ಹೊಂದುವುದರಲ್ಲಿ ವಿಶ್ವದಲ್ಲೇ ಅತ್ಯಂತ ವೇಗದಲ್ಲಿ ಸಾಗುತ್ತಿದ್ದು 2025 ರ ವೇಳೆಗೆ ಭಾರತೀಯ ಫೈಯಿಂಗ್ ಕಾರುಗಳು ಆಕಾಶದಲ್ಲಿ ಹಾರಾಡಲಿವೆ! ಆಕಾಶದಲ್ಲಿ ಪಕ್ಷಿಗಳಂತೆ ಕಾರುಗಳು ಹಾರಾಡುವ ದೃಶ್ಯಗಳನ್ನು ಕಣ್ಣುಂಬಿಕೊಳ್ಳುವ ದಿನಗಳು ದೂರವಿಲ್ಲ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