ಭಾರತದ ವಿಜ್ಞಾನಿಗಳಿಗೆ ಚಂದ್ರನ ಅಧ್ಯಯನದಲ್ಲಿ ಆಸಕ್ತಿ ಏಕೆ?
ಇಸ್ರೋ 'ಚಂದ್ರಯಾನ ಅಭಿಯಾನ'ಕ್ಕೆ ಅತೀಯಾದ ಮಹತ್ವ ಏಕೆ ನೀಡುತ್ತಿದೆ? ಹಾಗೆಯೇ, ಚಂದ್ರಯಾನ-4ರ ವಿಶೇಷತೆಗಳೇನು? ರವಿ ಕಾಣದ್ದನ್ನು, ಕವಿ ಕಂಡಂತೆ; ಜಗತ್ತಿನ ಅತ್ಯಂತ ಆಧುನಿಕ ತಂತ್ರಜ್ಞಾನ ಹೊಂದಿದ್ದ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ 'ನಾಸಾ' ಪತ್ತೆ ಹಚ್ಚದ ಯಾವ ಅಂಶ ಬಹಳ ಕಡಿಮೆ ಬಜೆಟಿನಲ್ಲಿ ಇಸ್ರೋ ಪತ್ತೆ ಹಚ್ಚಿ ಸಾಧನೆ ಮಾಡುತ್ತಿದೆ? ಇಸ್ರೋ ನಡೆಸಿದ ಅತ್ಯಂತ ದುಬಾರಿ ಬಾಹ್ಯಾಕಾಶ ಅಭಿಯಾನಯಾದ: 'ಅಪೋಲೋ ಅಭಿಯಾನ'ವು ಬೆಟ್ಟ ಅಗೆದು ಇಲಿ ಹಿಡಿದಂತೆ, ನಿಜವಾಗಿಯೂ ಊಹಿಸಿದಂತೆ ಸಫಲವಾಗಲಿಲ್ಲವೇ?
ಚಂದ್ರನ ಮೇಲೆ ಸ್ವಯಂಚಲಿತ ಲ್ಯಾಂಡರ್ ಇಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದ ಇಸ್ರೋ, ಇದೀಗ ಚಂದ್ರನಿಂದ ಮಾದರಿ ಸಂಗ್ರಹಿಸುವ ಕುರಿತು ಕನಸು ಕಾಣುತ್ತಿದೆ! ಚಂದ್ರಯಾನ-4 ಅನ್ನು 2028ರಲ್ಲಿ ನೌಕೆಯನ್ನು ಉಡಾವಣೆ ಮಾಡಲು ಇಸ್ರೋ ಯೋಜಿಸಿದೆ. ಚಂದ್ರಯಾನ ಅಭಿಯಾನದ ಪ್ರಯುಕ್ತ ನಡೆಸಿದ ಮೊದಲ ಯೋಜನೆಯಾದ ಚಂದ್ರಯಾನ-1ರ ಬಾಹ್ಯಾಕಾಶ ನೌಕೆಯು ಚಂದ್ರನ ಸುತ್ತ 3400ಕ್ಕೂ ಹೆಚ್ಚು ಕಕ್ಷೆಗಳನ್ನು ಸುತ್ತುವರಿದಿತ್ತು; ಚಂದ್ರಯಾನ-1 ಆಗಸ್ಟ್ 29, 2009ರವರೆಗೆ 312 ದಿನಗಳ ಕಾಲ ಕಾರ್ಯನಿರ್ವಹಿಸಿ, ಭೂಮಿಯೊಂದಿಗೆ ಸಂಪರ್ಕವನ್ನು ತಪ್ಪಿಸಿತ್ತು.
ಚಂದ್ರಯಾನ 2 ವಿಫಲಗೊಂಡಿತ್ತು; ಮೂರನೇ ಚಂದ್ರಯಾನವು ಸಫಲವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಹಾಗೆಯೇ, ಈ ನಾಲ್ಕನೇ ಚಂದ್ರಯಾನವು ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸಿ ಮರಳಿ ಭೂಮಿಗೆ ತರುವ ಯೋಜನೆಯಾಗಿದೆ! ಇದು ಲ್ಯಾಂಡರ್, ರೋವರ್ ಗಳೊಂದಿಗೆ ಮರುಉಡಾವಣೆ ವಾಹನವನ್ನು ಒಳಗೊಂಡಿರಲಿದೆ. ಚಂದ್ರನ ಅಂಗಳದಲ್ಲಿ ತಲುಪಿ, ಅಲ್ಲಿಂದ ಮಾದರಿಗಳನ್ನು ಸಂಗ್ರಹಿಸಿ, ಪುನಃ ಉಡಾವಣೆ ಮಾಡಿ ಭೂಮಿಗೆ ಮರಳಿದೆ ಎಂದು ಇಸ್ರೋ ಮಾಧ್ಯಮಗಳಿಗೆ ತಿಳಿಸಿದೆ; ಅಂದಹಾಗೆ, ಮುಂದಿನ ಒಂದೂವರೆ ವರ್ಷದಲ್ಲಿ ಇದು ಜಾರಿಯಾಗುವ ಸಾಧ್ಯತೆ ಇದೆ ಎಂದೂ ಇಸ್ರೋ ಸುಳಿವು ನೀಡಿದೆ. ಇದು ಇಸ್ರೋ ನಡೆಸುವ 'ಚಂದ್ರಯಾನ ಅಭಿಯಾನ'ದ ಪ್ರಯುಕ್ತ ಇದು ನಾಲ್ಕನೇ ಯೋಜನೆಯಾಗಿದೆ; ಇದು ಕೇವಲ 2104 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.
