ಭಾರತಕ್ಕೆ ಹಣ್ಣು ಮತ್ತು ತರಕಾರಿ ರಫ್ತಿಗಾಗಿ ಇರುವ ವಿಪುಲ ಅವಕಾಶಗಳು

ಭಾರತಕ್ಕೆ ಹಣ್ಣು ಮತ್ತು ತರಕಾರಿ ರಫ್ತಿಗಾಗಿ ಇರುವ ವಿಪುಲ ಅವಕಾಶಗಳು

ಸಸ್ಯಾಹಾರದ ಪ್ರಾಮುಖ್ಯತೆ ಬಗ್ಗೆ ವಿಶ್ವದಲ್ಲಿ ಹೆಚ್ಚಿನ ಜಾಗೃತಿ ಉಂಟಾಗಿದೆ. ಆಯುರ್ವೇದವು ಪರಿಣಾಮಕಾರಿ ಔಷಧ ಪದ್ಧತಿಯಾಗಿ ಪರಿಣಮಿಸಿದೆ. ಅಮೇರಿಕಾವು ತನ್ನ ಪ್ರಜೆಗಳಿಗೆ ಧಾನ್ಯ, ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸಿ ಮಾಂಸ ಸೇವನೆ ಪ್ರಮಾಣವನ್ನು ಕಡಿಮೆಗೊಳಿಸಲು ಸೂಚಿಸಿದೆ. ಯುರೋಪಿನಲ್ಲಿ ಹುಚ್ಚು ಕೆರಳಿಸುವ ಹಸುಗಳ ಖಾಯಿಲೆಯಿಂದ ಜನರು ವೇಗವಾಗಿ ಸಸ್ಯಾಹರದತ್ತ ಒಲಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತವು ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಉತ್ಪಾದಿಸಿ ರಫ್ತು ಮಾಡಲು ಇರುವ ವಿಫುಲವಾದ ಅವಕಾಶಗಳನ್ನು ಬಳಸಿಕೊಳ್ಳಬಹುದಾಗಿದೆ.

ರಫ್ತು ಮಾಡಬಹುದಾದ ವಸ್ತುಗಳು: ತರಕಾರಿಗಳು, ಹೂವುಗಳು (ಕಟ್ ಫ್ಲವರ್)  ಮತ್ತು ಹಣ್ಣುಗಳು ರಫ್ತು ಮಾಡಬಹುದಾದ ವಸ್ತುಗಳಾಗಿವೆ. ಗ್ರೀನ್‌ಹೌಸ್‌ನಲ್ಲಿ ಸ್ಟ್ರಾಬೆರಿಯನ್ನು ಉಷ್ಣದೇಶಗಳಲ್ಲಿ ಬೆಳೆಯುವಂತೆ ಯುರೋಪ್‌ನಲ್ಲಿ ಬೆಳೆಯುವುದು ಕಷ್ಟ ಮತ್ತು ವೆಚ್ಚವೂ ಅಧಿಕ. ಜಪಾನ್ ಮಾತ್ರ ೪೦೦೦ ಹೆಕ್ಟೇರ್ ಪ್ರದೇಶದಲ್ಲಿ ಇಂತಹ ಹಣ್ಣು ಬೆಳೆಯುವ ಹಸಿರುಮನೆ ವ್ಯವಸ್ಥೆ ಹೊಂದಿದೆ. ಈಗ ಮೆಕ್ಸಿಕೋ ಅಮೇರಿಕಾಕ್ಕೆ ಟೊಮೆಟೋ, ಕೊಲಂಬಿಯಾ ಕಟ್‌ ಪ್ಲವರ್‌ ನ್ನು ಇಸ್ರೇಲ್ ಹಣ್ಣು ಮತ್ತು ಹೂಗಳನ್ನು ಯುರೋಪಿಗೆ, ಕೆನ್ಯಾ ಹೂಗಳನ್ನು ಯೂರೋಪಿಗೆ ರಫ್ತು ಮಾಡುತ್ತಿವೆ. ಅಮೇರಿಕ ಮತ್ತು ಯುರೋಪಿನ ಅವಶ್ಯಕತೆಗಳಿಗನುಗುಣವಾಗಿ ಉನ್ನತ ತಂತ್ರಜ್ಞಾನಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕ ದರದಲ್ಲಿ ಪಾಲುದಾರರು, ಹೂಡಿಕೆದಾರರು ಮತ್ತು ಯುರೋಪಿನ ಆಮದುದಾರರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಈ ರಾಷ್ಟ್ರಗಳು ಹಣ್ಣು, ಹೂ ಮತ್ತು ತರಕಾರಿಗಳನ್ನು ರಫ್ತು ಮಾಡುತ್ತಿವೆ.

