ಭಾರತರತ್ನ ಬಾಬಾ ಸಾಹೇಬ

ಭಾರತರತ್ನ ಬಾಬಾ ಸಾಹೇಬ

ಕವನ

ಭಾರತರತ್ನ ಬಾಬಾ ಸಾಹೇಬ ಅಂಬೇಡ್ಕರ

ಭಾರತ ದೇಶದ ಹೆಮ್ಮೆಯ ಹರಿಕಾರ

ಬಾಲ್ಯದಲಿ ಸಂಕಟಪಟ್ಟ  ಬಾಲಕ ವೀರ

ಅಸ್ಪೃಶ್ಯತೆಯಲಿ ನೊಂದು ಬೆಂದ ಧೀರ

 

ವಿದ್ಯೆಯೇ ಎಲ್ಲದಕೂ ಮೂಲಾಧಾರವಿರಲಿ

ಕೃಷಿ ಸಂಪತ್ತು ಜೀವನದ ಆಧಾರವಾಗಿರಲಿ

ಒಗ್ಗಟ್ಟಿನ ತಳಪಾಯದ ಗುರಿಕಾರನಾಗಿ

ದೀನ ದಲಿತರ ಬಾಳಿನ ಆಶಾಕಿರಣವಾಗಿ

 

ಸಂವಿಧಾನ ಶಿಲ್ಪಿ ಎನಿಸಿ ಬಾಳಿದಿರಿ

ಅರ್ಥ ನ್ಯಾಯ ಕೋಶಗಳ ಅರೆದು ಕುಡಿದಿರಿ

ಭಾರತ ದೇಶದ ಹೆಮ್ಮೆಯ ಪುತ್ರರಾದಿರಿ

ಚಿಂತನೆಯ ಆಳ ಅಗಲವರಿತು ವ್ಯವಹರಿಸಿದಿರಿ

 

ಸಮಾನತೆ ಸ್ವಾತಂತ್ರ್ಯದ ಬೀಜಮಂತ್ರ ಸಾರಿದಿರಿ

ಗುಲಾಮಗಿರಿಗೆ ತಿಲಾಂಜಲಿಯಿತ್ತಿರಿ

ಜಾತ್ಯಾತೀತ ರಾಷ್ಟ್ರದ ಕನಸು ಕಂಡಿರಿ

ಮೀಸಲಾತಿಗೆ ಒತ್ತು ನೀಡಿದಿರಿ

 

ಸಾಮಾಜಿಕ ಸಂಘರ್ಷದ ಒಳಗುದಿ ಅರಿತಿರಿ

ನ್ಯಾಯ ನೀತಿ ರೀತಿಯಲಿ ಬದುಕಿದಿರಿ

ಶೋಷಣೆಯ ಹುಡುಕಿ ಖಂಡಿಸಿದಿರಿ

ನೆನೆವೆವೀದಿನ ಬಾಬಾ ಸಾಹೇಬರ ವ್ಯಕ್ತಿತ್ವವನ್ನು

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್