ಭಾನುವಿಗೆ ಮೊದಲೆದ್ದು ದೀಪ ಹಚ್ಚಿಟ್ಟಿದ್ದು...
ಕವನ
ಭಾನುವಿಗೆ ಮೊದಲೆದ್ದು ದೀಪ ಹಚ್ಚಿಟ್ಟಿದ್ದು
ಸಿಡಿಸುತ್ತ ಸಿಡಿಮದ್ದು ಬೆಳಕು ಶಬ್ದದ ಸದ್ದು
ತಮದೈತ್ಯ ಒಳಗಿದ್ದು ಜ್ಞಾನರವಿ ಮರೆಸಿದ್ದು
ನರಕಾರಿ ಕೊಂದಿದ್ದು ಮನುಜಬಯಸಿದ್ದು
ನರಕಾರಿ ಕೊಂದಿದ್ದು ಮನುಜಬಯಸಿದ್ದು
ವಾಮನರಲ್ಲ ನಾವ್ ತಿವಿಕ್ರಮ ಪ್ರವೃತ್ತಿ
ಬಲಿಮಸ್ತಕ ವಿಧ್ವoಸಕರನೊತ್ತಿ
ಕೃತಕಲಿಯುಗಭೇದ ಹಿಂದೊತ್ತಿ
ಅಮೃತತ್ವಸ್ಥಕ್ಕೆ ಪ್ರಾಪ್ತ ಶಕ್ತಿ
-ಚಿಂತಾಮಣಿ ರಮೇಶ್