ಇಸ್ರೇಲಿಗೆ ಸಾಧ್ಯವಾಗುತ್ತಿರುವುದು ಭಾರತಕ್ಕೂ ಸಾಧ್ಯ: ಇಸ್ರೇಲ್‌ನಲ್ಲಿ ೯೦೦ ಬೆಳೆಗಾರರು ೧೧,೦೦೦-೦೦ ಟನ್ ಮಾವು ಬೆಳೆದು ೪೦೦೦ ಟನ್‌ಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಿದರೆ ೭೦೦೦ ಟನ್‌ಗಳನ್ನು ವರ್ಗೀಕರಣ, ಪ್ಯಾಕಿಂಗ್, ಲೇಬರಿಂಗ್‌ಗಳ ಮೂಲಕ ಮೌಲ್ಯವರ್ಧನೆಗೊಳಪಡಿಸಲಾಗುತ್ತದೆ. ಇದರಲ್ಲಿ ೫೦೦೦ ಟನ್‌ಗಳನ್ನು ರಫ್ತು ಮಾಡಿ ಉಳಿದಿದ್ದನ್ನು ಚಿಲ್ಲರೆ ಮಾರಾಟಕ್ಕೆ ಇಟ್ಟುಕೊಳ್ಳಲಾಗುತ್ತದೆ. ಆದೆ ಭಾರತ ೧೧ ಮಿಲಿಯನ್ ಟನ್ ಮಾವು ಬೆಳೆದು ಕೇವಲ ೪೫೦೦೦ ಮೆ.ಟನ್ ಮಾವನ್ನು ರಫ್ತು ಮಾಡುತ್ತಿದೆ. ಭಾರತವೂ ಇಸ್ರೇಲ್‌ನಂತೆ ಹಣ್ಣು ಮತ್ತು ತರಕಾರಿಗಳನ್ನು ರಫ್ತು ಮಾಡಲು ಸಾಧ್ಯವಿದೆ.

ಭಾರತಕ್ಕೆ ಇರುವ ಅನುಕೂಲತೆಗಳು: ಭಾರತ ಪ್ರಪಂಚದ ಶೇ.೨ರಷ್ಟು ಮಾತ್ರ ಭೂಪ್ರದೇಶ ಹೊಂದಿದ್ದರೂ ಶೇ.೬ ಜೈವಿಕ ವೈವಿದ್ಯತೆ ಹೊಂದಿದೆ. ಭಾರತವು ಹಣ್ಣುಗಳ ರಾಜ ಮಾವು ಜಾಗತಿಕ ಉತ್ಪಾದನೆಯಲ್ಲಿ ಶೇ.೬೦ರಷ್ಟು ಪಾಲನ್ನು ಹೊಂದಿದ್ದರೂ. ವಿಶ್ವದ ಮಾರುಕಟ್ಟೆಯನ್ನು ತಲುಪಲು ಸಾಧ್ಯವಾಗಿಲ್ಲ. ಪಾಕಿಸ್ತಾನ, ಫಿಲಿಪೈನ್ಸ್, ಮೆಕ್ಸಿಕೋ, ಇಸ್ರೇಲ್, ಬ್ರೆಜಿಲ್, ಪೆರು, ಚಿಲಿ, ನೈಜಿರಿಯಾ ಕೆನ್ಯಾ ಮತ್ತು ದಕ್ಷಿಣ  ಆಪ್ರಿಕಾಗಳು ಮಾವಿನ ರಫ್ತಿಗೆ ಸಂಬಂಧಿಸಿದಂತೆ ಭಾರತದ ಪ್ರತಿಸ್ಪರ್ಧಿಗಳು, ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ಒಂದೇ ಜಾತಿಯ ಮಾವನ್ನು ಈ ದೇಶಗಳು ಬೆಳೆಯುತ್ತಿವೆ. ಭಾರತದ ಹೆಚ್ಚಿನ ವೈವಿಧ್ಯಮಯ ಹಣ್ಣುಗಳು “ಭಾರತದಿಂದ ತರಿಸಲಾದ ಹಣ್ಣುಗಳು, ಎಂಬ ಲೇಬಲ್ಲಿನೊಂದಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಾರಲ್ಪಡಬಹುದಾದ ಎಲ್ಲಾ ಅವಕಾಶಗಳನ್ನು ಹೊಂದಿವೆ.

