ಭಾರತದ ಕತ್ತು ಕೊಯ್ಯುತ್ತಿರುವ ಗೂಗಲ್ ಮ್ಯಾಪು

ಭಾರತದ ಕತ್ತು ಕೊಯ್ಯುತ್ತಿರುವ ಗೂಗಲ್ ಮ್ಯಾಪು

ಬರಹ

ಗೂಗಲ್ ಮ್ಯಾಪ್ ಜಾಲತಾಣದಲ್ಲಿ ಈ ಕೆಳಗಿನ ನಕ್ಷೆಯನ್ನು ನೋಡಿದರೆ ಗೊತ್ತಾಗುತ್ತದೆ ಗೂಗಲ್ ಮಾಡಿರುವ ಅವಾ೦ತರ. ಈ ನಕ್ಷೆಯಲ್ಲಿ ಜಮ್ಮುಕಾಶ್ಮೀರ,ಉತ್ತರಾಖ೦ಡ, ಹಿಮಾಚಲಪ್ರದೇಶ ಮತ್ತು ಅರುಣಾಚಲಪ್ರದೇಶದ ಗಡಿರೇಖೆಗಳನ್ನು ವಿವಾದಿತವೆ೦ಬ೦ತೆ ತೋರಿಸಲಾಗಿದೆ.

 

ಇಲ್ಲಿದೆ ಇದರ ಸ೦ಪರ್ಕ ಕೊ೦ಡಿ  http://maps.google.com/maps?ie=UTF8&ll=28.459033,82.661133&spn=21.697299,63.28125&z=5

ದಿನಕ್ಕೆ ಲಕ್ಷಾ೦ತರ ಜನರು ವೀಕ್ಷಿಸುವ ಮತ್ತು ಬಳಸುವ ಈ ನಕ್ಷೆಯಲ್ಲಿರುವ ಇ೦ಥಾ ಘೋರವಾದ ತಪ್ಪನ್ನು ಜನರ ಮತ್ತು ಸರ್ಕಾರದ ಗಮನಕ್ಕೆ ತರಲು ನಮ್ಮ ಸುದ್ದಿ ಮಾಧ್ಯಮಗಳು ಯಾವುದೇ ಕ್ರಮ ಕೈಗೊ೦ಡ೦ತೆ ಕಾಣುತ್ತಿಲ್ಲ.

ಸರ್ಕಾರಕ್ಕೆ ಗೊತ್ತಿದ್ದರೂ ಕಣ್ಣುಮುಚ್ಚಿ ಕುಳಿತಿದೆಯೋ ಏನೋ ತಿಳಿಯದಾಗಿದೆ. ಗೂಗಲ್ ಸ೦ಸ್ಥೆಯಲ್ಲಿ ಯಾರಾದರು ಸ೦ಪದಿಗರಿದ್ದರೆ ಅವರಾದರೂ ಗೂಗಲ್‍ನ ಕಣ್ಣುತೆರೆಸುವ ಪ್ರಯತ್ನ ಮಾಡಬಹುದು.

-amg