ಭಾರತೀಯ ವನ್ಯಜೀವಿ ಸಂಸ್ಥೆ- ಅರ್ಜಿ ಆಹ್ವಾನ
M.Sc. ವನ್ಯಜೀವಿ ವಿಜ್ಞಾನ ವಿಭಾಗ ಸೇರ್ಪಡೆ, ಅರ್ಜಿ ಆಹ್ವಾನ (2013-2015)
ವನ್ಯಜೀವಿ ಸಂರಕ್ಷಣೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ, ಭಾರತೀಯ ವನ್ಯಜೀವಿ ಸಂಸ್ಥೆ (WII),ಡೆಹ್ರಾಡೂನ್, ಪ್ರಸ್ತುತ 2013-2015ನೇ ಸಾಲಿನ ವನ್ಯಜೀವಿ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸುತ್ತಿದೆ.
ಭಾರತೀಯ ವನ್ಯಜೀವಿ ಸಂಸ್ಥೆಯು ವನ್ಯಜೀವಿ ಸಂರಕ್ಷಣೆ, ಸಂಶೋಧನೆ, ನಿರ್ವಹಣಾ ಕ್ಷೇತ್ರದಲ್ಲಿ ತರಬೇತಿಯ ಒಂದು ಪ್ರಮುಖ ರಾಷ್ಟ್ರೀಯ ಸಂಸ್ಥೆಯಾಗಿದೆ. ಸಂಸ್ಥೆಯ ಸಹಜವಾದ ಪರಿಸರ ಮತ್ತು ರಾಜ್ಯದ ಮೂಲಭೂತ ಕಲೆಯು ಪಾಂಡಿತ್ಯಪೂರ್ಣ ಕೆಲಸಕ್ಕಾಗಿ ಒಂದು ರೋಮಾಂಚಕ ಶೈಕ್ಷಣಿಕ ವಾತಾವರಣ ಒದಗಿಸುತ್ತದೆ. ಸಂಸ್ಥೆಯು ನಿರಂತರವಾಗಿ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮವಾದ ಅವಕಾಶವನ್ನು ಒದಗಿಸಲು ಶ್ರಮಿಸುತ್ತಿದೆ. M.Sc. ವನ್ಯಜೀವಿ ವಿಜ್ಞಾನ ವಿಭಾಗವು ಸಂಸ್ಥೆಯ ಪ್ರಮುಖ ವಿಭಾಗವೂ ಆಗಿದ್ದು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯವಾಗಿ ವ್ಯಾಪಕ ಮೆಚ್ಚುಗೆಯನ್ನು ಪಡೆದಿದೆ. ಈ ವಿಭಾಗವು ವನ್ಯಜೀವಿ ವಿಜ್ಞಾನದಲ್ಲಿ ಸೈದ್ಧಾಂತಿಕ ಜ್ಞಾನ, ವಿಶ್ಲೇಷಣಾ ಕುಶಲತೆ ಮತ್ತು ಕ್ಷೇತ್ರ ತಂತ್ರಗಳನ್ನು ನೀಡಲು ಉದ್ದೇಶಿಸಿದೆ.
ಎರಡು ವರ್ಷದ Wildlife Science in M.Sc. (affiliated to Saurashtra University, Rajkot, Gujarat) ವಿಭಾಗಕ್ಕೆ ಅರ್ಜಿಯನ್ನು ಅಹ್ವಾನಿಸಲಾಗಿದ್ದು, ರಾಷ್ಟ್ರೀಯ ಪ್ರವೇಶ ಪರೀಕ್ಷೆ (NET) ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ವರ್ಷದ ಕೋರ್ಸ್ 2013, ಜೂನ್ ನಲ್ಲಿ ಈ ಸಂಸ್ಥೆಯಲ್ಲಿ ಪ್ರಾರಂಭಗೊಳ್ಳಲಿದೆ. ಹದಿನಾಲ್ಕು ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶವಿರುತ್ತದೆ.
ಸೀಟು ಹಂಚಿಕೆಗಳು ಈ ಕೆಳಗಿನಂತಿವೆ:
ಸಾಮಾನ್ಯ ಅಭ್ಯರ್ಥಿಗಳು - 6;SC/ST ಅಭ್ಯರ್ಥಿಗಳು-2; ST ಅಭ್ಯರ್ಥಿಗಳು - 1; OBC ಅಭ್ಯರ್ಥಿಗಳು - 3; ವಿದೇಶಿ ಅಭ್ಯರ್ಥಿಗಳು - 2.
ಭಾರತೀಯ ಮೀಸಲಾತಿ ಕಾನೂನು ಈ ಸಂಸ್ಥೆಗೆ ಅನ್ವಯಿಸುತ್ತದೆ, ಇದರಿಂದಾಗಿ ಸೀಟುಗಳ ಹಂಚಿಕೆ ಸಂಖ್ಯೆ ಯನ್ನು ಅಸ್ಥಿತ್ವದಲ್ಲಿರುವ ಸರ್ಕಾರ ಹೆಚ್ಚಿಸುವ ಸಾಧ್ಯತೆಯೂ ಇರಬಹುದು.
SC / ST ಅಭ್ಯರ್ಥಿಗಳಿಗೆ ಲಿಖಿತ ರಾಷ್ಟ್ರೀಯ ಪರೀಕ್ಷೆ ಗೆ ಬರಲು ಬೇಕಾಗುವ ರೈಲು ಟಿಕೆಟ್ ದರವನ್ನು (III ಶ್ರೇಣಿ ಸ್ಲೀಪರ್), ಡೆಹ್ರಾಡೂನ್ NET ಸೆಂಟರ್ಗೆ ತಾವು ವಾಸಿಸುವ ಸ್ಥಳದಿಂದ ಹತ್ತಿರವಿರುವ ರೈಲು ಮಾರ್ಗದ ಮೂಲಕ ಉಚಿತವಾಗಿ ಒದಗಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ನಿಗದಿತ ರೂಪದಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11 ಮಾರ್ಚ್ 2013 (ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಮಾರ್ಚ್ 04, 2013 ರ ಒಳಗಾಗಿ ಸಲ್ಲಿಸಬೇಕು. )
ಮೂಲ ಸುದ್ದಿಗಾಗಿ:
http://www.conservationindia.org/events/wildlife-institute-of-india-%E2%80%94-admission-to-m-sc-course-in-wildlife-science-2013-2015
ಹೆಚ್ಚಿನ ವಿವರಗಳಿಗೆ:
http://210.212.84.115/xivmsc-announcement.htm