ತರಕಾರಿ ಮತ್ತು ಹಣ್ಣುಗಳು ವೈವಿದ್ಯತೆ ಮತ್ತು ಗುಣಧರ್ಮಗಳ ಬಗ್ಗೆ ಪ್ರಚಾರದ ಅವಶ್ಯಕತೆ: 

ಅ)ಮಾವನ್ನು ತಾಜಾ ಆಗಿ ತಿನ್ನಲು, ಜ್ಯೂಸ್ ಜಾಮ್ ಆಗಿ ಬಳಸಿ ಉಪಯೋಗಿಸಬಹುದು.

ಆ)ಬಾಳೆಹಣ್ಣನ್ನು  ವಿಟಮಿನ್ ಮತ್ತು ಲವಣಾಂಶಗಳುಳ್ಳ ಪೋಷಕ ಹಣ್ಣಾಗಿ ಬಳಸಬಹುದು

ಇ)ಲಿಂಬೆ ಆರೋಗ್ಯ ಹಾಗೂ ಸೌಂದರ್ಯದ ಮಾಧ್ಯಮ. ಲಿಂಬೆ ಜೇನು ಮಿಶ್ರಣದಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು.

ಈ)ಚಕ್ಕೋತಹಣ್ಣು ಲಿಂಬೆಗಿಂತ ಶೆ.೨೦ರಷ್ಟು ಹೆಚ್ಚು ವಿಟಮಿನ್ ಸಿ ಮತ್ತು ೨ ಕಿತ್ತಳೆ ಹಣ್ಣಿನಷ್ಟು ರಸವನ್ನು ಹೊಂದಿರುತ್ತದೆ.

ಉ)ಜಾಮ್ ಹಣ್ಣುಗಳಲ್ಲಿ ಕ್ಯಾಲೋರಿ ಮತ್ತು ಕಬ್ಬಿಣ ಅಂಶಗಳು ಇರುತ್ತವೆ.

ಊ)ಕೋಕಮ್ ಹಣ್ಣುಗಳು ಹೈಡ್ರಾಕ್ಸಿಸಿಟ್ರಿಕ್ ಅಸಿಡ್ ಹೊಂದಿದ್ದು, ಔಷಧಿಯ ಗುಣ ಹೊಂದಿದೆ.

ಋ)ಅತಿಸಾರದಲ್ಲಿ ಬಿಲ್ವ ಹಣ್ಣು ಅತಿ ಉಪಯುಕ್ತ.

ಎ)ಬೆಟ್ಟದ ನೆಲ್ಲಿಕಾಯಿಯಲ್ಲಿ ಹೆರಳವಾದ ಸಿ ಜೀವಸತ್ವವಿದೆ

ಏ)ಸೀತಾಫಲವು ಕಬ್ಬಿಣ ಮತ್ತು ಸಿ ಜೀವಸತ್ವ ಹೊಂದಿದೆ.

ಐ)ಕರಿಬೇವು, ಚಟ್ನಿ ಮತ್ತು ಸಾಂಬಾರು ಪದಾರ್ಥಗಳಲ್ಲಿ ಬಳಕೆಯಾಗುತ್ತಿದೆ.

ಇಂತಹ ಮೌಲ್ಯವರ್ಧಿತ ಉತ್ಪನ್ನಗಳು ಔಷಧೀಯ ಗುಣಗಳು ಜೀವಸತ್ವಗಳ ಬಗ್ಗೆ ಪರಿಣಿತ ಎಂ.ಎನ್.ಸಿ.ಗಳಿಂದ ಗ್ರಾಹಕರ ಅವಶ್ಯಕತೆಗಳಿಗನುಗುಣಗಳ ಬಗ್ಗೆ ವಿದೇಶಗಳಲ್ಲಿ  ವ್ಯಾಪಕ ಪ್ರಚಾರ ಮಾಡಬೇಕು.

ಹಣ್ಣಿನ ವಲಯಗಳ ಸ್ಥಾಪನೆ:- ಕೋಕಮ್, ಪನ್ನೇರಳೆ, ಹಲಸಿನ ಹಣ್ಣುಗಳ ವಿದ್ಯುನ್ಮಾನ ಸಂಸ್ಕರಣ ವಲಯಗಳನ್ನು ಮುಂಬೈ ಮತ್ತು ಕೊಚ್ಚಿಯಲ್ಲಿ ಸ್ಥಾಪಿಸಲಾಗಿದ್ದು, ಅವುಗಳ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇದೇ ರೀತಿ ಪ್ರತ್ಯೇಕ ಹಣ್ಣುಗಳಿಗೆ ಪ್ರತ್ಯೇಕ ವಲಯಗಳನ್ನು ಸ್ಥಾಪಿಸಬಹುದಾಗಿದೆ. ಇಲ್ಲಿ ಉತ್ಪಾದನೆ, ಸಂಸ್ಕರಣೆ, ಮಾರಾಟ ಮತ್ತು ಮೌಲ್ಯವರ್ಧನೆಗೆ ಸಂಯೋಜಿತ ಕಾರ್ಯಗಳು ನಡೆಯುತ್ತವೆ. ಭಾರತ ಹಣ್ಣುಗಳನ್ನು ವಿದೇಶಗಳಿಗೆ ರಫ್ತು ಮಾಡಬಹುದು.

