ಭಾಕರ್ ವಾಡಿ
ಬೇಕಿರುವ ಸಾಮಗ್ರಿ
ಮೈದಾ ಹಿಟ್ಟು - ೧ ಕಪ್, ಕಡಲೆ ಹಿಟ್ಟು - ೧ ಕಪ್, ಅಕ್ಕಿ ಹಿಟ್ಟು - ೧ ಕಪ್
ಮಸಾಲೆಗೆ: ಕೊತ್ತಂಬರಿ - ೩ ಚಮಚ, ಜೀರಿಗೆ - ೨ ಚಮಚ, ಶಾಜೀರಿಗೆ - ೨ ಚಮಚ, ಅರಸಿನ - ಅರ್ಧ ಚಮಚ, ಎಳ್ಳು - ೨ ಚಮಚ, ಮೆಣಸಿನ ಹುಡಿ - ೧ ಚಮಚ, ಒಣಕೊಬ್ಬರಿ ತುರಿ - ೪ ಚಮಚ, ಬಡೆಸೋಪು - ೧ ಚಮಚ, ದಾಲ್ಚಿನ್ನಿ - ೧, ಸಣ್ಣ ತುಂಡು ಇಂಗು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮಸಾಲೆ ಸಾಮಾಗ್ರಿಗಳನ್ನು ಬೇರೆಬೇರೆಯಾಗಿ ಹುರಿದು ಸೇರಿಸಿ ಹುಡಿ ಮಾಡಿಟ್ಟುಕೊಳ್ಳಿ. ಮೈದಾ, ಕಡಲೆ ಹಾಗೂ ಅಕ್ಕಿ ಹಿಟ್ಟುಗಳಿಗೆ ಅರಶಿನ, ಖಾರದ ಹುಡಿ, ಉಪ್ಪು, ಎರಡು ಚಮಚ ಬಿಸಿ ಎಣ್ಣೆ ಹಾಕಿ ಪೂರಿ ಹದಕ್ಕೆ ಗಟ್ಟಿಯಾಗಿ ಕಲಸಿ. ನಂತರ ಚಪಾತಿಯಂತೆ ಲಟ್ಟಿಸಿ, ಎಣ್ಣೆ ಸವರಿ, ಮಸಾಲೆ ಪುಡಿಯನ್ನು ಸಮನಾಗಿ ಹರಡಿ. ಮಸಾಲೆ ತುಂಬಿದ ಚಪಾತಿಯನ್ನು ಗಟ್ಟಿಯಾಗಿ ಸುರುಳಿಯಂತೆ ಸುತ್ತಿ, ಎರಡು ಇಂಚಿನಷ್ಟು ತುಂಡುಗಳನ್ನಾಗಿ ಕತ್ತರಿಸಿ, ಕಾಯಿಸಿದ ಎಣ್ಣೆಯಲ್ಲಿ ಕರಿದರೆ, ಸ್ವಾದಿಷ್ಟವಾದ ಭಾಕರ್ ವಾಡಿ ರೆಡಿ.