ಭಾರತೀಯ ಚಿತ್ರಕಲೆ - ಭಾಗ 3
ಪಟ ಚಿತ್ರಕಲೆ
ಇದು ಒರಿಸ್ಸಾದ ಚಿತ್ರಕಲೆ. ಇವನ್ನು ಪಟ ಎಂಬ ಬೋರ್ಡಿನಲ್ಲಿ ಚಿತ್ರಿಸುತ್ತಾರೆ. ಇವು ಶ್ರೀ ಜಗನ್ನಾಥ ದೇವರು ಮತ್ತು ಇತರ ಹಿಂದೂ ಧಾರ್ಮಿಕ ಕತೆಗಳಿಗೆ ಸಂಬಂಧಿಸಿದ ಪ್ರಸಂಗಗಳನ್ನು ಒಳಗೊಂಡಿರುತ್ತವೆ. ಜಾನಪದ, ಪ್ರಾಣಿಗಳು ಮತ್ತು ಹಕ್ಕಿಗಳಿಗೆ ಸಂಬಂಧಿಸಿದ ಚಿತ್ರಗಳೂ ಇರುತ್ತವೆ.
ಪ್ರಾಕೃತಿಕ ವಸ್ತುಗಳನ್ನೇ ಬಳಸಿ, ಕೆಂಪು, ಹಳದಿ ಮತ್ತು ಹಸುರು ಬಣ್ಣಗಳಲ್ಲಿ ಚಿತ್ರಗಳ ರಚನೆ. ಚಿತ್ರಗಳ ಮೂಲರೇಖೆಗಳು ಕಪ್ಪು ಬಣ್ಣದಲ್ಲಿರುತ್ತವೆ. ಚಿತ್ರಪಟದ ಅಂಚುಗಳು ಮತ್ತು ಮುಖ್ಯಚಿತ್ರದ ಹೊರತಾಗಿ ಉಳಿದ ಜಾಗವನ್ನು ಗಿಡಗಳು ಮತ್ತು ಹೂವಿನ ಚಿತ್ರಗಳು ತುಂಬುತ್ತವೆ. (ನೋಡಿ: ಕುದುರೆ ಚಿತ್ರ)
ಪೈತಾನ್ ಚಿತ್ರಕಲೆ
ಮಹಾರಾಷ್ಟ್ರದ ಪೈತಾನ್ ಪಟ್ಟಣ ಈ ಚಿತ್ರಕಲೆಯ ಮೂಲ. ಸುಮಾರು ಎರಡು ದಶಕಗಳಿಂದೀಚೆಗೆ ಇದನ್ನು ಚಿತ್ರಕಥಿ ಎಂದು ಹೆಸರಿಸಲಾಗಿದೆ. ಈ ಚಿತ್ರಕಾರರು ಸಂಗೀತಗಾರರೂ ಆಗಿರುತ್ತಾರೆ. ಈ ಚಿತ್ರಗಳನ್ನು, ಕಲಾವಿದರು ಹಳ್ಳಿಯಿಂದ ಹಳ್ಳಿಗೆ ಹೊತ್ತೊಯ್ದು, ಪ್ರದರ್ಶನ ನೀಡುತ್ತಾರೆ. ಹಾಡುತ್ತಾ, ಒಂದೊಂದೇ ಚಿತ್ರ ತೋರಿಸುತ್ತಾ ಕತೆ ಹೇಳುತ್ತಾರೆ. ಅವೆಲ್ಲ ರಾಮಾಯಣ ಮತ್ತು ಮಹಾಭಾರತದ ಕತೆಗಳು. (ನೋಡಿ: ಹುಲಿ ಚಿತ್ರ)
ಚಿತ್ರ ಕೃಪೆ: ಗೀತಿಕಾ ಜೈನ್ ಅವರ “ಬರ್ಡ್ಸ್ ಆಂಡ್ ಆನಿಮಲ್ಸ್ ಇನ್ ಇಂಡಿಯನ್ ಆರ್ಟ್” ಪುಸ್ತಕ