ರಫ್ತಿಗಾಗಿ ಕಾರ್ಯಕ್ರಮಗಳು: 

ಅ)ಯುರೋಪ್, ಅಮೇರಿಕಾ ಮತ್ತು ಜಪಾನಿನ ಗ್ರಾಹಕರ ರುಚಿಗನುಗುಣವಾದ ತಳಿಗಳನ್ನು  ಬೆಳೆಯಬೇಕು.

ಆ)ಎಸ್.ಹೆಚ್.ಜಿ.ಗಳ ಸ್ಥಾಪನೆ, ಹೆಚ್ಚು ಒತ್ತಾಗಿ ಬೆಳೆಯುವುದು, ಹನಿ ನೀರಾವರಿ  ಪೋಷಕಾಂಶಗಳ ಅಭಿವೃದ್ಧಿಗಳನ್ನು ಉತ್ತೇಜಿಸಬಹುದು.

ಇ)ಗುಣಮಟ್ಟದ ವ್ಯವಸ್ಥೆಗಳಾದ ಐ.ಎಸ್.ಓ. ೯೦೦೦/ಸಮಸ್ಯೆಗಳ ವಿಶ್ಲೇಷಣೆ ಮತ್ತು ಪರಿಹಾರ, ಸಮಸ್ಯೆಗಳ ನಿಯಂತ್ರಣ ವಿಧಾನಗಳು ರಫ್ತಿಗೆ ಅವಶ್ಯಕ.

ಈ)ವೇಪರ್‌ಟ್ರೀಟ್‌ಮೆಂಟ್ ನೀಡಿ ಕೀಟಗಳನ್ನು ನಾಶಪಡಿಸಿ ಯೂರೋಪ್ ಮಾರುಕಟ್ಟೆಯಲ್ಲಿ  ಹಣ್ಣುಗಳನ್ನು ಮಾರಬಹುದು.

ಉ)ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಪ್ರಚಾರಪಡಿಸಬೇಕು.

ಊ)ಹಣ್ಣು ಮತ್ತು ತರಕಾರಿ ರಫ್ತಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು.

ಸಮಸ್ಯೆಗಳು: ಆಹಾರ ಭದ್ರತೆ, ಗುಣಮಟ್ಟ, ಕ್ರಿಮಿರಹಿತ ಹಣ್ಣುಗಳನ್ನು ರಫ್ತು ಮಾಡುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು. ಜೈವಿಕ, ರಾಸಾಯನಿಕ ಸ್ವಚ್ಛತೆ ಹಾಗೂ ಸುಂಕದ ಸಮಸ್ಯೆಗಳನ್ನು ನಿವಾರಿಸಬೇಕು. ಶೈತ್ಯಾಗಾರಗಳನ್ನು ರೈತರಿಂದ ಅಂಗಡಿ ತನಕ ವಿಸ್ತರಿಸಬೇಕು. ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವ ವಿಜ್ಞಾನಿಗಳು, ರೈತರು, ಸರ್ಕಾರಿ ಸಂಸ್ಥೆಗಳು, ಒಟ್ಟಾಗಿ ಸೇರಿ ಇಸ್ರೇಲ್‌ನಂತೆ ರಾಷ್ಟ್ರ ಪ್ರೇಮದಿಂದ ಕಾರ್ಯನಿರ್ವಹಿಸಬೇಕು. ಗ್ರಾಹಕ ಶಿಕ್ಷಣ ಮತ್ತು ಚಿನ್ಹೆ ಮತ್ತು ಬ್ರಾಂಡ್‌ನೇಮ್‌ಗಳ ಮೂಲಕ ಮಾರುಕಟ್ಟೆಯನ್ನು ವಿದೇಶಿಗಳಲ್ಲಿ ವಿಸ್ತರಿಸಬೇಕು.

ಮಾಹಿತಿ : ರಾಧಾಕೃಷ್ಣ ಹೊಳ್ಳ

ಚಿತ್ರ ಕೃಪೆ: ಅಂತರ್ಜಾಲ ತಾಣ