ಅಂದಹಾಗೆ, ಈ ಯೋಜನೆಯನ್ನು ಕೈಗೊಳ್ಳಲು ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿ ಪ್ರೋತ್ಸಾಹಿಸಿದೆ. ಕೇಂದ್ರ ಸಚೀವ ನೀಡಿದ ಅನುಮೋದನೆಯು ನೌಕೆಯ ನಿರ್ಮಾಣ, ಪರೀಕ್ಷೆ, ಉಡಾವಣೆಯ ವೆಚ್ಚ... ಎಲ್ಲವನ್ನು ಒಳಗೊಂಡಿದೆ. ಚಂದ್ರಯಾನ-4 ತನ್ನ ಉದ್ದೇಶವನ್ನು ಪೂರೈಸುವಲ್ಲಿ ಯಶಸ್ವಿಯಾದರೆ, ಈ ಸಾಧನೆ ಮಾಡಿದ 5ನೇ ದೇಶ ಎಂಬ ಖ್ಯಾತಿ ಭಾರತಕ್ಕೆ ಸಿಗಲಿದೆ.
ಹಿಂದೆ, ರಷ್ಯಾ, ಅಮೆರಿಕಾ, ಜಪಾನ್, ಮತ್ತು ಚೀನಾ ದೇಶವು ಚಂದ್ರದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತರುವಲ್ಲಿ ಯಶಸ್ವಿಗೊಂಡಿದೆ. ಚಂದ್ರಯಾನ-1 ಚಂದ್ರನ ಮೇಲೆ ನೀರಿನ ಕುರುಹುಗಳನ್ನು ಕಂಡುಹಿಡಿದಿತ್ತು; ಅದೊಂದು ವರ್ಣಿಸಲಾಗದ ಸಾಧನೆಯಾಗಿದೆ. ಚಂದ್ರಯಾನ-1 ಚಂದ್ರನ ಉತ್ತರ ಧ್ರುವ ಪ್ರದೇಶದಲ್ಲಿ ನೀರಿನ ಮಂಜುಗಡ್ಡೆಯನ್ನು ಕಂಡುಹಿಡಿಯುವಲ್ಲೂ ಸಫಲಗೊಂಡಿತ್ತು; ಹಾಗೆಯೇ, ಅದು ಚಂದ್ರನ ಮೇಲ್ಮೈಯಲ್ಲಿ ಮೆಗ್ನೀಶಿಯಮ್, ಅಲ್ಯೂಮಿನಿಯಂ, ಮತ್ತು ಸಿಲಿಕಾನ್ ಅನ್ನು ಸಹ ಪತ್ತೆ ಮಾಡಿತ್ತು.
ಚಂದ್ರನು ರೂಪುಗೊಂಡ ಮತ್ತು ವಿಕಸನಗೊಂಡ ವಿಧಾನವನ್ನು ಅರ್ಥಮಾಡಿಕೊಳ್ಳುವುದರಿಂದ, ಭೂಮಿಯು ಸೇರಿದಂತೆ ಸೌರವ್ಯೂಹದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ ಎಂದು ಇಸ್ರೋ ಖಗೋಳಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಹಾಗಾಗಿ, ಅವರು ಚಂದ್ರದ ಕುರಿತು ಅಧ್ಯಯನ ನಡೆಸಲು ಅಷ್ಟು ಉತ್ಸುಕ್ತರಾಗಿರುವುದು!
ಅಮೆರಿಕಾದ ಅತ್ಯಂತ ಸಿರಿವಂತ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಇಲ್ಲಿಯವರೆಗೆ ಚಂದ್ರನ ಮೇಲೆ ಒಟ್ಟು 38 ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನಗಳನ್ನು ಮಾಡಲು ಯತ್ನಿಸಿತ್ತು; ಆದರೆ, ದುರಾದೃಷ್ಠವಾತ್, ಅದರ ಯಶಸ್ಸಿನ ಪ್ರಮಾಣ ಕೇವಲ 52% ಆಗಿದೆ. ಅದಕ್ಕೆ ತದ್ವಿರುದ್ಧವಾಗಿ ಭಾರತದ ಇಸ್ರೋ ಸಂಸ್ಥೆಯೂ ಅತ್ಯಂತ ಕಡಿಮೆ ವೆಚ್ಚದಲ್ಲಿ ತನ್ನ ಯೋಜನೆಗಳನ್ನು ಸಫಲಗೊಳಿಸಿ ನಾಸಾಗೆ ಮಾದರಿಯಾಗುತ್ತಿದೆ.
