ಭಾರತೀಯರಿಂದ ಭಾರತೀಯರಿಗಾಗಿ ಒಂದು ಉಚಿತ ವೆಬ್ ಬ್ರೌಸರ್
ಬರಹ
ಎಲ್ಲಾ ಕನ್ನಡಿಗರಿಗೂ ಹಾಗೂ ಭಾರತೀಯರಿಗೂ ಒಂದು ಖುಷಿಯ ವಿಚಾರ.
ಹೀಗೆಯೇ ಅಂತರ್ಜಾಲದಲ್ಲಿ ಜಾಲಾಡುತ್ತಿರುವಾಗ ಸಿಕ್ಕಿದ ಸುದ್ದಿ. ನನಗಂತೂ ಹೊಸದು. ಹೀಗಾಗಿ ಸಂಪದದಲ್ಲಿ ಹಂಚಿಕೊಳ್ಳುವ ಮನಸ್ಸು ಮಾಡಿದ್ದೇನೆ.
ಬೆಂಗಳೂರು ಮೂಲದ ಹಿಡನ್ ರಿಫ್ಲೆಕ್ಸ್ ಎಂಬ ಕಂಪನಿಯು "ಎಪಿಕ್" ಹೆಸರಿನ ವೆಬ್ ಬ್ರೌಸರ್ ಅನ್ನು ಅಭಿವೃದ್ಧಿಪಡಿಸಿದೆ. ಆಂತರಿಕವಾಗಿ ಅಳವಡಿಸಿದ anti-virus, ಭಾರತೀಯ ಭಾಷೆಗಳಲ್ಲಿ ಬರೆಯುವ transliteration ಸೌಲಭ್ಯ, ಸೈಡ್ ಬಾರ್ ಐಕನ್, ಇತ್ಯಾದಿ ಆಕರ್ಷಣೆಗಳಿವೆ. ಇದೊಂದು open source (ಹಾಗೂ ಉಚಿತ) ತಂತ್ರಾಂಶವಾಗಿದ್ದು ವಿಶೇಷವಾಗಿ ಭಾರತೀಯ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಉಚಿತ ಡೌನ್ಲೋಡ್ ಗಾಗಿ ಭೇಟಿ ಕೊಡಿ: http://www.epicbrowser.com/