ಭಾರತಾಂಬೆಯ ಮಡಿಲು

ಭಾರತಾಂಬೆಯ ಮಡಿಲು

ಕವನ

ಭಾರತಾಂಬೆಯ ಮಡಿಲು

ಭಾರತೀಯನ ಉಸಿರು

ಭಾರತದ ನೆಲಜಲಕೆ ನಮಿಸೋಣವೆಂದು

ಹಸಿರು ಮನೆಯಾ ಚೆಲುವು

ಸುತ್ತೆಲ್ಲ ಹರಡಿರಲು

ಕೃಷಿ ಭೂಮಿಯೊಳಗೆ ನಲಿಯೋಣವೆಂದು

 

ಚಿಂತನೆಯ ನೆಲದೊಳಗೆ

ಎಲ್ಲರೊಂದೇಯೆನುತ

ಕೈಹಿಡಿದು ಸಾಗುತಿರೆ ಒಲುಮೆ ಸಿರಿಯು

ಸೂರ್ಯಕಾಂತಿಯ‌ ಬೆಳಕು

ಮೇಲಿಂದ ಚೆಲ್ಲಿರಲು

ಕೋಗಿಲೆಯ ಗಾನದೊಳು ಸೃಷ್ಟಿ ಚೆಲುವು

 

ಯೋಗಿ ಯೋಗಗಳೆಡೆ

ಮಿಂದಿರುವ ದೇಶವಿದು

ಸಾಗರದ ತೀರದೊಳು ಕಂಗೊಳಿಪ ನಾಡು

ನಗುವೊಳಗೆ ನಲಿವಿರಲು

ಎಲ್ಲರೊಳು ಗೆಲುವಿರಲಿ

ಭರತಭೂಮಿಯ ಜೊತೆಗೆ ನಮ್ಮ ಬದುಕು

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್