ಭಾರತ-ಪಾಕಿಸ್ತಾನಗಳು ಒಂದೇ ದೇಶವಾಗಬಾರದೇ?
ಬರಹ
ಭಾರತ ಮತ್ತು ಪಾಕಿಸ್ತಾನಗಳ ಸಂಬಂಧದ ಬಗ್ಗೆ ಮಾತನಾಡುವಾಗ ನಾವು ಎರಡು ಅಮೂರ್ತ ರಾಷ್ಟ್ರ-ಪ್ರಭುತ್ವಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಚರ್ಚಿಸುವುದೇ ಹೆಚ್ಚು. ಇದರ ಆಚೆಗೆ ಹೋಗಿ ಪಾಕಿಸ್ತಾನದಲ್ಲಿ ಇರುವವರು ನಮ್ಮಂಥ ಮನುಷ್ಯರೇ ಎಂದು ಚಿಂತಿಸಿದರೆ ನಮಗೆ ಸಿಗುವ ಚಿತ್ರಣವೇ ಬೇರೆ.
ಅಂದರೆ ಭಾರತ-ಪಾಕಿಸ್ತಾನಗಳ ರಾಜತಾಂತ್ರಿಕ ಸಂಬಂಧಗಳು, ಈಗಿನ ಜಾಗತಿಕ ರಾಜಕಾರಣದ ಒತ್ತಡಗಳನ್ನೆಲ್ಲಾ ಬಿಟ್ಟರೆ ಒಂದೇ ದೇಶವಾಗಿರಬೇಕಿದ್ದ ಆದರೆ ದುರದೃಷ್ಟವಶಾತ್ ಎರಡು ದೇಶಗಳಾಗಿ ಒಡೆದುಕೊಂಡಿರುವ ಜನತೆ ತುಮುಲಗಳು ಅರ್ಥವಾಗುತ್ತವೆ.
ಇಂಥದ್ದೊಂದು ಮಹತ್ವದ ವಿಷಯಕ್ಕೆ ಸಂಬಂಧಿಸಿದಂತೆ ಡಾ.ಯ.ಆರ್. ಅನಂತಮೂರ್ತಿಯವರು ಬಹಳ ಚೆನ್ನಾಗಿ ಬರೆದಿದ್ದಾರೆ. ತಮ್ಮ ವೈಯಕ್ತಿಕ ಅನುಭವವನ್ನು ಬಳಸಿಕೊಂಡು ಭಾರತ-ಪಾಕ್ ಸಂಬಂಧಗಳ ಇನ್ನೊಂದು ರೀತಿಯಲ್ಲಿಯೂ ಇರಬಹುದು. ಇವು ಎರಡು ದೇಶಗಳಾಗಿಯೂ ಒಂದೇ ದೇಶವಾಗುವ ಸಾಧ್ಯತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಸಂಪದದಲ್ಲಿಯೇ ಇರುವ ಅವರ ಬ್ಲಾಗ್ನಲ್ಲಿ ಈ ಲೇಖನಗಳಿವೆ