ಭಾರತೀಯನೆಂಬ ಹೆಮ್ಮೆ
ಕವನ
ಬಾಲಕ ನರೇಂದ್ರ ತುಂಬಾ ಜಾಣ
ಅಮ್ಮನ ವಾತ್ಸಲ್ಯದ ಮೂರುತಿ
ಶ್ರೀಕೃಷ್ಣನಂತೆ ಜಗದ ಸಾರಥಿ
ಹಿಡಿದ ಕೆಲಸವ ಸಾಧಿಸಿದ ಕೀರುತಿ
ಪ್ರತಿಯೊಬ್ಬರು ಗುರು ಗೋವಿಂದರಾಗಿ
ಸ್ನೇಹ ಹಸ್ತವ ಚಾಚುತ ಸಾಗಿ
ಕಾಡುಮೃಗಗಳ ಬುದ್ಧಿಯ ತ್ಯಜಿಸಿ
ಉತ್ತಮರಾಗಿ ಜೀವನ ನಡೆಸಿ
ನಿರ್ದಿಷ್ಟ ಗುರಿಯು ಎದುರಿಗೆಯಿರಲಿ
ಬೆನ್ನಹಿಂದೆ ಕಲಿಸುವ ಗುರುವಿರಲಿ
ಮೋಸ ವಂಚನೆ ಅಹಮಿಕೆ ಬೇಡ
ಕರುಣೆಯ ಮೂರುತಿ ಕಡಲು ನೋಡ
ದಾಸ್ಯದ ಬದುಕು ಹೀನಾಯವೆಂದರು
ತೋಳ್ಬಲದಲಿ ನಂಬಿಕೆ ಶ್ರದ್ಧೆ ಬಿಂಬಿಸಿದರು
ವಿಶ್ವ ಸಂಸ್ಕೃತಿ ಅರಿಯಿರೆಂದರು
ಸಂಸ್ಕಾರ ಶಿಕ್ಷಣ ಪಡೆಯಿರೆಂದರು
ಅಂತರಂಗದ ಚಕ್ಷು ತೆರೆಯಿರಿ
ದೀನ ದಲಿತರ ಸಲಹಿ ಪೊರೆಯಿರಿ
ನಿಸರ್ಗವನು ಹಾಳುಗೆಡಹದಿರಿ
ವೇದ ಉಪನಿಷತ್ ಪುರಾಣ ಓದಿರಿ
ಭಗವದ್ಗೀತೆಯ ಸಾರ ಅರಿಯಿರಿ
ಸತ್ಯ ನ್ಯಾಯ ಧರ್ಮಗಳು ತಳಪಾಯ ತಿಳಿಯಿರಿ
ದೇಶಕಾಗಿ ತ್ಯಾಗಿಗಳಾಗಿ ಬಡವರ ನೆರಳಾಗಿ
ಭಾರತೀಯನೆಂಬ ಹೆಮ್ಮೆಯಲಿ ಜೀವಿಸುವ ಯೋಗಿಗಳಾಗಿ
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್