ನಾಸಾ ಮತ್ತು ಇತರ ಬಾಹ್ಯಾಕಾಶ ಸಂಸ್ಥೆಗಳು ಚಂದ್ರನ ಮೇಲೆ ತಮ್ಮ ನೌಕೆಗಳನ್ನು ಚಂದ್ರನ ಉತ್ತರ ಧ್ರುವಕ್ಕೆ ಇಳಿಸಿತ್ತು; ಆದರೆ, ಚಂದ್ರಯಾನ-3 ಚಂದ್ರನ ಭೂಮಿಯಿಂದ ದೂರದಲ್ಲಿರುವ ಧ್ರುವವಾದ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸವನ್ನೇ ರಚಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಹತ್ತು ಹಲವು ಪತ್ತೆಹಚ್ಚಲಾಗದ ಮಾಹಿತಿಗಳಿವೆ. ಉದಾಹರಣೆಗೆ: ಚಂದ್ರಯಾನ-3 ಚಂದ್ರದ ಮೇಲೆ ಸಂಭವಿಸಿದ ನೆಲನಡುಗಿನ ಕುರಿತು ಚಿತ್ರಗಳನ್ನು ಕ್ಲಿಕ್ಕಿಸಿ, ನಾಸಾ ಪತ್ತೆ ಹಚ್ಚಲಾಗದ ಅಂಶಗಳನ್ನು ಜಗತ್ತಿಗೆ ತೋರಿಸಿಕೊಟ್ಟಿತು!
ನಿಜಕ್ಕೂ, ಚಂದ್ರನ ಕುರಿತು ಜಗತ್ತಿನಾದ್ಯಂತ ನಡೆಯುತಿರುವ ಅಧ್ಯಯನಗಳಿಗೆ ಭಾರತದ ಇಸ್ರೋ ಮಹತ್ವಪೂರ್ಣ ಕೊಡುಗೆ ನೀಡುತ್ತಿದೆ. ಇದೆಲ್ಲರ ನಡುವೆ, ಇಸ್ರೋ 2040ರೊಳಗೆ ಮಾನವಸಹಿತ ಚಂದ್ರಯಾನಕ್ಕೂ ಪೂರ್ವಭಾವಿ ಸಿದ್ಧತೆ ನಡೆಸುತ್ತಿದೆ. ಇಸ್ರೋ ಹಮ್ಮಿಕೊಳ್ಳುವ ಚಂದ್ರಯಾನದ ಅಭಿಯಾನಗಳು ಸಫಲವಾಗಲಿ ಎಂಬುವುದು ನಮ್ಮೆಲ್ಲರ ಶುಭ ಹಾರೈಕೆಯಾಗಿದೆ!
3.85 ಬಿಲಿಯನ್ ವರ್ಷ ಹಳೆಯ ಬಾಂಬುಕುಳಿಯ ಮೇಲೆ ಚಂದ್ರಯಾನ-3 ಲ್ಯಾಡಿಂಗ್...!
ಚಂದ್ರಯಾನ-3 ಲ್ಯಾಂಡ್ ಆಗಿದ್ದ ಚಂದ್ರನ ನೆಲದ ಭಾಗವು ಐತಿಹಾಸಿಕವಾಗಿದೆ. ನೆಕ್ಟೇರಿಯನ್ ಯುಗದಲ್ಲಿ ರೂಪುಗೊಂಡಿದ್ದ ಬಾಂಬುಕುಳಿಯ ಮೇಲೆ ಚಂದ್ರಯಾನ ಲ್ಯಾಂಡ್ ಆಗಿದ್ದು. ಆ ಬಾಂಬುಕುಳಿ ಚಂದ್ರನ ಮೇಲಮೈಯಲ್ಲಿರುವ ಅತ್ಯಂತ ಹಳೆಯ ಬಾಂಬುಕುಳಿ. ಆ ಬಾಂಬುಕುಳಿಯ ಮೇಲೆ ಇದೇ ಪ್ರಪ್ರಥಮ ಬಾರಿಗೆ ಉಪಗ್ರಹವೊಂದು ಲ್ಯಾಂಡ್ ಆಗಿದ್ದು. ಇದರಿಂದ ಚಂದ್ರನ ಹುಟ್ಟು ಮತ್ತು ರೂಪುಗೊಳ್ಳುವಿಕೆಯನ್ನು ಅಧ್ಯಯನ ಮಾಡಬಹುದು. ಧೂಮಕೇತುವೊಂದು ಬಡಿದ ಕಾರಣ ಆ ಬಾಂಬುಕುಳಿ ರೂಪುಗೊಂಡಿದ್ದು ಎಂದು ಅಂದಾಜು. ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಇಸ್ರೋ ವಿನ Physical Research Laboratoryಯ ಅಭಿಪ್ರಾಯ.
-ಶಿಕ್ರಾನ್ ಶರ್ಫುದ್ದೀನ್ ಎಂ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